ಇಂದು 2025 ರ ಅಕ್ಟೋಬರ್ 30 ರಂದು (ಗುರುವಾರ) ದ್ವಾದಶ ರಾಶಿಗಳ ಫಲಾಫಲ ಕುರಿತು ಖ್ಯಾತ ವಾಸ್ತು ತಜ್ಞ ಹಾಗೂ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಮಾಹಿತಿ. ಈ ದಿನವು ವಿಶ್ವ ವಸುನಾಮ ಸಂವತ್ಸರ, ದಕ್ಷಿಣಾಯಣ, ಕಾರ್ತಿಕ ಮಾಸ, ಶರದೃತು, ಶುಕ್ಲಪಕ್ಷ ನವಮಿ, ಶ್ರವಣ ನಕ್ಷತ್ರ, ಗಂಡಯೋಗ ಮತ್ತು ಬಾಲವಕರಣದಿಂದ ಕೂಡಿದೆ. ರಾಹುಕಾಲ ಮಧ್ಯಾಹ್ನ 1:30 ರಿಂದ 2:58 ರವರೆಗೆ ಇದ್ದರೆ, ಸರ್ವಸಿದ್ಧಿ ಕಾಲ ಸಂಕಲ್ಪಕಾಲ ಅಥವಾ ಶುಭಕಾಲವು ಮಧ್ಯಾಹ್ನ 12:03 ರಿಂದ 1:29 ರವರೆಗೆ ಇರುತ್ತದೆ. ಈ ದಿನವನ್ನು ಕೃತ ಯುಗಾದಿ, ಕೂಷ್ಮಾಂಡ ನವಮಿ ಹಾಗೂ ವಿಶ್ವ ಮಿತವ್ಯಯ ದಿನ ಎಂದು ಪರಿಗಣಿಸಲಾಗಿದೆ, ಗುರುಗಳ ಲಹರಿಗಳ ಪರ್ವ ದಿನ ಕೂಡ ಆಗಿದೆ.