ಕಿಚ್ಚ ಸುದೀಪ್ (ಸುದೀಪ್) ಅವರು ನಟನೆಯಿಂದ ಎಲ್ಲರ ಮನ ಗೆದ್ದವರು. ಕನ್ನಡದಲ್ಲಿದೆ, ಪರಭಾಷೆಯಲ್ಲೂ ಅವರಿಗೆ ಬೇಡಿಕೆ ಸೃಷ್ಟಿಯಾಗಿದೆ. ವಿಲನ್ ಪಾತ್ರ ಮಾಡಿ ಪರಭಾಷೆಯಲ್ಲೂ ಗಮನ ಸೆಳೆದವರು ಸುದೀಪ್. ಕಿಚ್ಚ ಸುದೀಪ್ ಅವರು ಅದ್ಭುತವಾದ ಹಾಡು ಹೇಳುತ್ತಾರೆ. ಅವರ ಕಂಠಕ್ಕೆ ಅನೇಕರು ಮನ ಸೋತಿದ್ದಾರೆ ಎಂದರೂ ತಪ್ಪಾಗಲಿಕ್ಕಿಲ್ಲ. ಅವರ ಹಳೆಯ ಹಾಡೊಂದು ಈಗ ವೈರಲ್ ಆಗಿದೆ. ಇದು ‘ಹುಚ್ಚ’ ಸಿನಿಮಾದ ಸಮಯದಲ್ಲಿ ಹಾಡಿದ್ದು ಎನ್ನಲಾಗುತ್ತಿದೆ.
‘ಹುಚ್ಚ’ ಸಿನಿಮಾ 2001ರಲ್ಲಿ ರಿಲೀಸ್ ಆಯಿತು. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಚಿತ್ರ ಸುದೀಪ್ ಅವರಿಗೆ ಬೇರೆಯದೇ ರೀತಿಯ ಯಶಸ್ಸನ್ನು ನೀಡಿತು. ಈ ಚಿತ್ರದಲ್ಲಿ ಬರೋ ಯೇಸು ದಾಸ್ ಹಾಡಿದ ‘ಯಾರೋ ಯಾರೋ ಗೀಚಿ ಹೋದ..’ ಹಾಡು ಕೂಡ ಜನ ಮನ ಗೆದ್ದಿತು. ಈ ಹಾಡು ಜನರಿಗೆ ಸಾಕಷ್ಟು ಇಷ್ಟಪಟ್ಟರು. ಕಿಚ್ಚ ಸುದೀಪ್ ಅವರು ಈ ಹಾಡನ್ನು ಮನಸ್ಫೂರ್ತಿಯಾಗಿ ಹಾಡಿದ್ದರು.
ಸುದೀಪ್ ಅವರಿಗೆ ಅಂದಿನಿಂದಲೂ ಹಾಡಿನ ಬಗ್ಗೆ ಸಾಕಷ್ಟು ಆಸಕ್ತಿ ಇದೆ. ಅವರು ವೇದಿಕೆ ಮೇಲೆ ಅವಕಾಶ ಸಿಕ್ಕರೆ ಹಾಡಿಯೇ ಹಾಡುತ್ತಾರೆ. ಅದೇ ರೀತಿ ‘ಹುಚ್ಚ’ ಸಿನಿಮಾದ ‘ಯಾರೋ ಯಾರೋ..’ ಹಾಡನ್ನು ಅದ್ಭುತವಾಗಿ ಹಾಡಿದ್ದರು. ಆ ಸಮಯದಲ್ಲಿ ಸುದೀಪ್ ಅವರಿಗೆ ‘ಹುಚ್ಚ’ ಸಿನಿಮಾದ ಗೆಟಪ್ ನಲ್ಲಿ ಬಂದು ಗುಲಾಬಿ ಹೂ ನೀಡಿದ್ದರು ಮತ್ತು ಸುದೀಪ್ ಅವರು ಇದನ್ನು ಖುಷಿಯಿಂದ ಸ್ವೀಕರಿಸಿದ್ದರು.
ಇದನ್ನೂ ಓದಿ
ಸುದೀಪ್ ಹೇಳಿದ ಹಳೆಯ ಹಾಡು
‘ಹುಚ್ಚ’ ಸಿನಿಮಾದಲ್ಲಿ ಸುದೀಪ್ ಅವರು ಸಚ್ಚಿದಾನಂದ/ ಕಿಚ್ಚ ಹೆಸರಿನ ಪಾತ್ರ ಮಾಡಿದ್ದರು. ಅಂದಿನಿಂದ ಸುದೀಪ್ ಅವರು ಕಿಚ್ಚ ಎಂದೆಂದೂ ಫೇಮಸ್ ಆದರು. ಅದರಲ್ಲಿ ಸುದೀಪ್ ಅವರು ಹುಚ್ಚನ ಗೆಟಪ್ ಅಲ್ಲಿ ಕಾಣಿಸಿಕೊಂಡಿದ್ದರು. ಇದು 1999ರಲ್ಲಿ ತಮಿಳಿನಲ್ಲಿ ಬಂದ ‘ಸೇತು’ ಚಿತ್ರದ ರಿಮೇಕ್ ಆಗಿದೆ.
ಇದನ್ನೂ ಓದಿ: ಪುನೀತ್ ಹಾಗೂ ಸುದೀಪ್ ಗೆಳತಿ ಹೇಗಿತ್ತು? ಇಲ್ಲಿದೆ ಅಪರೂಪದ ವಿಚಾರ
ಸುದೀಪ್ ಅವರು ಸದ್ಯ ‘ಮಾರ್ಕ್’ ಚಿತ್ರದ ಕೆಲಸದಲ್ಲಿ ಬ್ಯೂಸಿ ಇದ್ದಾರೆ. ‘ಬಿಲ್ಲ ರಂಗ ಭಾಷಾ’ ಸಿನಿಮಾ ಕೆಲಸಗಳು ಬಾಕಿ ಇವೆ. ಅವರು ಬಿಗ್ ಬಾಸ್ ಕೂಡ ನಡೆಸುತ್ತಿದ್ದಾರೆ. ‘ಮಾರ್ಕ್’ ಸಿನಿಮಾ ಡಿಸೆಂಬರ್ನಲ್ಲಿ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.