Headlines

ಸುಳ್ಳು ಸುದ್ದಿಗೆ ಬ್ರೇಕ್‌ ಹಾಕಿದ ಟಾಕ್ಸಿಕ್‌ ಚಿತ್ರತಂಡ: ಕೊನೆಗೂ ಯಶ್ ಸಿನಿಮಾದ ಚಿತ್ರೀಕರಣ ಪೂರ್ಣ!

ಸುಳ್ಳು ಸುದ್ದಿಗೆ ಬ್ರೇಕ್‌ ಹಾಕಿದ ಟಾಕ್ಸಿಕ್‌ ಚಿತ್ರತಂಡ: ಕೊನೆಗೂ ಯಶ್ ಸಿನಿಮಾದ ಚಿತ್ರೀಕರಣ ಪೂರ್ಣ!

ಸುಳ್ಳು ಸುದ್ದಿಗೆ ಬ್ರೇಕ್‌ ಹಾಕಿದ ಟಾಕ್ಸಿಕ್‌ ಚಿತ್ರತಂಡ: ಕೊನೆಗೂ ಯಶ್ ಸಿನಿಮಾದ ಚಿತ್ರೀಕರಣ ಪೂರ್ಣ!

ಯಶ್‌ ಅಭಿನಯದ ‘ಟಾಕ್ಸಿಕ್‌’ ಚಿತ್ರದ ವಿಎಫ್‌ಎಕ್ಸ್‌ ಕೆಲಸ ನಡೆಯುತ್ತಿದ್ದು, ಸದ್ಯದಲ್ಲೇ ಈ ಕೆಲಸ ಕೂಡ ಪೂರ್ಣಗೊಳ್ಳಲಿದೆ ಎನ್ನುವ ಮಾಹಿತಿ ಬಂದಿದೆ. ಟಾಕ್ಸಿಕ್‌ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ.

ಯಶ್‌ ಅಭಿನಯದ ‘ಟಾಕ್ಸಿಕ್‌’ ಚಿತ್ರದ ಕೆಲಸಗಳು ಎಲ್ಲಿಯವರೆಗೂ ಬಂದಿದೆ ಎನ್ನುವ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಚಿತ್ರಕ್ಕೆ ಅಂದುಕೊಂಡಂತೆ ಬಹುತೇಕ ಶೂಟಿಂಗ್‌ ಮುಗಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಹಂತಕ್ಕೆ ಬಂದಿದೆ.

ಸದ್ಯಕ್ಕೆ ಚಿತ್ರಕ್ಕೆ ವಿಎಫ್‌ಎಕ್ಸ್‌ ಕೆಲಸ ನಡೆಯುತ್ತಿದ್ದು, ಸದ್ಯದಲ್ಲೇ ಈ ಕೆಲಸ ಕೂಡ ಪೂರ್ಣಗೊಳ್ಳಲಿದೆ ಎನ್ನುವ ಮಾಹಿತಿ ಬಂದಿದೆ. ಟಾಕ್ಸಿಕ್‌ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ. ಸಿನಿಮಾ ಫೂಟೇಜ್‌ ನೋಡಿರುವ ಯಶ್‌ ಅವರಿಗೆ ಸಮಾಧಾನ ತಂದಿಲ್ಲ ಎನ್ನುವ ಸುದ್ದಿಯೊಂದು ಸೋಷಿಯಲ್‌ ಮೀಡಿಯಾಗಳಲ್ಲಿ ಸುದ್ದಿಯಾಗುತ್ತಿತ್ತು.

ಟಾಕ್ಸಿಕ್‌ ಚಿತ್ರದ ವಿಎಫ್‌ಎಕ್ಸ್‌ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ವಿಎಫ್‌ಎಕ್ಸ್‌ ಕೆಲಸ ಮಾಡುತ್ತಿರುವ ಪ್ರಣಿಲ್‌ ದೇಶ್​ಮುಖ ಎಂಬುವವರು ಇದಕ್ಕೆ ಸ್ಪಷ್ಟನೆ ನೀಡಿ, ಟಾಕ್ಸಿಕ್‌ ಚಿತ್ರದ ಬಗ್ಗೆ ಹಬ್ಬಿರುವ ಸುಳ್ಳು ಸುದ್ದಿ ನೋಡಿದರೆ ನಗು ಬರುತ್ತದೆ. ನನ್ನ ಸಹೋದ್ಯೋಗಿಗಳು ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ತೊಡಗಿದ್ದಾರೆ.

ಆದರೆ, ಯಶ್‌ ಬಗ್ಗೆ ಆಗದೆ ಇರುವವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದಿದ್ದಾರೆ. ಗೀತು ಮೋಹನ್‌ದಾಸ್‌ ನಿರ್ಮಾಣದ, ಕೆವಿಎನ್‌ ಪ್ರೊಡಕ್ಷನ್‌ ಹಾಗೂ ಯಶ್‌ ಜೊತೆಗೂಡಿ ನಿರ್ಮಿಸುತ್ತಿರುವ ಈ ಚಿತ್ರವು 2026ರ ಮಾರ್ಚ್‌ 19ರಂದು ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.

ಇನ್ನು ಬರೋಬ್ಬರಿ 600 ಕೋಟಿ ರೂ. ಬಜೆಟ್‌ನಲ್ಲಿ ʼಟಾಕ್ಸಿಕ್‌ʼ ನಿರ್ಮಾಣವಾಗುತ್ತಿದೆ ಎನ್ನಲಾಗಿದ್ದು, ಇಂಗ್ಲಿಷ್‌ನಲ್ಲೂ ಮೂಡಿ ಬರುತ್ತಿರುವ ಕಾರಣ ಹಾಲಿವುಡ್‌ ಶೈಲಿಯ ಮೇಕಿಂಗ್‌ ಒಳಗೊಂಡಿದೆ. ಇದೇ ಕಾರಣಕ್ಕೆ ಚಿತ್ರೀಕರಣ ಸ್ಪಲ್ಪ ನಿಧಾನವಾಗುತ್ತಿದೆ.

Source link

Leave a Reply

Your email address will not be published. Required fields are marked *