ಯುರೋಪಿನ ಮೊದಲ ಹಿಂದೂ ಕಲ್ಲಿನ ದೇವಾಲಯಕ್ಕೆ ಬ್ರಿಟನ್ನ ರಾಜ ಮತ್ತು ರಾಣಿ ಭೇಟಿ ನೀಡಿದರು. ದೇವಾಲಯ 30ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ರಾಜ ಚಾರ್ಲ್ಸ್ III (ಕಿಂಗ್ ಚಾರ್ಲ್ಸ್) ಹಾಗೂ ಅವರ ಪತ್ನಿ ರಾಣಿ ಕ್ಯಾಮಿಲ್ಲಾ ಅವರ ಜೊತೆಗೆ ಶ್ರೀ ಸ್ವಾಮಿನಾರಾಯಣ ಮಂದಿರಕ್ಕೆ ಭೇಟಿ ನೀಡಿದರು. ದೇವಾಲಯದ ಮುಂದೆ ದಂತಿಗಳಿಬ್ಬರು ನಿಂತಿರುವ ಫೋಟೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಜ ಚಾರ್ಲ್ಸ್ III ದೇವಾಲಯದ ಆರಾಧಕರು ಹಾಗೂ ಅಧ್ಯಕ್ಷರು, ಇತರ ಸಿಬ್ಬಂದಿಗಳನ್ನು ಭೇಟಿ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಡಿ ಫೆಲಿಕ್ಸ್ ಪ್ರಾಜೆಕ್ಟ್ ಮತ್ತು ವುಮೆನ್ ಆಫ್ ದಿ ವರ್ಲ್ಡ್ ಬಗ್ಗೆಯೂ ಉಲ್ಲೇಖಿಸಲಾಗಿದೆ. ರಾಜ ಚಾರ್ಲ್ಸ್ III ಮತ್ತು ರಾಣಿ ಕ್ಯಾಮಿಲ್ಲಾ ದೇವಾಲಯದ ಒಳಗೆ ನಡೆದ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದಾರೆ.
ಇನ್ನು ದೇವಾಲಯದ ಪುರೋಹಿತರು ರಾಜ ಮತ್ತು ರಾಣಿಯ ದೇವಾಲಯದಲ್ಲಿ ಗುಲಾಬಿ ಮತ್ತು ಕಾರ್ನೇಷನ್ ಮಾಲೆ ಹಾಕಿ ಸ್ವಾಗತಿಸಿದ್ದಾರೆ. ಇನ್ನು ಬ್ರಿಟಿಷ್ ದೂರೆ ಕ್ರಿಶ್ಚಿಯನ್ ಸಮುದಾಯದ ಸಂಪ್ರದಾಯವನ್ನು ಅನುಸರಿಸಿದ್ರೂ, ದೇವಾಲಯದಲ್ಲಿ ಪವಿತ್ರ ದಾರವನ್ನು ಕೈಗೆ ಕಟ್ಟಿಕೊಂಡಿದ್ದಾರೆ. ಇವರ ದೇವಾಲಯಕ್ಕೆ ಭೇಟಿ ನೀಡಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆದಿದೆ. ಹಿಂದೂ ದೇವಾಲಯಕ್ಕೆ ಬ್ರಿಟಿಷ್ ದೊರೆ ಭೇಟಿ ನೀಡಿರುವ ಬಗ್ಗೆ ಟೀಕಿಸಿದ್ದಾರೆ. ಬ್ರಿಟಿಷ್ ದೊರೆಗಳು ಹಿಂದೂ ದೇವಾಲಯಕ್ಕೆ ಅಲ್ಲ ಚರ್ಚ್‌ಗೆ ಭೇಟಿ ನೀಡಿದ್ದೇನೆ ಎಂದು ಟೀಕಿಸಿದ್ದಾರೆ. ಇನ್ನು ಕೆಲವರು ಈ ಭೇಟಿಯನ್ನು ಪ್ರಶಂಸಿಸಿದ್ದಾರೆ.
ಇದನ್ನೂ ಓದಿ: ನಾಲ್ಕು ನಿಮಿಷ ಮೊದಲೇ ಯಾಕೆ ಲಾಗ್ ಔಟ್ ಆಗಿದ್ದೀರಾ? ಎಚ್ ಆರ್ ಪ್ರಶ್ನೆಗೆ ಉದ್ಯೋಗಿ ತಬ್ಬಿಬ್ಬು
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
ನೆಸ್ಡೆನ್ ದೇವಾಲಯದ 30 ವರ್ಷಗಳ ಸಂಭ್ರಮಾಚರಣೆ!
ಇಂದು ಮುಂಜಾನೆ, ರಾಜ ಮತ್ತು ರಾಣಿ ಯುರೋಪಿನ ಮೊದಲ ಸಾಂಪ್ರದಾಯಿಕ ಹಿಂದೂ ಕಲ್ಲಿನ ದೇವಾಲಯಕ್ಕೆ ಭೇಟಿ ನೀಡಿದರು.
ಇಂದಿನ ನಿಶ್ಚಿತಾರ್ಥದ ಸಮಯದಲ್ಲಿ, ಅವರ ಮೆಜೆಸ್ಟಿಗಳು ಆರಾಧಕರು ಮತ್ತು ಸಮುದಾಯದ ಪ್ರತಿನಿಧಿಗಳನ್ನು ಭೇಟಿಯಾದರು ಮತ್ತು ದೇವಾಲಯದಿಂದ ಬೆಂಬಲಿತ ಸಾಮಾಜಿಕ ಪ್ರಭಾವದ ಉಪಕ್ರಮಗಳು,… pic.twitter.com/b618lJthcU
– ರಾಯಲ್ ಫ್ಯಾಮಿಲಿ (@ರಾಯಲ್ ಫ್ಯಾಮಿಲಿ) ಅಕ್ಟೋಬರ್ 29, 2025
ಇಂತಹ ಸುಂದರ ಕ್ಷಣಗಳು ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರ ನೀಸ್ಡೆನ್ ದೇವಾಲಯದ 30 ವರ್ಷಗಳು ಇದು ಶಾಂತಿ, ನಂಬಿಕೆ ಮತ್ತು ಒಗ್ಗಟ್ಟಿನ ನಿಜವಾದ ಸಂಕೇತ ಎಂದು ಹೇಳಿದರು. ರಾಜ ಉತ್ತಮ ಕೆಲಸ, ನಂಬಿಕೆಯ ರಕ್ಷಕ ಎಂದು ಮತ್ತೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ. ಈ ಅದ್ಭುತ ಮೈಲಿಗಲ್ಲಿಗೆ ನೀಸ್ಡೆನ್ ದೇವಾಲಯಕ್ಕೆ ಅಭಿನಂದನೆಗಳು! ಇಂತಹ ಕೆಲಸಗಳು ನಡೆಯಲಿ ಎಂದು ನಾನು ಆರೈಸುತ್ತೇನೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. 2009 ರಲ್ಲಿ ವೇಲ್ಸ್ ರಾಜಕುಮಾರ ತಮ್ಮ ಪತ್ನಿಯನ್ನು ಈ ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ಹೇಳಲಾಗಿದೆ. BAPS ಶ್ರೀ ಸ್ವಾಮಿನಾರಾಯಣ ಮಂದಿರ ಸಂಪೂರ್ಣವಾಗಿ ಪ್ರಾಚೀನ ವೈದಿಕ ವಾಸ್ತುಶಿಲ್ಪ ಗ್ರಂಥಗಳ ಪ್ರಕಾರ ಮತ್ತು ಯಾವುದೇ ಆಧುನಿಕ ವೈಭವಗಳಿಲ್ಲದೆ ರಚನೆಯನ್ನು ಮಾಡಲಾಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 12:21 pm, ಗುರುವಾರ, 30 ಅಕ್ಟೋಬರ್ 25