ಆನ್‌ಲೈನ್ ಡೇಟಿಂಗ್ ಹೆಸರಲ್ಲಿ ವಂಚನೆ (ಸಾಂದರ್ಭಿಕ ಚಿತ್ರ)ಚಿತ್ರದ ಕ್ರೆಡಿಟ್ ಮೂಲ: ಗೂಗಲ್
ಬೆಂಗಳೂರು, ಅಕ್ಟೋಬರ್ 30: ಆನ್‌ಲೈನ್ ಡೇಟಿಂಗ್ ಹೆಸರಲ್ಲಿ ವಂಚನೆಗೆ ಒಳಗಾಗಿ 63 ವರ್ಷದ ವ್ಯಕ್ತಿಯೋರ್ವರು ಲಕ್ಷ ಲಕ್ಷ ಹಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ (ಬೆಂಗಳೂರು) ನಡೆದಿದೆ. ನಗರದ ಹೊರಮಾವು ನಿವಾಸಿಗಳಿಗೆ ಹೈ-ಪ್ರೊಫೈಲ್ ಮಹಿಳೆಯರಿಗೆ ಸಂಪರ್ಕ ಕಲ್ಪಿಸುವ ಆಸೆ ತೋರಿಸಿ ವಂಚಕರು ಬರೋಬ್ಬರಿ 32 ಲಕ್ಷಕ್ಕಿಂತ ಅಧಿಕ ಹಣವನ್ನು ದೋಚಿದ್ದಾರೆ. ಅಂತಿಮವಾಗಿ ತಾನು ಮೋಸ ಹೋಗಿದ್ದೇನೆ ಎಂದು ಅರಿತ ವ್ಯಕ್ತಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.
CEN ಕ್ರೈಂ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ ದಾಖಲಾದ ದೂರಿನ ಪ್ರಕಾರ, 5 ಅಕ್ಟೋಬರ್ 18 ರಿಂದ ಈ ವಂಚನೆ ನಡೆದಿದೆ. ವಂಚನೆಗೊಳೆಗಾದ ವ್ಯಕ್ತಿಗೆ ಡೇಟಿಂಗ್ ಸೇವೆಯ ಹೆಸರಲ್ಲಿ ಕರೆ ಬಂದಿದ್ದು, ಮಹಿಳೆಯರ ಜೊತೆ ಭೇಟಿ ಮಾಡುವ ಬಗ್ಗೆ ತಿಳಿಸಲಾಗಿದೆ. ಜೊತೆಗೆ, ನೋಂದಣಿ ಶುಲ್ಕ ಎಂದು 1,950 ರೂ.ಗಳನ್ನು ಆನ್‌ಲೈನ್ ಮೂಲಕ ವಂಚಕರು ಪಾವತಿ ಮಾಡಿಸಿಕೊಂಡಿದ್ದಾರೆ. ಬಳಿಕ ವಾಟ್ಸ್ಯಾಪ್ನಲ್ಲಿ ಮೂವರು ಮಹಿಳೆಯರ ಫೋಟೋವನ್ನು ಕಳುಹಿಸಲಾಯಿತು, ಆ ಮೇಲೊಬ್ಬರನ್ನು ವ್ಯಕ್ತಿ ಆಯ್ಕೆ ಮಾಡಿದರು. ಅವರು ಸೆಲೆಕ್ಟ್ ಮಾಡಿದ್ದ ರಿತಿಕಾ ಹೆಸರಿನ ಮಹಿಳೆಯ ಸಂಖ್ಯೆಯನ್ನು ಶೇರ್ ಮಾಡಲಾಗಿದೆ. ಬಳಿಕ ರಿತಿಕಾ ಮತ್ತು ವ್ಯಕ್ತಿಯ ನಡುವೆ ಸಂವಹನ ಆರಂಭಿಸಿದ್ದು, ಆತ್ಮೀಯತೆಯೂ ಬೆಳೆದಿತ್ತು. ನಿಮ್ಮನ್ನು ಬೇಗ ಭೇಟಿಯಾಗುವುದಾಗಿ ರಿತಿಕಾ ಕೂಡ ತಿಳಿಸಿದ್ದಳು.
ಇದನ್ನೂ ಓದಿ: ಮಹಿಳೆಗೆ ಬ್ಲ್ಯಾಕ್ ಮೇಲ್ ಆರೋಪ: ಶಾಸಕಿ ನಯನಾ ಮೋಟಮ್ಮ ಆಪ್ತ ಆದಿತ್ಯ ಬಂಧನ
ಹೀಗಿರುವಾಗ ದಸರಾ ಹಬ್ಬಕ್ಕೂ ಮೊದಲು, ತನ್ನ ಕುಟುಂಬವನ್ನು ಭೇಟಿಯಾಗಲು ತಾನು ಹೋಗುತ್ತಿದ್ದೇನೆ. ಹೀಗಾಗಿ ಕೆಲವು ದಿನಗಳ ಕಾಲ ನನಗೆ ಕರೆ ಮಾಡುವುದು ಅಥವಾ ಸಂದೇಶ ಕಳುಹಿಸುವುದನ್ನು ಮಾಡಬೇಡಿ ಎಂದು ಆ ವ್ಯಕ್ತಿಗೆ ರಿತಿಕಾ ತಿಳಿಸಿದ್ದಳು. ಇದರ ನಡುವೆ ಪ್ರೀತಿ ಎಂಬ ಹೆಸರಿನ ಮತ್ತೊಬ್ಬ ಮಹಿಳೆ ಕರೆ ಮಾಡಿದ್ದು, ರಿತಿಕಾ ಮತ್ತು ನಿಮ್ಮ ಭೇಟಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ವಿವಿಧ ವ್ಯವಸ್ಥೆಗಳಿಗೆ ಹಣ ನೀಡುವಂತೆ ತಿಳಿಸಿದಳು. ಆಕೆಯ ಮಾತು ನಂಬಿ ವ್ಯಕ್ತಿ ಬೇರೆ ಬೇರೆ ಬ್ಯಾಂಕ್‌ನ ಮೂರು ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ. ಲಕ್ಷ ಲಕ್ಷ ಹಣ ಪಾವತಿ ಬಳಿಕವೂ ಪ್ರೀತಿ ಮತ್ತೆ ಹೊಸ ವರಸೆ ತೆಗೆದು ಹಣ ಕೇಳುತ್ತಿತ್ತು. ಆಗ ಹಣ ನೀಡಲು ವ್ಯಕ್ತಿ ನಿರಾಕರಿಸಿದ್ದು, ಈ ವೇಳೆ ಕಾನೂನು ಕ್ರಮದ ಬೆದರಿಕೆಯನ್ನೂ ಆಕೆ ಹಾಕಿದ್ದಾಳೆ. ಹೀಗಾಗಿ ತಾನು ವಂಚನೆಗೆ ಒಳಗಾದ ಬಗ್ಗೆ ವ್ಯಕ್ತಿಗೆ ಜ್ಞಾನೋದಯವಾಗಿದ್ದು, ಅಷ್ಟರಲ್ಲಿ 32.2 ಲಕ್ಷ ರೂ. ಕಳೆದುಕೊಂಡಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 12:46 pm, ಗುರು, 30 ಅಕ್ಟೋಬರ್ 25