ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು 2007ರಲ್ಲಿ ‘ರಕ್ತ ಕಾಶ್ಮೀರ’ (ರಕ್ತ ಕಾಶ್ಮೀರ) ಹೆಸರಿನ ಸಿನಿಮಾ ಕೈಗೆತ್ತಿಕೊಂಡು ಪೂರ್ಣಗೊಂಡಿದ್ದರು. ಆದರೆ, ಸಿನಿಮಾಗೆ ರಿಲೀಸ್ ಭಾಗ್ಯ ಸಿಕ್ಕಿರಲಿಲ್ಲ. ಈ ಚಿತ್ರದಲ್ಲಿ ಉಪೇಂದ್ರ ಹಾಗೂ ರಮ್ಯಾ ಅವರು ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಆಗಿದ್ದು ಕಾಶ್ಮೀರದಲ್ಲಿ. ಭಯೋತ್ಪಾದನೆಯ ವಿಚಾರವನ್ನು ಸಿನಿಮಾದಲ್ಲಿ ಹೇಳಲಾಗುತ್ತಿದೆ. ಈಗ ಸಿನಿಮಾಗೆ ಕೊನೆಗೂ ರಿಲೀಸ್ ಭಾಗ್ಯ ಸಿಗುತ್ತಿದೆ. 18 ವರ್ಷಗಳ ಬಳಿಕ ಸಿನಿಮಾ ರಿಲೀಸ್ಗೆ ರೆಡಿ ಆಗಿದೆ.
‘ರಕ್ತ ಕಾಶ್ಮೀರ’ ಸಿನಿಮಾ ರಿಲೀಸ್ ಮಾಡಲು ರಾಜೇಂದ್ರ ಸಿಂಗ್ ಬಾಬು ಆಸಕ್ತಿ ತೋರಿಸಿದ್ದಾರೆ. ಇದು ಮಕ್ಕಳನ್ನೇ ಇಟ್ಟುಕೊಂಡು ಮಾಡಿದ ಸಿನಿಮಾ. ಈ ಸಿನಿಮಾದಲ್ಲಿ ಉಪೇಂದ್ರ ಹಾಗೂ ರಮ್ಯಾ ಕೂಡ ನಟಿಸಿದ್ದಾರೆ. ಆಗಿನ ಕಾದಲ್ಲೇ ಸಿನಿಮಾಗೆ 6 ಕೋಟಿ ರೂಪಾಯಿ ಖರ್ಚಾಗಿದೆ. ವಿಶೇಷ ಎಂದರೆ ಈ ಚಿತ್ರಕ್ಕಾಗಿ ಉಪ್ಪಿ ಅವರು ಯಾವುದೇ ಸಂಭಾವನೆ ಪಡೆದಿಲ್ಲವಂತೆ.
ಪ್ರತಿ ಸಿನಿಮಾದಲ್ಲೂ ಒಂದು ಹೈಲೈಟ್ ಅನ್ನೋದು ಇರುತ್ತದೆ. ಅದೇ ರೀತಿ, ಈ ಚಿತ್ರದಲ್ಲೂ ಒಂದು ವಿಶೇಷತೆ ಇದೆ. ಹತ್ತು ನಿಮಿಷದ ಸಾಂಗ್ ಸಿನಿಮಾದಲ್ಲಿ ಇದ್ದು, ಒಟ್ಟು 15 ಹೀರೋಗಳು ಬರುತ್ತಾರೆ ಎಂಬುದು ವಿಶೇಷ. ನಮ್ಮನ್ನು ಅಗಲಿಹೋದ ವಿಷ್ಣುವರ್ಧನ್, ಅಂಬರೀಷ್, ಪುನೀತ್ ಇರುತ್ತಾರೆ ಎಂಬುದು ಮತ್ತೊಂದು ವಿಶೇಷ.
ಇದನ್ನೂ ಓದಿ
’15 ಹೀರೋಗಳನ್ನು ಇಟ್ಟುಕೊಂಡು ಒಟ್ಟು 6 ದಿನ ಶೂಟ್ ಮಾಡಲು. ಎಲ್ಲರೂ ಚೆನ್ನಾಗಿ. ಇದೊಂದು ಸಾಧನೆಯೇ ಸರಿ. ಇನ್ಯಾರ ಬಳಿಯೂ ಇದನ್ನು ಮಾಡಲು ಸಾಧ್ಯವಿಲ್ಲ’ ಎಂದು ರಾಜೇಂದ್ರ ಸಿಂಗ್ ಬಾಬು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ರಮ್ಯಾ ಬಗ್ಗೆ ರಾಜೇಂದ್ರ ಸಿಂಗ್ ಬಾಬು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ‘ರಮ್ಯಾ ತುಂಬಾ ಚೆನ್ನಾಗಿ ನಮಗೆ ಸಿನಿಮಾ ಮಾಡಿ ಕೊಟ್ಟರು. ಕಾಶ್ಮೀರದಲ್ಲಿ ಶೂಟ್ ಮಾಡುವಾಗ 15 ಮಕ್ಳನ್ನು ರಮ್ಯಾನೇ ನೋಡಿಕೊಂಡರು. ರಮ್ಯಾ ಅವರ ಬಳಿ ಪ್ರತಿಭೆ ಇದೆ. ಅವರು ಇನ್ನಷ್ಟು ಸಿನಿಮಾ ಮಾಡಬೇಕು. ರಾಣಿ ಚೆನ್ನ ಭೈರಾದೇವಿ ಸಿನಿಮಾ ಮಾಡಬೇಕು ಎಂದಿದ್ದೇನೆ. ಈ ಪಾತ್ರವನ್ನು ರಮ್ಯಾಗೆ ನೀಡುವ ಉದ್ದೇಶವಿದೆ’ ಎನ್ನುತ್ತಾರೆ ಅವರು.
ಇದನ್ನೂ ಓದಿ: ರಮ್ಯಾ, ಉಪೇಂದ್ರ ನಟನೆಯ ‘ರಕ್ತ ಕಾಶ್ಮೀರ’ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಿದೆ
‘ದೇಶಭಕ್ತಿಯ ಚಿತ್ರ ಇದು. ಈ ಸಿನಿಮಾದಲ್ಲಿ ಒಮ್ಮೆ ಇಳಿ ಬರುತ್ತದೆ. ಇಡೀ ಸಿನಿಮಾ ಕಾಣಿಸಿಕೊಳ್ಳುತ್ತದೆ. ವಿಎಫ್ಎಕ್ಸ್ ಮೂಲಕ ಆ ಇಲಿ ರಚಿಸಲಾಗಿದೆ’ ಎಂದು ಅವರು ಹೇಳಿಕೊಳ್ಳುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 12:47 pm, ಗುರುವಾರ, 30 ಅಕ್ಟೋಬರ್ 25