ಬಿಹಾರಿ ವ್ಯಕ್ತಿಯ ಸಮೋಸಾ ವ್ಯಾಪಾರಚಿತ್ರ ಕ್ರೆಡಿಟ್ ಮೂಲ: Instagram
ಲಂಡನ್, ಅಕ್ಟೋಬರ್ 30: ಬುದ್ಧಿವಂತಿಕೆಯ ಛಲ, ಆತ್ಮವಿಶ್ವಾಸ ಹಾಗೂ ಬದುಕಿಕೆಯಿದ್ರೆ ಎಲ್ಲರೂ ಬದುಕು ಕಟ್ಟಿಕೊಳ್ಳಬಹುದು. ನಮ್ಮಲ್ಲಿರುವ ಕೊರತೆಯೂ ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಹೌದು ಸಾಮಾನ್ಯವಾಗಿ ಭಾರತೀಯ ವಿದೇಶದಲ್ಲಿ ವಾಸಿಸುವ ನಮ್ಮವರು ವಿದೇಶಿಗರು ಕೂಡ ಮಿಸ್ ಮಾಡಿಕೊಳ್ತಾರೆ. ಇದನ್ನೇ ಅರಿತುಕೊಂಡ ಬಿಹಾರಿ ವ್ಯಕ್ತಿಯೊಬ್ಬ (ಬಿಹಾರಿ ಮನುಷ್ಯಲಂಡನ್‌ನಲ್ಲಿ (ಲಂಡನ್) ಸಮೋಸಾ ಅಂಗಡಿ ತೆರೆದು ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡ್ತಾ ಇದ್ದಾನೆ. ಈ ವ್ಯಕ್ತಿಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವ್ಯಕ್ತಿಯ ಬುದ್ಧಿವಂತಿಕೆಯನ್ನು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲಂಡನ್‌ನಲ್ಲಿ ವ್ಯಕ್ತಿಯ ಕೈ ಹಿಡಿದ ಸಮೋಸಾ ವ್ಯಾಪಾರ
biharisamosa.uk ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಬಿಹಾರಿ ವ್ಯಕ್ತಿಯೊಬ್ಬ ಸಮೋಸಾ ಮಾರಾಟ ಮಾಡುತ್ತಿದ್ದಾನೆ. ಘಂಟಾವಾಲಾ ಬಿಹಾರಿ ಸಮೋಸಾ ಹೆಸರಿಡ, ಈ ವ್ಯಕ್ತಿಯೂ ಬಿಹಾರಿ ಸ್ಟೈಲ್ ನಲ್ಲಿ ಮಾತನಾಡುತ್ತಾ ಸಮೋಸಾ ಸೇಲ್ ಮಾಡುವ ಗ್ರಾಹಕರ ಮನಸ್ಸು ಗೆದ್ದಿದ್ದಾನೆ. ಬಿಹಾರಿ ಉಡುಪು, ಮಾತಾಡೋ ಸ್ಟೈಲ್, ಸಮೋಸಾ ತಯಾರಿಸುವ ರೀತಿ ಅಲ್ಲಿ ನೆಲೆಸಿರುವ ಭಾರತೀಯರು ಸೇರಿದಂತೆ ವಿದೇಶಿಗರು ಕೂಡ ಫಿದಾ ಆಗಿ ಹೋಗಿದ್ದರೆ ನೀವಿಲ್ಲಿ ನೋಡಬಹುದು. ಹೀಗಾಗಿ ಭಾರತೀಯರು ಸೇರಿದಂತೆ ವಿದೇಶಿಗರು ಸಮೋಸಾ ಖರೀದಿಸಿ ತಿನ್ನುವುದನ್ನು ಕಾಣಬಹುದು. ಕೆಲವು ಸಮೋಸ ರುಚಿಗೆ ಕಳೆದು ಹೋಗಿ ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದಾರೆ.
ಇದನ್ನೂ ಓದಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಈ ವ್ಯಕ್ತಿಯ ದಿನದ ಗಳಿಕೆ ನೋಡಿ
ಇಂತಹ ರುಚಿಕರ ಸಮೋಸ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಅನ್ನೋದು ಈ ಸಮೋಸ ಸವಿದವರ ಮನಸ್ಸಿನ ಮಾತು. ಇದುವೇ ಈ ಬಿಹಾರಿ ವ್ಯಕ್ತಿಯ ಆದಾಯ ಹೆಚ್ಚಾಗಲು ಕಾರಣ. ಲಂಡನ್‌ನಲ್ಲಿ ಸಮೋಸಾ ಮಾರಾಟ ಮಾರಾಟ ಮಾಡಿ ಪ್ರತಿ ದಿನ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದೆ . ಹೌದು, ಎರಡು ಸಮೋಸಾವನ್ನು 5 ಡಾಲರ್‌ಗೆ ಮಾರಾಟ ಮಾಡಲಾಗುತ್ತಿದೆ, ದಿನಕ್ಕೆ 7500 ಡಾಲರ್‌ನಿಂದ 10,000 ಡಾಲರ್ ಆದಾಯ ಗಳಿಸುತ್ತಾನಂತೆ. ಅಂದರೆ ಭಾರತೀಯ ರೂಗಳಲ್ಲಿ ದಿನಕ್ಕೆ 9-10 ಲಕ್ಷ ರೂ ಈ ವ್ಯಕ್ತಿಯ ಕೈ ಸೇರುತ್ತಿದೆ. ಅಚ್ಚರಿ ಎನಿಸಿದ್ರೂ ಈತನ ಸಮೋಸಾ ಮಾರಾಟದ ಟ್ರಿಕ್ಸ್ ಅನ್ನು ನೀವು ಮೆಚ್ಚಲೇ ಬೇಕು.
ಇದನ್ನೂ ಓದಿ:ಕೋವಿಡ್ ಸಮಯದಲ್ಲಿ ವ್ಯವಹಾರದಲ್ಲಿ 2 ಕೋಟಿ ರೂ ನಷ್ಟ, ನಗುತಲೇ ಎಲ್ಲವನ್ನು ಜಯಿಸಿದ ಈ ವ್ಯಕ್ತಿ ಎಲ್ಲರಿಗೂ ಸ್ಫೂರ್ತಿ
ವಿಡಿಯೋ 1.8 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳು ಹೀಗೆ ಅದ್ಭುತವಾಗಿದೆ, ಒಬ್ಬ ಬಳಕೆದಾರ ಸಹೋದರ ಸಹೋದರರು, ನಿಮ್ಮ ವ್ಯಾಪಾರವು ಮುಂದುವರಿಯಲಿ. ಇತರರು, ನಿಮ್ಮ ಬಗ್ಗೆ ನಿಜವಾಗಿಯೂ ಹೆಮ್ಮೆ ಅನಿಸುತ್ತದೆ, ಹೀಗೆಯೇ ಮುಂದುವರಿಯುತ್ತದೆ ಅಲ್ ದಿ ಬೆಸ್ಟ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರ ನೀವು ಕೋಟ್ಯಾಧಿಪತಿ ಆದ ಬಳಿಕವೇ ಭಾರತಕ್ಕೆ ಬನ್ನಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ