218 ಮನೆಗಳ ಮುಂದೆ ಕಸ ಸುರಿದ ಜಿಬಿಎ! ಒಂದೇ ದಿನ 2.80 ಲಕ್ಷ ರೂ. ದಂಡ ವಸೂಲಿ

218 ಮನೆಗಳ ಮುಂದೆ ಕಸ ಸುರಿದ ಜಿಬಿಎ! ಒಂದೇ ದಿನ 2.80 ಲಕ್ಷ ರೂ. ದಂಡ ವಸೂಲಿ


ಬೆಂಗಳೂರು, ಅಕ್ಟೋಬರ್ 31: ರಸ್ತೆ ಬದಿಯಲ್ಲಿ ಕಸ ಎಸೆಯುವವರ ಮೇಲೆ ಹದ್ದಿನ ಕಣ್ಣಿಟ್ಟು ಕಠಿಣ ಕ್ರಮಕ್ಕೆ ಮುಂದಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮಾರ್ಷಲ್ಗಳು ಗುರುವಾರ ಭರ್ಜರಿ ಕಾರ್ಯಾಚರಣೆಯನ್ನೇ. ಒಂದೇ ದಿನ 218 ಮನೆಗಳ ಮುಂದೆ ಕಸ ಸುರಿದಿದ್ದು, 2.80 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ಬೆಂಗಳೂರಿನ ಗಾಂಧಿನಗರ ವಾರ್ಡ್ ನಂಬರ್ 94 ರಲ್ಲಿ ವಾಸವಾಗಿರುವ ಮನೆಯವರು ರಸ್ತೆ ಬದಿ ಕಸ ಎಸೆದು ಬಂದಿದ್ದರು. ಇದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ ಪಾಲಿಕೆ ಮಾರ್ಷಲ್‌ಗಳು, ಗುರುವಾರ ಕಸವನ್ನು ಅವರ ಮನೆ ಮುಂದೆಯೇ ಸುರಿದಿದ್ದಾರೆ. ಹೀಗೆ ಇದೆ ಏರಿಯಾದಲ್ಲಿ ಹತ್ತಾರು ಮನೆಗಳ ಮುಂದೆ ಕಸ ಸುರಿದು, ಜೊತೆಗೆ ತಲಾ 1 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ಮಲ್ಲೇಶ್ವರದ ದತ್ತಾತ್ರೇಯ ಟೆಂಪಲ್ ವಾರ್ಡ್‌ನಲ್ಲಿ ಗುಜರಿ ವ್ಯಾಪಾರ ಮಾಡುತ್ತಿರುವ ವ್ಯಕ್ತಿಯೊಬ್ಬ ಕೂಡ ರಸ್ತೆ ಬದಿ ಕಸ ಸುರಿದು ಬಂದಿದ್ದ. ಆತನಿಗೂ ಜಿಪಿಎ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ.

ಹೊಸಕೆರೆಹಳ್ಳಿ, ಬನಶಂಕರಿ, ಮಹದೇವಪುರ ಸೇರಿದಂತೆ ಹಲವೆಡೆ ಕಸ ಎಸೆಯುವವರನ್ನು ಮಾರ್ಷಲ್‌ಗಳ ಮೂಲಕ ಕಂಡುಕೊಂಡಿದ್ದ ಜಿಬಿಎ, ಎಲ್ಲೆಂದರಲ್ಲಿ ಕಸ ಎಸೆದ 218 ಜನರ ಮನೆಗಳ ಮುಂದೆ ಕಸ ಸುರಿದು ಜಾಗೃತಿ ಮೂಡಿಸಿದೆ. ಕಸ ಎಸೆದವರ ಬಳಿ ತಲಾ ಸಾವಿರ ರೂಪಾಯಿ ದಂಡ ವಸೂಲಿ ಮಾಡಿದೆ.

ಆರಂಭದಲ್ಲಿ ಒಂದು ಸಾವಿರ ದಂಡ ವಿಧಿಸುತ್ತಿರುವ ಜಿಬಿಎ, ಮತ್ತೆ ಕಸ ಹಾಕಿದರೆ, ಮತ್ತೊಂದು ಶಾಕ್ ಕೊಡಲು ಮುಂದಾಗಿದೆ.

ರಸ್ತೆ ಬದಿ ಕಸ ಸುರಿದರೆ ಮುಂದೈತೆ ಮಾರಿಹಬ್ಬ!

  • ಆರಂಭದಲ್ಲಿ ಕಸ ಸುರಿದವರಿಗೆ 1000ರೂ. ದಂಡ
  • ಮನೆ ಮುಂದೆ ಕಸ ಸುರಿದು, ತಮಟೆ ಬಾರಿಸಿ ಜಾಗೃತಿ
  • ಮತ್ತೆ ಅದೇ ಮನೆಯವರು ಕಸ ಸುರಿದರೆ ಬಿಗ್ ಶಾಕ್
  • ಎರಡನೇ ಬಾರಿಗೆ ಬೀಳಲಿದೆ 5000 ರೂ. ದಂಡ
  • ಮನೆಯೊಳಗೇ ಕಸ ಸುರಿಯಲಿದ್ದಾರೆ ಜಿಬಿಎ ಅಧಿಕಾರಿಗಳು

ಜಿಬಿಎ ಅಧಿಕಾರಿಗಳು ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಮತ್ತೆ ಕೆಲವರು ಸರಿಯಾಗಿ ಕಸ ಸಂಗ್ರಹಕ್ಕೆ ಬರುತ್ತಿಲ್ಲ. ಅವರು ಬಂದು ಸಂಗ್ರಹಿಸಿಕೊಂಡು ಹೋದರೆನಾವು ಕಸ ಹಾಕುವ ಸಮಸ್ಯೆ ಇರಲ್ಲ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಅಪಘಾತವಾದ್ರೆ ಇನ್ಮುಂದ್ರೆ ಪೊಲೀಸರಿಗೆ ಕರೆ ಮಾಡೋದೇ: ಹೊಸ ಟೆಕ್ನಾಲಜಿ ಪರಿಚಯಿಸಿದ ಬಿ.ಟಿ.ಪಿ

ಕಸ ಸುರಿದು ದಂಡ ವಿಧಿಸಿದ್ದಾರೆ ಜಾಗೃತಿ ಮೂಡಿಸಿದ ಅಧಿಕಾರಿಗಳು, ಬಳಿಕ ಅದೇ ಕಸವನ್ನು ಮತ್ತೆ ತುಂಬಿಕೊಂಡು ಹೋಗುತ್ತಾರೆ. ಬೆಂಗಳೂರಿಗರು ಇನ್ನಾದರೂ ಹೀಗೆ ಬ್ಲಾಕ್ ಪಾಯಿಂಟ್‌ಗಳಲ್ಲಿ ಕಸ ಹಾಕುವುದನ್ನು ನಿಲ್ಲಿಸಬೇಕಾಗಿದೆ. ಜೊತೆಗೆ ಪಾಲಿಕೆ ಕೂಡ ಕಸ ಸಂಗ್ರಹಣೆ ಅಚ್ಚುಕಟ್ಟಾಗಿ ಮಾಡಬೇಕಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *