Headlines

‘ಗಿಲ್ಲಿಗೆ ಕಳಪೆ ಕೊಡಬೇಕು’; ಮೊದಲೇ ಪ್ಲ್ಯಾನ್ ಮಾಡಿದ ಅಶ್ವಿನಿ, ರಿಷಾ

‘ಗಿಲ್ಲಿಗೆ ಕಳಪೆ ಕೊಡಬೇಕು’; ಮೊದಲೇ ಪ್ಲ್ಯಾನ್ ಮಾಡಿದ ಅಶ್ವಿನಿ, ರಿಷಾ


ಬಿಗ್ ಬಾಸ್ ಮನೆಯಲ್ಲಿ ನಡೆಯೋ ಉತ್ತಮ ಹಾಗೂ ಕಳಪೆ ವಿಚಾರವನ್ನು ಯಾರೂ ಓಪನ್ ಆಗಿ ಮಾತನಾಡುವಂತೆ ಇಲ್ಲ. ಬೇರೆಯವರ ಮೇಲೆ ಪ್ರಭಾವ ಬೀರುವಂತೆ ಇಲ್ಲ. ಅದು ಬಿಗ್ ಬಾಸ್ (ಬಿಗ್ ಬಾಸ್) ನಿಯಮದ ಪ್ರಕಾರ ತಪ್ಪು. ಈ ವಿಚಾರದಲ್ಲಿ ವೈಯಕ್ತಿಕ ನಿರ್ಧಾರ ತಿಳಿಸೋ ಅವಕಾಶ ಮಾತ್ರ ಇರುತ್ತದೆ. ಈಗ ಬಿಗ್ ಬಾಸ್ ಮನೆಯಲ್ಲಿ ಈ ಬಗ್ಗೆ ಓಪನ್ ಆಗಿ ಚರ್ಚೆ ಆಗಿದೆ. ಅಶ್ವಿನಿ ಹಾಗೂ ರಿಷಾ ಗೌಡ ಎಲ್ಲರ ಎದುರು ಕಳಪೆ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಗಿಲ್ಲಿಗೆ ಅದನ್ನು ಎಂದು ಚರ್ಚಿಸಲಾಗಿದೆ.

‘ಬಿಗ್ ಬಾಸ್’ನಲ್ಲಿ ಈ ಮೊದಲು ಕಳಪೆ ಹಾಗೂ ಉತ್ತಮ ವಿಚಾರದಲ್ಲಿ ಚರ್ಚೆ ಆಗಿ ಸುದೀಪ್ ಬಳಿ ಬೈಸಿಕೊಂಡ ಉದಾಹರಣೆ ಸಾಕಷ್ಟಿದೆ. ಈ ವಾರವೂ ಮುಂದುವರಿದಿದೆ. ಗಿಲ್ಲಿ ನಟ ಅವರು ಈ ಬಾರಿ ತಂಡಕ್ಕೆ ಸಿಗೋ ಅವಕಾಶವನ್ನು ಕಸಿದುಕೊಂಡರು ಎಂಬುದು ಬ್ಲೂ ಟೀಂ ತಂಡದ ಆರೋಪ. ಈ ಕಾರಣದಿಂದ ಎಲ್ಲರೂ ಗಿಲ್ಲಿನ ಅನೇಕರು ದ್ವೇಷಿಸಿದರು.

ಈ ವಿಚಾರವನ್ನೇ ಇಟ್ಟುಕೊಂಡು ಗಿಲ್ಲಿಗೆ ಕಳಪೆ ನೀಡಲು ರೆಡಿ ಆಗಿದ್ದಾರೆ. ಇದರಲ್ಲಿ ಅಶ್ವಿನಿ ಗೌಡ ಹಾಗೂ ರಿಷಾ ಮುಂದಿದ್ದಾರೆ. ಗುಂಪಿನಲ್ಲಿ ಮಾತನಾಡುವಾಗ ಅಶ್ವಿನಿ ಅವರು, ‘ಗಿಲ್ಲಿ ನಿನಗೆ ಈ ವಾರ ಎಲ್ಲರಿಗೂ ಕಳಪೆಯಾಗಿದೆ’ ಎಂದು ಹೇಳಿದರು. ಈ ಮೂಲಕ ಅಕ್ಕ-ಪಕ್ಕ ಇದ್ದವರ ಮೇಲೆ ಪ್ರಭಾವ ಬೀರಿದ್ದಾರೆ. ರಿಷಾ ಗೌಡ ಕೂಡ ಮಾತನಾಡುವಾಗ ‘ಗಿಲ್ಲಿಗೆ ಕಳಪೆ ಕೊಡಬೇಕು’ ಎಂದಿದ್ದಾರೆ. ಅವರು ಕೂಡ ಅನೇಕರ ಮೇಲೆ ಪ್ರಭಾವ ಬೀರಿದ್ದಾರೆ.

ಇದನ್ನೂ ಓದಿ

ಇದನ್ನೂ ಓದಿ: ‘ಐ ಲವ್ ಯೂ’ ಎಂದು ಪ್ರಪೋಸ್ ಮಾಡೇ ಬಿಟ್ಟ ಸೂರಜ್; ಅಚ್ಚರಿಯ ಉತ್ತರ ಕೊಟ್ಟ ರಾಶಿಕಾ

ಆಗಿರುವ ಚರ್ಚೆಯ ಪ್ರಕಾರ ಗಿಲ್ಲಿಗೆ ಮನೆಯ ಬಹುತೇಕ ಕಳಪೆ ಕೊಡೋ ಸಾಧ್ಯತೆ ಇದೆ. ಈ ವಾರದ ಕಳಪೆ ಗಿಲ್ಲಿಗೆ ಸಿಗೋ ಸಾಧ್ಯತೆ ಇದೆ. ವೀಕೆಂಡ್‌ನಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುವ ಸಾಧ್ಯತೆಯಿದೆ. ಸುದೀಪ್ ಅವರು ಈ ಬಗ್ಗೆ ಅನೇಕರಿಗೆ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *