ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ರೆಡ್ಡಿಟ್
ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಭ್ರಮೆ) ಈ ಒಗಟಿನ ಚಿತ್ರಗಳು ಭ್ರಮೆಯನ್ನು ಉಂಟು ಮಾಡಿ ನಿಮ್ಮ ಕಣ್ಣನ್ನು ಮೋಸಗೊಳಿಸುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಟ್ರಿಕ್ಕಿಗಳು ಹಲವು ಬಾರಿ ವೈರಲ್ ಆಗುತ್ತಿರುತ್ತವೆ. ಕಷ್ಟಕರವಾದ ಈ ಒಗಟಿನ ಚಿತ್ರಗಳನ್ನು ಹೆಚ್ಚಿನವರು ಬಿಡಿಸುವಲ್ಲಿ ಸೋಲುತ್ತಾರೆ. ಇದೀಗ ರೆಡ್ಡಿ ನಲ್ಲಿ ಹಂಚಿಕೊಂಡಿರುವ ಈ ಒಗಟಿನ ಚಿತ್ರವು ನೋಡಲು ಸುಲಭವಾಗಿದೆ. ಆದರೆ ಮನೆಯ ಹೊರಭಾಗದಲ್ಲಿರುವ ಕಪ್ಪು ಬಣ್ಣದ ಬೆಕ್ಕನ್ನು ಹುಡುಕುವ ಸವಾಲು ಇದೆ. ಆದರೆ ಈ ಅವಕಾಶ ಬಿಡಿಸಲು ಇರುವ ಸಮಯವಕಾಶ ಹತ್ತು ಸೆಕೆಂಡುಗಳು ಮಾತ್ರ. ಆದರೆ ಆದಷ್ಟು ಬೇಗ ಕಪ್ಪು ಬಣ್ಣದ ಬೆಕ್ಕನ್ನು ಹುಡುಕಿ ಜಾಣರು ಎನಿಸಿಕೊಳ್ಳಿ.
ಈ ಚಿತ್ರದಲ್ಲಿ ಏನಿದೆ?
r/FindTheSniper ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಂಡ ಮನೆಯ ಹೊರಾಂಗಣವನ್ನು ಕಾಣಬಹುದಾಗಿದೆ. ಈ ಚಿತ್ರದಲ್ಲಿ ಅಡಗಿರುವ ಕಪ್ಪು ಬೆಕ್ಕನ್ನು ಹತ್ತು ಸೆಕೆಂಡುಗಳು ಮತ್ತು ಅದಕ್ಕಿಂತ ಕಡಿಮೆ ಅವಧಿಯಲ್ಲಿ ಗುರುತಿಸಲಾಗಿದೆ. ಮೆಟ್ಟಿಲುಗಳ ಮೇಲೆ ಹಲವಾರು ಕುಂಬಳಕಾಯಿಗಳನ್ನು ಇರಿಸಲಾಗಿದೆ, ಪಕ್ಕದಲ್ಲಿ ಪ್ಲಾಸ್ಟಿಕ್ ಬೆಕ್ಕನ್ನು ಇರಿಸಲಾಗಿದೆ. ಮನೆಯ ಹೊರಗೆ ಹಸಿರು ಬಣ್ಣದ ಕಸದ ಬುಟ್ಟಿ ಸೇರಿದಂತೆ ಮನೆಯ ಮೂಲೆಯಲ್ಲಿ ಕಸವಿರುವುದು ಕಂಡುಬಂದಿದೆ. ಆದರೆ ಇಲ್ಲಿ ಅಡಗಿರುವ ಕಪ್ಪು ಬಣ್ಣದ ಬೆಕ್ಕನ್ನು ಕಂಡು ಹಿಡಿಯಬೇಕು. ಈ ಬೆಕ್ಕನ್ನು ಗುರುತಿಸಲು ಸಾಧ್ಯವೇ ಎಂದು ನೋಡಿ.
ಪೋಸ್ಟ್ ವೈರಲ್ ಇಲ್ಲಿದೆ ನೋಡಿ
ನಿಜವಾದ ಕಪ್ಪು ಬೆಕ್ಕು byu/NoTea20 inFindTheSniper ಅನ್ನು ಗುರುತಿಸಿ
ಇದನ್ನೂ ಓದಿ
ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸಿತೇ?

ಒಗಟಿನ ಆಟ ಶಕ್ತಿ ಮನೋರಂಜನೆಯನ್ನು ನೀಡಿದರೆ ನಮ್ಮ ಆಲೋಚನೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸಬಹುದು. ಕಣ್ಣು ಎಷ್ಟು ಅಗಲಿಸಿ ನೋಡಿದ್ರು ಈ ಕಪ್ಪು ಬಣ್ಣದ ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ. ನೀವು ಇಲ್ಲಿ ಅಡಗಿರುವ ಬೆಕ್ಕನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದೀರಾ ಎಂದಾದ್ರೆ ನಿಮ್ಮ ಕ್ಷಣ ಕೌಶಲ್ಯ ಉತ್ತಮವಾಗಿದೆ ಎಂದರ್ಥ. ಒಂದು ವೇಳೆ ಈ ಒಗಟು ಬಿಡಿಸಲು ಸಾಧ್ಯವಾಗಿಲ್ಲ ಎಂದಾದರೆ ನಾವು ಹೇಳುತ್ತೇವೆ. ಬೆಕ್ಕು ಮನೆಯ ಹೊರಗೆ ಹುಲ್ಲಿನ ಮೇಲೆ ಕುಳಿತಿದೆ. ಕಪ್ಪು ಬಣ್ಣದ ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸುತ್ತದೆ ಎಂದು ಭಾವಿಸುತ್ತೇವೆ.
ಇದನ್ನೂ ಓದಿ:ಬುದ್ಧಿವಂತರಿಗೊಂದು ಸವಾಲ್; ಈ ಚಿತ್ರದಲ್ಲಿ ನಿಂಬೆ ಹಣ್ಣು ಎಲ್ಲಿದೆ ಎಂದು ಹೇಳಿ ನೋಡೋಣ
ಬಳಕೆದಾರರ ಕಾಮೆಂಟ್ಗಳು ಹೀಗಿವೆ
ಅಕ್ಟೋಬರ್ 28 ರಂದು ಹಂಚಿಕೊಂಡಿರುವ ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಬಳಸಿದ್ದು ಬಳಕೆದಾರರೊಬ್ಬರು ಈ ಸುಲಭವಾದದ್ದು. ಅಂಗಳದಲ್ಲಿ ಕಿಟಕಿಯ ಕೆಳಗೆ ಎಡಭಾಗದಲ್ಲಿ ಬೆಕ್ಕು ಇದೆ. ನನ್ನ ಮನೆಯ ಬೆಕ್ಕು ಅದೇ ಕೆಲಸ ಮಾಡುವುದರಿಂದ ನಾನು ಬೆಕ್ಕನ್ನು ತಕ್ಷಣವೇ ಗುರುತಿಸಿದೆ ಎಂದು ಕಾಮೆಂಟ್ ಮಾಡಲಾಗಿದೆ. ಮತ್ತೊಬ್ಬರು, ಕಪ್ಪು ಬಣ್ಣದ ಬೆಕ್ಕು ಕಾಣಿಸಿತು, ನಾನು ಬೇಗನೇ ಉತ್ತರ ಕಂಡು ಕೊಂಡೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 10:23 am, ಶುಕ್ರ, 31 ಅಕ್ಟೋಬರ್ 25