ಪುಣೆ, ಅಕ್ಟೋಬರ್ 31: ಮುಂಬೈನ ಪೂವೈನಲ್ಲಿರುವ ಸ್ಟುಡಿಯೋದಲ್ಲಿ ರೋಹಿತ್ ಆರ್ಯ ಎಂಬಾತ 17 ಸಂಪರ್ಕಿಸಿ ಒತ್ತೆಯಾಳಾಗಿರಿಸಿಕೊಂಡಿದ್ದ. ಗುರುವಾರ ಪೊಲೀಸರು ಗುಂಡೇಟಿಗೆ ಆತ ಬಲಿಯಾದ. ಆತ ಸಾಯುವುದಕ್ಕೂ ಮುನ್ನ ಬಿಡುಗಡೆ ಮಾಡಿರುವ ವಿಡಿಯೋ ಎಲ್ಲಾ ವೈರಲ್ ಆಗುತ್ತಿದೆ. ಮುಂಬೈ ಪೊಲೀಸ್ ಮೂಲಗಳು ತಿಳಿಸುವಂತೆ ಆತ ನಾಗ್ಪುರದ ಯೂಟ್ಯೂಬರ್ ಮತ್ತು ಶಾಲಾ ಶಿಕ್ಷಕ. ನಾನೇನು ಭಯೋತ್ಪಾದಕನಲ್ಲ, ಕೆಲವು ಜನರೊಂದಿಗೆ ಮಾತನಾಡಲು ಅಗತ್ಯವಿದೆ, ಅದಕ್ಕೆ ಅನುಮತಿ ಮಾಡಿಕೊಡದಿದ್ದರೆ ಎಲ್ಲರನ್ನೂ ಬೆಂಕಿ ಹಚ್ಚಿ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ನನಗೆ ಹೆಚ್ಚಿನ ಬೇಡಿಕೆಗಳಿಲ್ಲ, ಕೆಲವು ನೈತಿಕ ಬೇಡಿಕೆಗಳಷ್ಟೇ, ಹೆಚ್ಚು ಹಣವನ್ನೂ ಕೇಳುವುದಿಲ್ಲ, ಕೆಲವು ಪ್ರಶ್ನೆಗಳಿವೆ, ಅದಕ್ಕೆ ಉತ್ತರ ಬೇಕು ಎಂದು ವಿಡಿಯೋದಲ್ಲಿ ಹೇಳಿದ್ದ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ