ಬೆಂಗಳೂರು: ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ; ಮಾಜಿ ಕುಲಸಚಿವ ಪ್ರೊ. ಮೈಲಾರಪ್ಪ ಬಂಧನ

ಬೆಂಗಳೂರು: ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ;  ಮಾಜಿ ಕುಲಸಚಿವ ಪ್ರೊ. ಮೈಲಾರಪ್ಪ ಬಂಧನ


ಮಹಿಳೆಗೆ ಕಿರುಕುಳ ಆರೋಪ, ಪ್ರೊ.ಬಿ.ಸಿ.ಮೈಲಾರಪ್ಪ ಬಂಧನ

ಬೆಂಗಳೂರು, ಅಕ್ಟೋಬರ್ 31: ಮಹಿಳೆಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಬೆಂಗಳೂರಿನ ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕ ಹಾಗೂ ಪ್ರಾಧ್ಯಾಪಕ ಪ್ರೊ. ಬಿ.ಸಿ. ಮೈಲಾರಪ್ಪ (ಬಿ.ಸಿ. ಮೈಲಾರಪ್ಪ ಬಂಧನ) ಅವರನ್ನು ಬಂಧಿಸಿದ್ದಾರೆ. ಬಸವೇಶ್ವರ ಠಾಣೆಯಲ್ಲಿ ಮಹಿಳೆ ನೀಡಿದ ದೂರು ಆಧಾರದಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಸಂತ್ರಸ್ತೆಯ ವಿರುದ್ಧ ದಾಖಲಾಗಿದ್ದ ಕೇಸ್ ನಲ್ಲಿ ಆಕೆಯ ಪರ ವಾದಿಸಿದ್ದರು ಮೈಪ್ಪ

ಸಂತ್ರಸ್ತೆ 2022ನೇ ಸಾಲಿನ ನವೆಂಬರ್ ತಿಂಗಳಿನಲ್ಲಿ ಬೆಂಗಳೂರು ವಿ.ವಿ ನಿರ್ದೇಶಕರಾದ ಪ್ರೊಫೇಸರ್ ಶ್ರೀ.ಬಿ.ಸಿ ಮೈಲಾರಪ್ಪ ನಡೆಸುತ್ತಿದ್ದ ಕರ್ನಾಟಕ ರಾಜ್ಯ ಹರಿಜನ ಸೇವಕ ಸಂಘದಲ್ಲಿ ಲಸಕ್ಕೆ ಸೇರಿದ್ದರು. ಆಗಿನಿಂದ 2 ವರ್ಷ ಅಲ್ಲಿಯೇ ಕೆಲಸ ಮಾಡಿದೆ. ಈ ವೇಳೆ ಆಕೆಯ ಪತಿಯೂ ಅಸಹಜವಾಗಿ ಸಾವನ್ನಪ್ಪಿದ್ದರು. ಈ ವೇಳೆ ಪತಿಯ ಸಾವಿಗೆ ಆಕೆಯೇ ಕಾರಣವೆಂದು ಆಕೆ ಅತ್ತೆ, ಮಾವ ದೂರನ್ನೂ ದಾಖಲಿಸಿದ್ದರು. ಅಷ್ಟೇ ಅಲ್ಲದೆ ಸಂತ್ರಸ್ತೆಯ ಹೆಸರಿನಲ್ಲಿದ್ದ ಆಸ್ತಿಯನ್ನು ತಮಗೆ ಬರೆದುಕೊಡುವಂತೆ ಪೀಡಿಸಿದ್ದರು. ಈ ಸಮಯದಲ್ಲಿ ಬಿ.ಸಿ.ಮೈ.ಆಕೆಯ ಗಂಡನ ಸಾವಿನ ಬಗ್ಗೆ ಮಹಾಲಕ್ಷ್ಮೀ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಮತ್ತು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆಕೆ ಪರ ವಾದಿಸಿ, ಸಾಕಷ್ಟು ಓಡಾಟ ನಡೆಸಿದ್ದರು.

ಸಾರ್ವಜನಿಕರುದೇ ಮಹಿಳೆಯ ಮೇಲೆ ಹಲ್ಲೆ

ಸಂತ್ರಸ್ತೆಯ ತಂದೆಯ ಆಸ್ತಿಯ ಭಾಗದ ವಿಷಯವಾಗಿಯೂ ಹಲವು ಮನಸ್ತಾಪಗಳುಂಟಾಗಿತ್ತು. ತಂದೆ ಆಸ್ತಿಯ ಭಾಗಾಂಶಕ್ಕಾಗಿ ಸಂತ್ರಸ್ತೆ ಅಣ್ಣ , ವಕೀಲರಾದ ರಘು ಎಂಬವರ ಸಹಾಯದಿಂದ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ್ದರು. ಈ ವಿಷಯವಾಗಿ ವಕೀಲರು ಆಗಾಗ ಸಂತ್ರಸ್ತೆಯನ್ನು ಭೇಟಿ ಮಾಡುವ ಸುದ್ದಿ ತಿಳಿದ ಮೈಕೋ ಒಂದು ಹೋಟೆಲ್ ಬಳಿ ಮಾತನಾಡುವ ಸಂತ್ರಸ್ತತೆಯನ್ನು ಕರೆಸಿಕೊಂಡರು. ಭೇಟಿ ಮಾಡಲು ಬಂದಾಗ ಆಕೆಗೆ ಒಂದಿಷ್ಟು ದಾಖಲಾತಿಗಳನ್ನು ನೀಡಿ, ಸಹಿ ಹಾಕುವಂತೆ ಹೇಳಿದ್ದರು. ದಾಖಲಾತಿ ಪರಿಶೀಲಿಸಿದಾಗ, ‘ನನ್ನ ಜೀವನದಲ್ಲಿ ಏನೇ ತೊಂದರೆಯಾದರೂ ಅದಕ್ಕೆ ವಕೀಲ ರಘು ಕಾರಣ’ ಎಂದು ಬರೆದಿದ್ದನ್ನು ನೋಡಿ, ಸಹಿ ಹಾಕಲು ಸಂತ್ರಸ್ತೆ ನಿರಾಕರಿಸಿದ್ದಾರೆ. ಹೀಗೆ ಬರೆದು ಸಹಿ ಹಾಕಿಸಿಕೊಳ್ಳಲು ನೀವು ಯಾರೆಂದು ಆಕೆ ಪ್ರಶ್ನಿಸಿದಾಗ ಕೋಪಗೊಂಡ ಮೈಯಪ್ಪ, ನಡುರಸ್ತೆಯಲ್ಲಿಯೇ ನಿಂದಿಸಿ, ಆಕೆಯ ಜುಟ್ಟನ್ನು ಹಿಡಿದು ಹಲ್ಲೆ ನಡೆಸಿದ್ದರು.

ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ

ಇಷ್ಟಕ್ಕೇ ಸುಮ್ಮನಾಗದೇ ಮಹಿಳೆಯ ಮನೆಯ ಬಳಿ ಬಂದು ಬಾಗಿಲು ತೆರೆಯುವಂತೆ ಒತ್ತಾಯಿಸಿದ್ದರು. ಮಹಿಳೆಗೆ ಬೆದರಿಕೆ ಹಾಕಿದ್ದ ಆರೋಪದಲ್ಲಿಯೂ ಸಹ ಕಾಮಾಕ್ಷಿಪಾಳ್ಯದಲ್ಲಿ ಕೇಸ್ ದಾಖಲಾಗಿತ್ತು. ಆದರೂ ಆಕೆಗೆ ಕರೆ ಮಾಡಿ ಬಲವಂತಪಡಿಸಿದ್ದಾಗಿಯೂ ಮಹಿಳೆ ಹೇಳಿದ್ದಾಳೆ. ಮಹಿಳೆಯ ದೂರಿನ ಆಧಾರ ಮೇಲೆ ಬಸವೇಶ್ವರನಗರ ಪೊಲೀಸರು ದೂರು ದಾಖಲಿಸಿದ್ದು, ಪ್ರೊ.ಬಿ.ಸಿ.ಮೈಲಾರಪ್ಪ ಬಂಧಿಸಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *