ಕಸ ಎಸೆದಿದ್ದಲ್ಲದೆ ನಗರ ಸಭೆ ಸಿಬ್ಬಂದಿಗೇ ಆವಾಜ್​: ಯುವಕನ ದ್ವಿಚಕ್ರ ವಾಹನ ​ವಶಕ್ಕೆ

ಕಸ ಎಸೆದಿದ್ದಲ್ಲದೆ ನಗರ ಸಭೆ ಸಿಬ್ಬಂದಿಗೇ ಆವಾಜ್​: ಯುವಕನ ದ್ವಿಚಕ್ರ ವಾಹನ ​ವಶಕ್ಕೆ


ಚಿಕ್ಕಬಳ್ಳಾಪುರ, ಅಕ್ಟೋಬರ್ 31: ಎಲ್ಲೆಂದರಲ್ಲಿ ಕಸ ಹಾಕುವವರ ಮನೆ ಬಾಗಿಲಿಗೇ ಕಸದ ರಾಶಿ ಸುರಿಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ, ಇತ್ತ ಚಿಕ್ಕಬಳ್ಳಾಪುರದ ರಸ್ತೆಗೆ ಕಸದ ರಾಶಿ (ಕಸ)ಸುರಿದ ಯುವಕನ ಬೈಕ್ ವಶಪಡಿಸಿಕೊಳ್ಳಲಾಗಿದೆ. ರಸ್ತೆಯಲ್ಲಿ ಕಸ ಸುರಿಯುವವರ ವಿರುದ್ಧ ನಗರಸಭೆ ದಂಡ ವಿಧಿಸಿ, ದಂಡ ಕಟ್ಟದ ಯುವಕನ ಬೈಕ್ ನಗರಸಭೆ ಸಿಬ್ಬಂದಿ ವಶಕ್ಕೆ ಪಡೆದಿರುವ ಘಟನೆ ನಗರದ ಕಂದವಾರ ರಸ್ತೆಯಲ್ಲಿ ನಡೆದಿದೆ. ಬೈಕ್ ನಲ್ಲಿ ಕಸದ ಕವರ್ ತಂದು ಯುವಕ ಸುರಿಯುತ್ತಿದ್ದ ವೇಳೆ ಆ ಬಗ್ಗೆ ಚಿಕ್ಕಬಳ್ಳಾಪುರ ನಗರಸಭೆ ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ. ಕಸ ಹಾಕಿದ್ದಕ್ಕೆ ದಂಡ ಕಟ್ಟುವಂತೆ ಹೇಳಿದ್ದಾರೆ. ಈ ವೇಳೆ ದಂಡ ಕಟ್ಟಲ್ಲ ಏನ್ ಮಾಡ್ತಿರೋ ಮಾಡ್ಕೊಳ್ಳಿ ಅಂತ ಯುವಕನ ಆವಾಜ್ ಹಾಕಿದ್ದಾನೆ. ಹೀಗಾಗಿ ಆತನ ಬೈಕ್ ಸೀಜ್ ಮಾಡಿ ಪಾಠ ಕಲಿಸಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *