
ದರ್ಶನ್ ಮತ್ತು ಪವಿತ್ರಾ ಗೌಡ ಅವರಿಬ್ಬರೂ 2014 ರಿಂದಲೇ ಜೊತೆಗಿದ್ದಾರೆ ಎನ್ನಲಾಗುತ್ತಿದೆ. ಕಳೆದ ವರ್ಷ ಕೂಡ, ದರ್ಶನ್, ಪವಿತ್ರಾ ಗೌಡ ಹಾಗೂ ಪವಿತ್ರಾ ಗೌಡ ಮಗಳು ಒಟ್ಟಿಗೇ ಇರುವ ಫೋಟೋಗಳು ವೈರಲ್ ಅಗಿತ್ತು. ಇದೀಗ, ಕೇಸ್ ತನಿಖೆ ಹಂತದಲ್ಲಿ ಇರುವಾಗ ಮತ್ತೊಮ್ಮೆ ಪವಿತ್ರಾ ಗೌಡ, ದರ್ಶನ್ ಫೋಟೋ ವೈರಲ್ ಆಗಿದೆ!
ಇದೀಗ ಹೊಸದೊಂದು ಸುದ್ದಿ ಕರ್ನಾಟಕದ ತುಂಬೆಲ್ಲಾ ಸ್ಫೋಟವಾಗಿದೆ. ಅದು ನಟ ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡ ಅವರು ಮದುಮಕ್ಕಳ ಗೆಟಪ್‌ನಲ್ಲಿರುವ ಫೋಟೋ. ಅದರಲ್ಲಿ ನಟ ದರ್ಶನ್ ಅವರು ಮದುಮಗನ ಗೆಟಪ್‌ನಲ್ಲಿ ಹಾಗೂ ಮಟಿ ಪವಿತ್ರಾ ಗೌಡ ಕೊರಳಲ್ಲಿ ಅರಿಶಿನ ದಾರ ಇರೋದು..! ಹಾಗಿದ್ದರೆ ಇದೇನು?
ವೈರಲ್ ಆಗಿರುವ ಫೋಟೋದಲ್ಲಿ ದರ್ಶನ್ ಪವಿತ್ರಾ ನವ ದಂಪತಿಗಳ ರೀತಿ ಪೋಸ್ ಕೊಟ್ಟಿದ್ದಾರೆ. ಅದರಲ್ಲಿ ನೋಡಿದರೆ ಅವರಿಬ್ಬರೂ ಮದುವೆ ಆಗಿರೋ ತರಹವೇ ಇದೆ. ಹಾಗಿದ್ದರೆ ನಿಜವಾಗಿಯೂ ಅವರಿಬ್ಬರ ಮಧ್ಯೆ ಇರುವ ಸಂಬಂಧವೇನು? ನಟ ದಶ್ನ್ ಅವರು ಖಾಸಗಿಯಾಗಿ ಎಲ್ಲೋ ಒಂದು ಕಡೆ ನಟಿ ಪವಿತ್ರಾ ಗೌಡ ಅವರಿಗೆ ತಾಳಿ ಕೊಟ್ಟಿದ್ದಾರೆಯೇ ಎಂಬ ಪ್ರಶ್ನೆಯೀಗ ಹಲವರಲ್ಲಿ ಮೂಡಿದೆ.
ದರ್ಶನ್ ಮತ್ತು ಪವಿತ್ರಾ ಗೌಡ ಅವರಿಬ್ಬರೂ 2014 ರಿಂದಲೇ ಜೊತೆಗಿದ್ದಾರೆ ಎನ್ನಲಾಗುತ್ತಿದೆ. ಕಳೆದ ವರ್ಷ ಕೂಡ ನಟ ದರ್ಶನ್, ನಟಿ ಪವಿತ್ರಾ ಗೌಡ ಹಾಗೂ ಪವಿತ್ರಾ ಗೌಡ ಮಗಳು ಒಟ್ಟಿಗೇ ಇರುವ ಫೋಟೋಗಳು ಕೂಡ ವೈರಲ್ ಅಗಿತ್ತು. ಇದೀಗ, ಕೇಸ್ ತನಿಖೆ ಹಂತದಲ್ಲಿ ಇರುವಾಗ ಮತ್ತೊಮ್ಮೆ ನಟಿ ಪವಿತ್ರಾ ಗೌಡ ಜೊತೆಗಿರುವ ದರ್ಶನ್ ಫೋಟೋ ವೈರಲ್ ಆಗಿದೆ, ಅದೂ ಕೂಡ ಮದುಮಕ್ಕಳ ಗೆಟಪ್‌ನಲ್ಲಿ! ಹಾಗಿದ್ರೆ ನಿಜವಾಗಿಯೂ ದರ್ಶನ್ ಬಾಳಲ್ಲಿ ಅದೇನು ನಡೆದಿದೆ? ಈ ಸಂಗತಿಯೀಗ ತೀವ್ರ ಕುತೂಹಲ ಮೂಡಿಸಿದೆ. ಮುಂದೇನು ಎಂಬುದನ್ನು ಕಾದು ನೋಡಬೇಕಿದೆ!