ಶ್ವಾನಗಳು (ನಾಯಿ) ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿ ಯಾವುದು ಇಲ್ಲ. ಇವುಗಳು ಮನುಷ್ಯನ ಆಪ್ತ ಸ್ನೇಹಿತ ಅಂತಾನೇ ಹೇಳಬಹುದು. ಮನೆಯ ಸದಸ್ಯರಂತೆ ಇರುವ ಶ್ವಾನ ಮನೆಗೆ (ಮಾಲೀಕ) ನಿಷ್ಠಾವಂತರಾಗಿರುತ್ತಾರೆ. ಮಾಲಕಿ ಹೇಳಿದ ಮಾತನ್ನು ಚಾಚು ತಪ್ಪದಂತೆ ಪಾಲಿಸಿದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಹೌದು, ತನ್ನ ಪರ್ಸ್‌ನ್ನು ಯಾರು ಮುಟ್ಟದಂತೆ ನೋಡಿಕೋ ಎಂದಿದ್ದೇ ತಡ, ಅತ್ತ ಇತ್ತ ಹೋಗದೇ ಈ ಶ್ವಾನವು ತನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಶ್ವಾನವು ಕರ್ತವ್ಯ ನಿಭಾಯಿಸಿದ ರೀತಿಯನ್ನು ಮೆಚ್ಚಿದೆ.
ಈ ಶ್ವಾನದ ಕಾಯಕ ನಿಷ್ಠೆ ನೋಡಿ
maxthe goldenretrieverr ಹೆಸರಿನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಈ ವಿಡಿಯೋದಲ್ಲಿ ಮನೆ ಮಾಲಕಿ ಶ್ವಾನದ ಬಳಿ ತನ್ನ ಪರ್ಸ್‌ನ್ನು ಯಾರು ಮುಟ್ಟದಂತೆ ನೋಡಿಕೋ, ತುಂಬಾ ದುಡ್ಡಿದೆ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾಳೆ. ಶ್ವಾನವು ಮಾಲಕಿಯ ಪರ್ಸ್‌ನ್ನು ಬಾಯಲ್ಲಿ ಕಚ್ಚಿಕೊಂಡು ಹೋಗಿ ಸೋಫಾದ ಮೇಲೆ ಮಲಗಿಕೊಂಡು ಕುಳಿತುಕೊಂಡಿದೆ. ಮಹಿಳೆಯ ಮಕ್ಕಳು ಅಮ್ಮನ ಪರ್ಸ್, ಸಾವಿರ ರೂ ಕೊಡು ಎಂದಾಗ ಕೋಪದಲ್ಲಿ ಬೊಗಳಿ ಪರ್ಸ್ ಅನ್ನು ಯಾರು ಮುಟ್ಟದಂತೆ ನೋಡಿಕೊಂಡರು ಎಂದು ತನ್ನ ಹತ್ರ ಯಾರು ಬರಬೇಡಿ ಎಂದು ಗದರುವುದನ್ನು ನೋಡಬಹುದು.
ಇದನ್ನೂ ಓದಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಇದನ್ನೂ ಓದಿ: ನೀರಿನಲ್ಲಿ ಆಟ ಆಡುತ್ತಿದ್ದ ಕಂದಮ್ಮನಿಗೆ ಗದರಿ ಬಾಲವನ್ನು ಹಿಡಿದು ಮೇಲೆ ಎಳೆದೊಯ್ದ ತಾಯಿ ಶ್ವಾನ
ಈ ವಿಡಿಯೋ ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು 3 ಇದ್ದಿದ್ದು, ಒಬ್ಬ ಬಳಕೆದಾರ ಇವನಿಗಿಂತ ನಿಷ್ಠಾವಂತ ಕಾಲುಗಾರ ಇರಲು ಸಾಧ್ಯವಿಲ್ಲ. ಇತರರ ನಂಬಿಕೆಗೆ ಉದಾಹರಣೆಯೇ ಈ ಶ್ವಾನ ಎಂದು ಕಾಮೆಂಟ್ ಮಾಡಲಾಗಿದೆ. ಮತ್ತೊಬ್ಬರು, ಆ ಮಹಿಳೆಗೆ ಮಕ್ಕಳಿಗಿಂತ ಈ ಶ್ವಾನದ ಮೇಲೆ ನಂಬಿಕೆ ಜಾಸ್ತಿ ಎಂದು ಹೇಳಿದರು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 1:09 pm, ಶುಕ್ರ, 31 ಅಕ್ಟೋಬರ್ 25