Viral: ಮಗಳಿಗೆ ಆಕ್ಸಿಡೆಂಟ್ ಆಗಿದೆ ಅಂದ್ರೂ ದುಡಿಮೆ ಮುಖ್ಯ ಎಂದ ಟ್ಯಾಕ್ಸಿ ಡ್ರೈವರ್; ಹೀಗೆನ್ನಲು ಕಾರಣ ಇದೆ ನೋಡಿ

Viral: ಮಗಳಿಗೆ ಆಕ್ಸಿಡೆಂಟ್ ಆಗಿದೆ ಅಂದ್ರೂ ದುಡಿಮೆ ಮುಖ್ಯ ಎಂದ ಟ್ಯಾಕ್ಸಿ ಡ್ರೈವರ್; ಹೀಗೆನ್ನಲು ಕಾರಣ ಇದೆ ನೋಡಿ


ಹೆಚ್ಚಿನವರು ತಮ್ಮ ಹೆಂಡ್ತಿ ಮಕ್ಕಳಿಗಾಗಿ ದೂರದ ಬೆಂಗಳೂರಲ್ಲೋ, ಮುಂಬೈಯಲ್ಲಿ ಸಣ್ಣ ಪುಟ್ಟ ಉದ್ಯೋಗ (ಉದ್ಯೋಗ) ಮಾಡ್ತಾರೆ. ತನ್ನ ದುಡಿಮೆಯ ಹಣದಿಂದ ಹೆಂಡ್ತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆದರೆ ತನ್ನಿಂದ ತನ್ನ ಹೆಂಡ್ತಿ ಮಕ್ಕಳ ಸಮಸ್ಯೆಯಾಗಿದೆ ಎಂದು ಕರೆ ಬಂದರೆ ಆ ಸನ್ನಿವೇಶ ಹೇಗಿರಬಹುದು ಒಮ್ಮೆ ನೋಡಿ. ಮುಂಬೈನಲ್ಲಿ (ಮುಂಬೈ) ಟ್ಯಾಕ್ಸಿ ಓಡಿಸಿ ಜೀವನ ನಡೆಸುತ್ತಿರುವ ವ್ಯಕ್ತಿಗೆ ನಿಮ್ಮ ಮಗಳಿಗೆ ಅಪಘಾತವಾಗಿದೆ ಎಂದು ಕರೆ ಬಂದಿದೆ. ಈ ಟ್ಯಾಕ್ಸಿಯಲ್ಲಿ ಪ್ರಯಾಣಿಸುವ ವ್ಯಕ್ತಿಯೂ ತಂದೆಯೊಬ್ಬರ ಆತಂಕ, ಚಡಪಡಿಕೆ ಹೇಗಿತ್ತು ಎಂದು ಹೇಳಿದ್ದಾರೆ. ಈ ಟ್ಯಾಕ್ಸಿ ಚಾಲಕ ಹೇಳಿದ ಮಾತು ಈ ವ್ಯಕ್ತಿಯ ಮನಸ್ಸನ್ನು ನಾಟಿದೆಯಂತೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಟ್ಯಾಕ್ಸಿ ಡ್ರೈವರ್ ಮಾತು ಕೇಳಿ ಶಾಕ್ ಆದ ಪ್ರಯಾಣಿಕ

ಮೆಹುಲ್ ಆರ್ ಥಕ್ಕರ್ ಹೆಸರಿನ ಎಕ್ಸ್ ಖಾತೆಯಲ್ಲಿ ದಾದರ್‌ನಲ್ಲಿ ಕಾಳಿ-ಪೀಲಿ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಅನಿರೀಕ್ಷಿತವಾಗಿ ಸಂಭವಿಸಿದ ಸನ್ನಿವೇಶವನ್ನು ವ್ಯಕ್ತಿಯೊಬ್ಬ ಹಂಚಿಕೊಂಡಿದ್ದಾನೆ. ಈ ಪೋಸ್ಟ್‌ನಲ್ಲಿ ಒಬ್ಬ ವ್ಯಕ್ತಿ, ನಾನು ಮುಂಬೈನ ದಾದರ್‌ನಲ್ಲಿ ಕಾಳಿ-ಪೀಲಿ ಟ್ಯಾಕ್ಸಿಯಲ್ಲಿದ್ದೆ.. ದಾರಿ ಮಧ್ಯದಲ್ಲಿ, ಚಾಲಕನಿಗೆ ಅವನಿಂದ ಕರೆ ಬಂತು. ಅವನ ಮಗಳು ಅಪಘಾತಕ್ಕೀಡಾಗಿದ್ದಳು. ಭಯವು ತಕ್ಷಣ ಅವನನ್ನು ಆವರಿಸಿಕೊಳ್ಳುವುದನ್ನು ನಾನು ನೋಡಿದೆ. ನಾನು ಅವನನ್ನು ಕ್ಯಾಬ್ ನಿಲ್ಲಿಸಲು ಕೇಳಿದಾಗ, ಅವನ ಕೈಗಳು ನಡುಗುತ್ತಿದ್ದವು, ಅವನ ಧ್ವನಿಯೇ ಬರದಂತೆ ಆಯಿತು. ಅವನು ತಕ್ಷಣ ತನ್ನ ಹೆಂಡತಿಗೆ ಕರೆ ಮಾಡಿ ಘಟನೆಯನ್ನು ವಿವರಿಸಿ ಅಲ್ಲಿಗೆ ಹೋಗುವಂತೆ ಹೇಳಿದನು ಎಂದು ಆ ಸಂದರ್ಭವನ್ನು ವಿವರಿಸಲಾಗಿದೆ.

ಇದನ್ನೂ ಓದಿ

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಆ ಬಳಿಕ ನಾವು ಅವನಿಗೆ ಮಾಹಿತಿ ನೀಡಿದ ವ್ಯಕ್ತಿಯೊಂದಿಗೆ ಮಾತನಾಡಿದೆವು. ಅದೃಷ್ಟವಶಾತ್, ಗಾಯ ಅಷ್ಟೇನು ದೊಡ್ಡದಾಗಿರಲಿಲ್ಲ. ಅವಳು ವಯಸ್ಸಾಗಿತ್ತು (ಬಹುಶಃ ಕೈ ಮುರಿದಿರಬಹುದು). ನಾನು ಮಾಡಬಹುದಾದ ಏಕೈಕ ವಿಷಯವೆಂದರೆ ಅವನಿಗೆ ಗಾಬರಿಯಾಗುವ ಬದಲು ನಿಧಾನವಾಗಿ ಉಸಿರಾಡಲು ಹೇಳಿದೆ. ಆದರೆ ಆ ನಂತರದಲ್ಲಿ ಅವನು ನಾನು ಮನೆಗೆ ಹೋಗಬೇಕು. ನನ್ನ ಕುಟುಂಬಕ್ಕೆ ಈಗ ಅಲ್ಲಿ ನನ್ನ ಅವಶ್ಯಕತೆ ಇದೆ. ಆದರೆ ನಾನು ಹೋದರೆ, ನಾನು 10 ಏನು ಆದಾಯವೇ ಇರಲ್ಲ. ಮನೆಗೆ ಹೋದರೆ ಹಣ ಬಂತು ಎಂದನು ಈ ಮಾತು ನನ್ನ ಮನಸ್ಸಿಗೆ ತಟ್ಟಿತು ಎಂದು ಹೇಳಿದರು.

ನಾವು ಹಲವಾರು ಕೆಲಸ-ಜೀವನ ಸಮತೋಲನ, ರಜೆಗಳು, ಸಿಎಲ್, ಪಿ ಎಲ್, ಮಾನಸಿಕ ಆರೋಗ್ಯ ದಿನಗಳ ಬಗ್ಗೆ ಮಾತನಾಡುತ್ತೇವೆ. ಆದರೆ ನಮ್ಮ ಸುತ್ತಲೂ ಈ ಆಫರ್ ಇಲ್ಲದೇ ದುಡಿಯುವ. ಪಡೆದ ರಜೆಗಳಿಲ್ಲ, ಸುರಕ್ಷತಾ ಜಾಲವಿಲ್ಲ, ಬ್ಯಾಕಪ್ ಯೋಜನೆಯೂ ಇಲ್ಲ. ದಿನದಿಂದ ದಿನಕ್ಕೆ ಇವರ ಜೀವನವು ನಿಜವಾಗಿಯೂ ಎಲ್ಲರಿಗೂ ವಿಭಿನ್ನವಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಲಂಡನ್‌ನಲ್ಲಿ ಬಿಹಾರಿ ವ್ಯಕ್ತಿಯ ಕೈ ಹಿಡಿದ ಸಮೋಸಾ ವ್ಯಾಪಾರ, ದಿನದ ಗಳಿಕೆ ಕೇಳಿದ್ರೆ ನೀವು ಶಾಕ್ ಆಗ್ತೀರಾ

ಅಕ್ಟೋಬರ್ 29 ರಂದು ಹಂಚಿಕೊಂಡಿದ್ದಾರೆ ಈ ಪೋಸ್ಟ್ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಮಗಳು ಕೆಲಸ ಮುಖ್ಯವೇ ಎಂದು ಪ್ರಶ್ನೆ ಮಾಡಲಾಗಿದೆ. ನೀವು ಆ ಟ್ಯಾಕ್ಸಿ ಡ್ರೈವರ್ ಗೆ ಸಹಾಯ ಮಾಡಬಹುದಿತ್ತು ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ಮಾತು ಮನಸ್ಸು ಮುಟ್ಟುತ್ತದೆ. ನಿಜವಾಗಿ ಬದುಕು ಹೀಗೇ ಅಲ್ವಾ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *