Headlines

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ: ಪ್ರೆಸಿಡೆನ್ಸಿ ಲೀಗಲ್ ಇಂಡಸ್ಟ್ರಿ ಇಂಟರ್‌ಫೇಸ್ ಸಮಿಟ್ 2025 ಸಂಪನ್ನ

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ: ಪ್ರೆಸಿಡೆನ್ಸಿ ಲೀಗಲ್ ಇಂಡಸ್ಟ್ರಿ ಇಂಟರ್‌ಫೇಸ್ ಸಮಿಟ್ 2025 ಸಂಪನ್ನ


ಬೆಂಗಳೂರು, ಅಕ್ಟೋಬರ್ 31: ವಕೀಲರಾದವರಿಗೆ ಹಣ ಗಳಿಸುವುದು ಆರಂಭದ ಗುರಿಯಾಗಬಾರದು, ಸತ್ಯನಿಷ್ಠೆಯಿಂದ ಸಮಾಜ ಸೇವೆ ಮಾಡುವುದೇ ಮುಖ್ಯವಾಗಬೇಕು ಎಂದು ಹಿರಿಯ ವಕೀಲ ಉದಯ ಹೊಳ್ಳ ಹೇಳಿದ್ದಾರೆ. ಪ್ರೆಸಿಡೆನ್ಸಿ ಯೂನಿವರ್ಸಿಟಿಯ ಸ್ಕೂಲ್ ಆಫ್ ಲಾ ಸಂಸ್ಥೆಯು ನಿರ್ವಹಿಸಲಾಗಿದ್ದ ಪ್ರೆಸಿಡೆನ್ಸಿ ಲೀಗಲ್ ಇಂಡಸ್ಟ್ರಿ ಇಂಟರ್ಫೇಸ್ ಸಮಿಟ್ 2025 ರ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ವಕೀಲ ವೃತ್ತಿಯು ಒಂದು ಪವಿತ್ರ ಮತ್ತು ಸೇವಾಭಾವದ ವೃತ್ತಿಯಾಗಿದೆ. ನ್ಯಾಯ, ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ನಿರಂತರ ಜ್ಞಾನಾಸಕ್ತಿ ಪ್ರತಿಯೊಬ್ಬ ವಕೀಲರಿಗೂ ಇರಬೇಕಾದ ಗುಣಗಳು ಹೇಳಿದರು.

ಕಾರ್ಯಕ್ರಮದ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿದ್ದ ಕೆಪಿಎಂಜಿ (ಕೆಪಿಎಂಜಿ) ಇಂಡಿಯಾದ ಎಜುಕೇಶನ್ ಮತ್ತು ಸ್ಕಿಲ್ ಡೆವಲಪ್ಮೆಂಟ್ ವಿಭಾಗದ ರಾಷ್ಟ್ರೀಯ ನಾಯಕ ನಾರಾಯಣನ್ ರಾಮಸ್ವಾಮಿ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ ಉದ್ಯಮಕ್ಕೆ ತಕ್ಕಂತೆ ಸಿದ್ಧರಾಗಬೇಕು.

ಇದನ್ನೂ ಓದಿ: ಸೈನಿಕರ ಶಾಲಾ ಪ್ರವೇಶ ಪರೀಕ್ಷಾ ನೋಂದಣಿ ಶೀಘ್ರದಲ್ಲೇ ಮುಕ್ತಾಯ; ಕೂಡಲೇ ಅರ್ಜಿ ಸಲ್ಲಿಸಿ

ಸನ್ಮಾನ ಕಾರ್ಯಕ್ರಮ

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ 2

ಉದಯ ಹೊಳ್ಳ ಅವರನ್ನು ಸನ್ಮಾನಿಸಲಾಯಿತು.

ಉದಯ ಹೊಳ್ಳ, ರಾಮಸ್ವಾಮಿ ಮತ್ತು ಡಾ. ಸರೋಜ್ ಶರ್ಮಾ (ಡೀನ್, ಕಾನೂನು ಶಾಲೆ) ಅವರನ್ನು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಚಾನ್ಸಲರ್ ಡಾ. ನಿಸ್ಸಾರ್ ಅಹಮದ್ ಸನ್ಮಾನಿಸಿದರು. ಒಂದು ದಿನದ ಈ ಸಮಿತಿಯಲ್ಲಿ ಪ್ರಮುಖ ಸಂಸ್ಥೆಗಳ ಗಣ್ಯರನ್ನ ಒಳಗೊಂಡ ನಾಲ್ಕು ವಿಶಿಷ್ಟ ಪ್ಯಾನೆಲ್ ಚರ್ಚೆಗಳು ನಡೆದವು. ಅಕಾಡೆಮಿಕ್ ವಲಯ ಮತ್ತು ಕಾನೂನು ಕ್ಷೇತ್ರದ ಸಹಕಾರವನ್ನು ಸುಧಾರಿಸುವ ಜೊತೆಗೆ ಜ್ಞಾನ ವಿನಿಮಯಕ್ಕಾಗಿ ವೇದಿಕೆ ಒದಗಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *