02-12-202508-11-2025ರವರಗೆ ನವೆಂಬರ್ ಮೊದಲ ವಾರದಿಂದ ಸ್ವಂತ ಉದ್ಯಮಕ್ಕೆ ಹೆಚ್ಚಿನ ಲಾಭ. ಅನ್ಯಾನ್ಯ ವೃತ್ತಿಯವರು ಸಮಯ ಸಂದರ್ಭಗಳ ಆಧಾರದ ಮೇಲೆ ತಮ್ಮ ಆರ್ಥಿಕ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. ಎಲ್ಲರೂ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ನಿಮ್ಮ ವರ್ತನೆ ಹಾಗೂ ಕಾರ್ಯಕುಶಲತೆಯು ಭವಿಷ್ಯವನ್ನು ನಿರ್ಧರಿಸುವುದು. ಇರುವಲ್ಲಿಯೇ ಹಿಡಿದಂದವಾಗಿ ವಿಹರಿಸಿ, ಖುಷಿಪಡಿ. ಹಣಕ್ಕಿಂತ ಆರೋಗ್ಯ ಮುಖ್ಯ ನಿಮ್ಮ ತಲೆಯಲ್ಲಿ ಸದಾ ಇರಬೇಕಾದ ಮಂತ್ರಿ.
ಮೇಷ ರಾಶಿ :
ನವೆಂಬರ್ ತಿಂಗಳ ಮೊದಲ ವಾರದಲ್ಲಿ ನೀವು ಕೆಲಸದಲ್ಲಿ ಹೊಸ ಯೋಜನೆಗಳನ್ನು ಪಡೆದು ಹೊಸ ಸವಾಲುಗಳನ್ನು ಎದುರಿಸಬೇಕಾಗುವುದು. ಕರ್ಮಾಧಿಪತಿ ದ್ವಾದಶದಲ್ಲಿ ಇರುವ ಕಾರಣ ನೀವು ಅದನ್ನು ಧೈರ್ಯದಿಂದ ನಿಭಾಯಿಸುತ್ತೀರಿ. ಮೇಲಧಿಕಾರಿಗಳು ನಿಮ್ಮ ಪ್ರತಿಭೆಯನ್ನು ಮೆಚ್ಚುವವರು. ಹಳೆಯ ಪ್ರಯತ್ನಗಳಿಗೆ ಉನ್ನತಿಯು ದೊರೆಯುವ ಸಾಧ್ಯತೆಯಿದೆ. ವ್ಯವಹಾರದಲ್ಲಿ ಹೊಸ ಹೂಡಿಕೆ ಆಲೋಚಿಸುತ್ತಿದೆ, ಇದು ಸೂಕ್ತ ಸಮಯ. ಆದರೆ ಆತುರಾತುರವಾಗಿ ಏನನ್ನೂ ಮಾಡುವುದು ಬೇಡ.
ವೃಷಭ ರಾಶಿ :
ಈ ವಾರ ನಿಮ್ಮ ಸ್ಥಿರತೆ ಮತ್ತು ಶಾಂತತೆಯೇ ಯಶಸ್ಸಿನ ಮೂಲಮಂತ್ರ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಸಿಗುತ್ತದೆ. ಇರುವ ಹೊಣೆಗಾರಿಕೆಯನ್ನು ಹೊಸ ಹೊಣೆಗಾರಿಕೆಯ ಜೊತೆ ನಿಭಯಿಸಬೇಕು. ಅವನನ್ನು ಜಾಣ್ಮೆಯಿಂದ ಮಾಡುವಿರಿ. ಹಣಕಾಸಿನ ವಿಷಯಗಳಲ್ಲಿ ಲಾಭದಾಯಕ ಸಮಯ. ವಿಶೇಷವಾಗಿ ಹಿಂದಿನ ಹೂಡಿಕೆಗಳು ಹೆಚ್ಚಿನ ಫಲ ನೀಡುತ್ತವೆ. ಕರ್ಮಾಧಿಪತಿ ಏಕಾದಶದಲಿದ್ದು ಬ್ಯಾಂಕಿಂಗ್ ಉದ್ಯೋಗದವರಿಗೆ ಶುಭಫಲ. ವ್ಯವಹಾರಿಕ ವ್ಯಕ್ತಿಗಳಿಗೆ ಹೊಸ ಒಪ್ಪಂದಗಳ ಸಾಧ್ಯತೆ.
ಮಿಥುನ ರಾಶಿ :
ಈ ರಾಶಿಯವರಿಗೆ ಮೊದಲ ವಾರ ಬುದ್ಧಿವಂತಿಕೆ ಮತ್ತು ಸಂವಹನ ಕೌಶಲಗಳೇ ಈ ವಾರ ನಿಮ್ಮ ಉನ್ನತ ಮಟ್ಟಕ್ಕೆ ತಲುಪುತ್ತವೆ. ನಿಮ್ಮ ಐಡಿಯಾಗಳು ಸಂಸ್ಥೆಯ ಅಭಿವೃದ್ಧಿಗೆ ನಿಮ್ಮ ಏಳ್ಗೆಗೂ ದಾರಿಯಾಗಬಹುದು. ಮಾಧ್ಯಮ ಹಾಗೂ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ವ್ಯವಹಾರ ಚುರುಕಾಗಿರುವ ವಾರ. ಉದ್ಯೋಗಾಧಿಪತಿ ದ್ವಿತೀಯದಲ್ಲಿ ಇದ್ದು ಹೊಸ ಕೌಶಲ್ಯ ಕಲಿಯಲು ಸಮಯ ವಿನಿಯೋಗಿಸಿದರೆ, ಹೊಸ ನಗರಕ್ಕೆ ತಂದರೆ ಲಾಭ. ಆದರೆ ಅತಿಯಾದ ಒತ್ತಡದಿಂದ ದೈಹಿಕ ಶ್ರಮ ಹೆಚ್ಚಾಗಲಿದೆ, ವಿಶ್ರಾಂತಿಯೂ ಅಗತ್ಯವಿರಲಿದೆ.
ಕರ್ಕಾಟಕ ರಾಶಿ :
ಈ ವಾರ ನಿಮಗೆ ಕಳೆದ ವಾರದ ಒತ್ತಡಗಳಿಂದ ಮುಕ್ತವಾಗುವ ಪ್ರೆಶ್ ಎನಿಸುವುದು. ಕೆಲಸದ ಸ್ಥಿರತೆಗೆ ಇದೂ ಮುಖ್ಯ ಕಾರಣ. ಹಳೆಯ ಪ್ರಯತ್ನಗಳು ಫಲ ನೀಡುತ್ತವೆ. ವಿಶೇಷವಾಗಿ ನೀವು ಕಳೆದ ತಿಂಗಳ ಪ್ರಾರಂಭದ ಯೋಜನೆಗಳು ಫಲಕಾರಿ. ಉದ್ಯೋಗಾಧಿಪತಿ ಸ್ವಸ್ಥಾನದಲ್ಲಿ ಹೊಸ ಉದ್ಯೋಗವನ್ನು ಹುಡುಕುತ್ತಿದ್ದವರಿಗೆ ಉತ್ತಮ ಪ್ರಾಪ್ತಿಯೂ ಆಗುವುದು. ಮನೆಯ ಸದಸ್ಯರ ಬೆಂಬಲವು ನಿಮ್ಮ ಭರವಸೆ ಹೊಂದಿದೆ. ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ, ಆಡಳಿತ ಕ್ಷೇತ್ರದವರಿಗೆ ಉತ್ತಮ ಸಮಯ.
ಸಿಂಹ ರಾಶಿ :
ರಾಶಿ ಚಕ್ರದ ಐದನೇ ರಾಶಿಗೆ ಈ ವಾರ ನಿಮಗೆ ನಾಯಕತ್ವ ಮಾಡಲು ಅವಕಾಶ ಸಿಗುತ್ತದೆ. ಹೊಸ ಪ್ರಾಜೆಕ್ಟ್‌ಗಳು ಅಥವಾ ತಂಡದ ನೇತೃತ್ವ ನಿಮಗೆ ಬರಬಹುದು. ನಿಮ್ಮ ಮಾತಿನ ಪ್ರಭಾವದಿಂದ ಜನರು ಪ್ರೇರಿತರಾಗುತ್ತಾರೆ. ಅಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ಆದರೆ ಅಹಂಕಾರ ಅಥವಾ ಅತಿವಿಶ್ವಾಸ ತೋರಿಸಬೇಡಿ. ಅದು ತಂಡದ ಸಂಬಂಧವನ್ನು ಹಾಳುಮಾಡಬಹುದು. ಉದ್ಯಮಿಗಳಿಗೆ ಹೊಸ ವ್ಯವಹಾರ ಒಪ್ಪಂದ ಸಾಧ್ಯ.
ಇದನ್ನೂ ಓದಿ: ಕರ್ನಾಟಕ ಖ್ಯಾತ ಜ್ಯೋತಿಷಿ ಹೇಳಿದಂತೆ ಮುಖ್ಯಮಂತ್ರಿ ಆಗುವ ಯೋಗ ಯಾರಿಗಿದೆ? ಇಲ್ಲಿದೆ ಒಗಟು ಬಿಡಿಸುವ ಪ್ರಯತ್ನ
ಕನ್ಯಾ ರಾಶಿ :
ಆರನೇ ರಾಶಿಯವರಿಗೆ ಈ ವಾರದ ಕೆಲಸದ ಸ್ಥಳದಲ್ಲಿ ಸವಾಲುಗಳು ಸಣ್ಣದಾದರೂ ಬಹಳ ಚಿಂತನೆಯಿಂದ ಎದುರಿಸಬೇಕು. ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಉದ್ಯೋಗಾಧಿಪತಿ ದ್ವಿತೀಯದಲ್ಲಿದ್ದು ಅಂಕಿ-ಅಂಶ, ಲೆಕ್ಕಪತ್ರ, ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿ. ನಿಮ್ಮ ಯೋಜನೆಗಳು ಫಲ ನೀಡುವ ಹಾದಿಯಲ್ಲಿ ಇರುವುದು. ಆದರೆ ಅತಿಯಾದ ಚಿಂತೆಯಿಂದ ದೂರವಿರಿ. ಸಮಯ ಮತ್ತು ಶ್ರಮ ಎರಡನ್ನೂ ಸಮತೋಲನದಲ್ಲಿ ಇರಿಸಿಕೊಳ್ಳಿ.
ತುಲಾ ರಾಶಿ :
ನವೆಂಬರ್ ತಿಂಗಳ ಈ ವಾರದಲ್ಲಿ ನಿಮ್ಮ ವೃತ್ತಿಯಲ್ಲಿ ತೋರುವ ಮನೋಹರ ನಡೆವಳಿಕೆಗಳು ಸಮತೋಲನದಲ್ಲಿ ಇರಲಿ. ಕಲೆ, ವಿನ್ಯಾಸ, ಕಾನೂನು, ಸಾಮಾಜಿಕ ಕಾರ್ಯದಲ್ಲಿ ವಾಹಕರಾಗಿ ಕಾರ್ಯ ಮಾಡುವವರಿಗೆ ಅತ್ಯುತ್ತಮ ವಾರ. ಕೆಲಸದ ಸ್ಥಳದಲ್ಲಿ ಒತ್ತಡ ಇರುತ್ತದಾದರೂ, ನೀವು ಸೌಹಾರ್ದದಿಂದ ನಿರ್ವಹಿಸುತ್ತೀರಿ. ಮೇಲಧಿಕಾರಿಗಳ ವಿಶ್ವಾಸ ಗಳಿಸುವ ಸಮಯವೂ ಇದೆ. ಹೊಸ ಅವಕಾಶಗಳು ಬಾಗಿಲಲ್ಲಿ ಕಾಡಿವೆ.
ವೃಶ್ಚಿಕ ರಾಶಿ :
ಕುಜಾಧಿಪತ್ಯದ ರಾಶಿಗೆ ಈ ವಾರದ ಕೆಲಸದಲ್ಲಿ ಗಂಭೀರವಾದ ನಿಮ್ಮದೇ ಆದ ಮಹತ್ತ್ವದ ವೈಶಿಷ್ಟ್ಯವನ್ನು ನೀವು ತೋರಿಸುತ್ತೀರಿ. ಹೊಸ ಯೋಜನೆಗಳು ನಿಮ್ಮ ಕೈಯಲ್ಲಿ ಬದಲಾಗುತ್ತಲೇ ಇರುತ್ತವೆ. ಉದ್ಯೋಗಾಧಿಪತಿ ದ್ವಾದಶ ಸ್ಥಾನದಲ್ಲಿ ಇರುವ ಕಾರಣ ಸಂಶೋಧನೆ, ಸಂಶೋಧನೆ, ಮನೋವಿಜ್ಞಾನ, ತಂತ್ರಜ್ಞಾನ ಕ್ಷೇತ್ರದವರಿಗೆ ಉತ್ತಮ ಪ್ರಗತಿ. ಸಹೋದ್ಯೋಗಿಗಳ ವಿಶ್ವಾಸ ಗಳಿಸಿ, ಆದರೆ ನಿಮ್ಮ ಕಾರ್ಯಗಳನ್ನು ಅತಿಯಾಗಿ ಹಂಚಿಕೊಳ್ಳಬೇಡಿ. ಹಣಕಾಸಿನ ವಿಷಯಗಳಲ್ಲಿ ಸೂಕ್ಷ್ಮ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಧನು ರಾಶಿ :
ಈ ವಾರ ಗುರುವಿನ ಆಧಿಪತ್ಯದ ಈ ರಾಶಿಗೆ ಹೊಸ ಅವಕಾಶಗಳು ನಿಮ್ಮ ಮುಂದೆ ತೆರೆದುಕೊಳ್ಳುತ್ತವೆ. ವಿದೇಶಿ ಸಂಪರ್ಕ, ಪ್ರವಾಸ ಅಥವಾ ತರಬೇತಿ ಸಂಬಂಧಿತ ಕೆಲಸಗಳಲ್ಲಿ ಯಶಸ್ಸು. ಹೊಸ ವಿಚಾರವನ್ನು ಕಲಿಯಲು ಉತ್ಸಾಹ ಹೆಚ್ಚುತ್ತದೆ. ವಿದ್ಯಾರ್ಥಿಗಳು ಶಿಕ್ಷಕರಿಂದ ಅನೇಕ ಉತ್ತಮ ಅಂಶಗಳನ್ನು ಕಲಿಯುತ್ತಾರೆ. ತಮ್ಮ ಉದ್ಯೋಗಕ್ಕೆ ಅಳವಡಿಸಿಕೊಳ್ಳುವ ಚಿಂತನೆಯನ್ನೂ ಮಾಡುತ್ತಾರೆ. ನಿಮ್ಮ ದೃಷ್ಟಿಕೋನ ಮತ್ತು ಪ್ರೇರಣೆ ಇತರರಿಗೆ ಮಾದರಿಯಾಗುತ್ತದೆ. ಪ್ರಮೋಷನ್ ಗೆ ಆಸಕ್ತಿ ಇಲ್ಲದಿದ್ದರೂ ಅಧಿಕಾರ ನಿಮ್ಮನ್ನು ಸೆಳೆಯುತ್ತದೆ.
ಮಕರ ರಾಶಿ :
ನೆವೆಂಬರ್ ನ ವಾರದಲ್ಲಿ ನಿಮಗೆ ಕೆಲಸದ ಒತ್ತಡ ಹೆಚ್ಚಾದರೂ, ನಿಮ್ಮ ಶಿಸ್ತಿನಿಂದ ಎಲ್ಲವನ್ನು ನಿಭಾಯಿಸುತ್ತೀರಿ. ಅಧಿಕಾರಿಗಳು ನಿಮ್ಮ ಶ್ರಮ ಮತ್ತು ಶ್ರದ್ಧೆಯನ್ನು ಗುರುತಿಸುತ್ತಾರೆ. ಉದ್ಯೋಗಸಧಿಪತಿ ಸ್ವಸ್ಥಾನದಲ್ಲಿ ಇದ್ದುದರಿಂದ ಹಣಕಾಸಿನ ವೃದ್ಧಿ ಸಾಧ್ಯ. ಹಳೆಯ ಯೋಜನೆಗಳಿಂದ ನಿಧಾನವಾಗಿ ಫಲ ಪಡೆಯಿರಿ. ವ್ಯವಹಾರಿಕ ವ್ಯಕ್ತಿಗಳಿಗೆ ಹೊಸ ಹೂಡಿಕೆಗಳಿಂದ ಲಾಭ. ಆರೋಗ್ಯದ ಕಡೆ ಸ್ವಲ್ಪ ಗಮನ ಇರಲಿ.
ಕುಂಭ ರಾಶಿ :
ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಈ ವಾರ ತರಬೇತಿಯಿಂದ ನಿಮ್ಮ ಆಲೋಚನೆಗಳು ಹೊಸ ದಿಕ್ಕು ತೋರಿಸುತ್ತವೆ. ಉದ್ಯೋಗಾಧಿಪತಿ ಸ್ವಸ್ಥಾನದಲ್ಲಿದ್ದು ತಂತ್ರಜ್ಞಾನ, ಸಂಶೋಧನೆ, ಆವಿಷ್ಕಾರ, ವಿಜ್ಞಾನ ಕ್ಷೇತ್ರದವರಿಗೆ ಅಭಿವೃದ್ಧಿ ಕೊಡಿಸುವನು. ಯೋಜನೆಗಳಲ್ಲಿ ನಿಮ್ಮದು ಪಾತ್ರ ಪ್ರಮುಖವಾಗಿರುತ್ತದೆ. ಪ್ರಜ್ಞಾವಂತರ ತಂಡದ ಸಹಕಾರದಿಂದ ವೇಗವಾಗಿ ಕೆಲಸ ಮುಗಿಸಲು ಸಾಧ್ಯ. ಅನಭವದಿಂದ ಬಂದ ತೋರಿಸಲಾರಿರಿ.
ಮೀನ ರಾಶಿ :
ಗುರುವಿನ ಆಪತ್ಯದ ಈ ರಾಶಿಗೆ ತಿಂಗಳ ಮೊದಲ ವಾರ ನಿಮ್ಮ ಕಲಾತ್ಮಕ ಮತ್ತು ಮಾನವೀಯ ಗುಣಗಳು ಪ್ರಕಟವಾಗುತ್ತವೆ. ಉದ್ಯೋಗಾಧಿಪತಿ ಪಂಚಮದಲ್ಲಿ ಉಚ್ಚನಾಗಿದ್ದರೆ ಕಲೆ, ಸಂಗೀತ, ಸೇವಾ, ಶಿಕ್ಷಣ ಕ್ಷೇತ್ರದಿಂದ ಪ್ರಶಂಸೆಯನ್ನು ಕೊಡಿಸುವನು. ಹಳೆಯ ಕೆಲಸಗಳಲ್ಲಿ ಹೊಸ ಬದಲಾವಣೆಗಳನ್ನು ಮಾಡಿಕೊಳ್ಳಿ. ವೃತ್ತಿಯಲ್ಲಿ ಭಾವನಾತ್ಮಕ ನಿರ್ಧಾರಗಳಿಗೆ ಅವಕಾಶ ಕೊಡದೇ ಬುದ್ಧಿವಂತಿಕೆ ಬಳಸಿ. ನಿಮ್ಮ ನಿಷ್ಠೆ ಎಲ್ಲರೂ ಮೆಚ್ಚುವರು.
– ಲೋಹಿತ ಹೆಬ್ಬಾರ್ – 8762924271 (ಏನು ಅಪ್ಲಿಕೇಶನ್ ಮಾತ್ರ)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ