Headlines

ಷೇರೇ ಇರಲಿ, ಬ್ಯುಸಿನೆಸ್ಸೇ ಇರಲಿ, ಹಣ ಹಾಕುವ ಮುನ್ನ ಪರಿಗಣಿಸಬೇಕಾದ ಅಂಶಗಳಿವು…

ಷೇರೇ ಇರಲಿ, ಬ್ಯುಸಿನೆಸ್ಸೇ ಇರಲಿ, ಹಣ ಹಾಕುವ ಮುನ್ನ ಪರಿಗಣಿಸಬೇಕಾದ ಅಂಶಗಳಿವು…


ಎಲ್ಲಾ ಹೂಡಿಕೆಗಳು ರಿಟರ್ನ್ಸ್ ತರುತ್ತವೆ ಎಂದು ನಿಶ್ಚಿತವಾಗಿ ಹೇಳಲು ಆಗುವುದಿಲ್ಲ. ಇದು ಷೇರುಗಳಿಗೆ ಅನ್ವಯವಾಗುತ್ತದೆ, ಹೊಸ ಬ್ಯುಸಿನೆಸ್‌ಗಳಿಗೆ ಅನ್ವಯವಾಗುತ್ತದೆ. ಯಾವ ರೀತಿಯ ಬ್ಯುಸಿನೆಸ್‌ನಲ್ಲಿ ಹೂಡಿಕೆ ಮಾಡಬೇಕು, ಯಾವ ಷೇರುಗಳಲ್ಲಿ ಹೂಡಿಕೆ (ಷೇರು ಮಾರುಕಟ್ಟೆ) ಮಾಡಬೇಕೆಂದು ನಿರ್ಧರಿಸುವುದು ಅಷ್ಟು ಸುಲಭವಲ್ಲ. ಯಾವುದೋ ಆಕರ್ಷಣೆಗೆ ಒಳಗಾಗಿ ಹೂಡಿಕೆ ಮಾಡುವುದು ಡೇಂಜರ್. ಬ್ಯೂಸಿನೆಸ್ ಅಥವಾ ಷೇರಿನ ಬಗ್ಗೆ ಕೂಲಂಕಷವಾಗದಿದ್ದರೂ ಒಂದಷ್ಟು ಪ್ರಮುಖ ಅಂಶಗಳನ್ನು ಅಧ್ಯಯನ ನಡೆಸುವುದು ಬಹಳ ಮುಖ್ಯ. ಅದರಲ್ಲೂ ಷೇರು ಹೂಡಿಕೆದಾರರು ಪರಿಗಣಿಸಬೇಕಾದ ಪ್ರಮುಖ ಅಂಶಗಳ ವಿವರ ಇಲ್ಲಿದೆ…

ಮಾರುಕಟ್ಟೆ ಎಷ್ಟು ಆಳ ತಲುಪುತ್ತಿದೆ ನೋಡಿ…

ಕಂಪನಿಯು ತನ್ನ ಉದ್ಯಮದ ಎಷ್ಟು ಆಳ ಮುಟ್ಟಿದೆ ನೋಡಿ. ಅಂದರೆ, ಮಾರುಕಟ್ಟೆಯಲ್ಲಿ ಎಲ್ಲಾದರೂ ಅಲ್ಲಿ ವ್ಯಾಪಿಸಿದ್ದರೆ ಅದರ ಪ್ರಗತಿಯಲ್ಲಿ ಹೆಚ್ಚೇನೂ ಬದಲಾವಣೆ ಆಗದೇ ಇರಬಹುದು. ಮಾರುಕಟ್ಟೆಯ ರೀಚ್ ಪ್ರಸ್ತುತ ಕಡಿಮೆಯಾಗಿದೆ, ಅದು ಕಂಪನಿಯನ್ನು ವಿಸ್ತರಿಸುವ ಅವಕಾಶವನ್ನು ಹೊಂದಿದೆ, ಅಂತಹ ಕಂಪನಿಯನ್ನು ಪರಿಗಣಿಸಬಹುದು.

ಇದನ್ನೂ ಓದಿ: ಸಾಲ ಬಳಸಿ ಸಾಹುಕಾರರಾದವರಿದ್ದಾರೆ… ಒಳ್ಳೆ ಸಾಲ, ಕೆಟ್ಟ ಸಾಲದ ಮಧ್ಯೆ ವ್ಯತ್ಯಾಸ ತಿಳಿದಿರಿ…

ಹಿಂದಿನ ಆದಾಯ ವೃದ್ಧಿ

ಕಂಪನಿ ಕಳೆದ 3-5 ವರ್ಷಗಳಲ್ಲಿ ಎಷ್ಟು ಆದಾಯ ವೃದ್ಧಿ ಕಂಡಿದೆ. ಎರಡಂಕಿಯ ಸಿಎಜಿಆರ್ ಇದ್ದರೆ ಉತ್ತಮ.

ಕ್ಯಾಷ್ ಫ್ಲೋ ಗಮನಿಸಿ…

ಕೆಲವು ಕಂಪನಿಗಳು ಬಹಳ ಅಧಿಕ ಆದಾಯ ಮತ್ತು ಲಾಭವನ್ನು ತೋರಿಸುತ್ತವೆ. ಆದರೆ, ಅವುಗಳ ಬಳಿ ಕ್ಯಾಷ್ ಉಳಿದಿರುವುದೇ ಇಲ್ಲ. ಎಲ್ಲವೂ ಕೂಡ ವರ್ಕಿಂಗ್ ಕ್ಯಾಪಿಟಲ್‌ಗೆ ಬಳಕೆ ಆಗುತ್ತಿದೆ. ಒಂದು ಕಂಪನಿಯು ತನ್ನ ನಿವ್ವಳ ಲಾಭದ ಹಣವನ್ನು ಕ್ಯಾಶ್ ಫ್ಲೋ ಆಗಿ ಪರಿವರ್ತಿಸುತ್ತದೆ ಎಂದು ಗಮನಿಸಿ.

ಇದನ್ನೂ ಓದಿ: 24 ಕ್ಯಾರಟ್ ಚಿನ್ನದ ಮೇಲೆ ಸಿಕ್ಕಾಪಟ್ಟೆ ಹರಿದುಬಂದ ಹೂಡಿಕೆ; ಚಿನ್ನದ ಬೆಲೆ ಇಷ್ಟೊಂದು ಏರಲು ಇದಪ್ಪ ಕಾರಣ..!

ಅನುಭೋಗ ಹೆಚ್ಚಿರುವ ಉದ್ಯಮಗಳಿಗೆ ಆದ್ಯತೆ

ಬಿ2ಬಿ (ಉದ್ಯಮ ಉದ್ಯಮಗಳ ನಡುವಿನ ಬ್ಯೂಸಿನೆಸ್) ಮತ್ತು ಬಿ2ಜಿ (ಸರ್ಕಾರದೊಂದಿಗೆ ಬ್ಯೂಸಿನೆಸ್) ವ್ಯಾಲ್ಯುಯೇಶನ್‌ಗಿಂತ ಬಿ2ಸಿ ದೊಡ್ಡದು. ಬಿ2ಸಿ ಎಂದರೆ ಕನ್ಶಂಪ್ಷನ್ ಆಧಾರಿತವಾದ ಬ್ಯೂಸಿನೆಸ್. ಉದಾಹರಣೆಗೆ, ಎಫ್ಎಂಸಿಜಿ ಸೆಕ್ಟರ್ ಇತ್ಯಾದಿ.

ಸ್ಪರ್ಧಾತ್ಮಕತೆ ಎಷ್ಟಿದೆ ನೋಡಿ…

ನೀವು ಕಣ್ಣಿಟ್ಟಿರುವ ಶೇರಿನ ಉದ್ಯಮವನ್ನು ಗಮನಿಸಿ. ಅದರಲ್ಲಿ ಎಷ್ಟು ಕಂಪನಿಗಳು ಬ್ಯುಸಿನೆಸ್ ಮಾಡುತ್ತಿವೆ, ಎಷ್ಟು ಸ್ಪರ್ಧೆ ಇದೆ ನೋಡಿ. ಕಡಿಮೆ ಸ್ಪರ್ಧೆ ಇದ್ದರೆ ಉತ್ತಮ. ಅಲ್ಲಿರುವ ಕಂಪನಿಗಳು ಎಷ್ಟು ಆದಾಯ ಪಡೆಯುತ್ತಿವೆ, ಎಷ್ಟು ಲಾಭವಾಗುತ್ತಿದೆ ಎಂಬುದನ್ನು ಗಮನಿಸಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *