Headlines

ಪ್ರತ್ಯೇಕ ಘಟನೆ: ನೇಣು ಹಾಕಿಕೊಂಡು ವಿದ್ಯಾರ್ಥಿ ಸಾವು, ಕೆಲಸದಿಂದ ತೆಗೆದಿದ್ದಕ್ಕೆ ಗುತ್ತಿಗೆ ನೌಕರ ಆತ್ಮಹತ್ಯೆಗೆ ಯತ್ನ

ಪ್ರತ್ಯೇಕ ಘಟನೆ: ನೇಣು ಹಾಕಿಕೊಂಡು ವಿದ್ಯಾರ್ಥಿ ಸಾವು, ಕೆಲಸದಿಂದ ತೆಗೆದಿದ್ದಕ್ಕೆ ಗುತ್ತಿಗೆ ನೌಕರ ಆತ್ಮಹತ್ಯೆಗೆ ಯತ್ನ


ಬಾಗಲಕೋಟೆ, ಅಕ್ಟೋಬರ್ 31: ಪುನರ್ವಸತಿ ಕೇಂದ್ರದಲ್ಲಿ 9ನೇ ತರಗತಿ ವಿದ್ಯಾರ್ಥಿ (ವಿದ್ಯಾರ್ಥಿ) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (ಸಾವು) ಶರಣಾಗಿರುವಂತಹ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದಲ್ಲಿ ನಡೆದಿದೆ. ಆಕಾಶ ಹೆದ್ದಾರಿ(15) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಜಮಖಂಡಿಯ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಓದುತ್ತಿದ್ದರು. ಸದ್ಯ ಜಮಖಂಡಿ ಗ್ರಾಮೀಣ ಪೊಲೀಸರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆಗೆ ನಿಖರ ಮಾಹಿತಿ ಕಲೆ ಹಾಕಲಾಗುತ್ತಿದೆ.

ಏಕಾಏಕಿ ಕೆಲಸದಿಂದ ತೆಗೆದಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನ

ಏಕಾಏಕಿ ಕೆಲಸದಿಂದ ತೆಗೆದಿದ್ದಕ್ಕೆ ಮನನೊಂದು ಗ್ರಾಮ ಪಂಚಾಯತ್ ಗುತ್ತಿಗೆ ನೌಕರ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜೇವರ್ಗಿ ತಾಲೂಕಿನ ರಂಜುಣಗಿಯಲ್ಲಿ ನಡೆದಿದೆ. ಪರಮಾನಂದ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಗುತ್ತಿಗೆ ನೌಕರ. ಸದ್ಯ ಕಲಬುರಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಪರಮಾನಂದಗೆ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ: ದೇವನಹಳ್ಳಿ: ಒಂದೇ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆ ಯತ್ನ; ಇಬ್ಬರ ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ

ಪರಮಾನಂದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ರಂಜುಣಗಿ ಗ್ರಾಪಂ. ಕಛೇರಿಯಲ್ಲಿ ಕೆಲಸ ಮಾಡುತ್ತಿದೆ. ಕೆಲವರ ಮಾತು ಕೇಳಿ ಪಿಡಿಯೊ ರುದ್ರಯ್ಯ ಕೆಲಸದಿಂದ ತೆಗೆದಿದ್ದಾರೆ. ಯಾವುದೇ ನೋಟಿಸ್ ನೀಡದೆ ಕೆಲಸದಿಂದ ತೆಗೆದಿರುವ ಆರೋಪ ಕೂಡ ಕೇಳಿಬಂದಿದೆ.

ಪೊಲೀಸರಿಂದ ಹಲ್ಲೆ ಆರೋಪ: ಯುವಕ ಆತ್ಮಹತ್ಯೆಗೆ ಯತ್ನ

ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಂತಹ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಬಳಿಯ ಚಿಕ್ಕಬೆನ್ನೂರಿನಲ್ಲಿ ನಡೆದಿದೆ. ಕಿರಣ್(24) ಆತ್ಮಹತ್ಯೆಗೆ ಯತ್ನಸಿದ ಯುವಕ. ಪೊಲೀಸರಿಂದ ಹಲ್ಲೆ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಬಾಲಕಿ ಹತ್ಯೆ ಪ್ರಕರಣ: ಆರೋಪಿಗೂ 2ನೇ ಮದುವೆ, ತನಿಖೆ ವೇಳೆ ಇನ್ಸ್ಟಾಗ್ರಾಮ್ ರೋಮಿಯೋ ಅನ್ನೋದು ಬಯಲು

ಕಳ್ಳತನ ಪ್ರಕರಣವೊಂದರ ವಿಚಾರಣೆಗೆ ಕಿರಣ್‌ನನ್ನು ಅ.27ರಂದು ಠಾಣೆಗೆ ಕರೆದೊಯ್ದು ಪೊಲೀಸರಿಂದ ಹಲ್ಲೆ ನಡೆಸಲಾಗಿದೆ. ಪೊಲೀಸರು ಹಿಂಸೆಯಿಂದ ಬೇಸತ್ತು ಕಿರಣ್ ಆತ್ಮಹತ್ಯೆಗೆ ಯತ್ನಿಸಿದ್ದರು. ಸಂತೆಬೆನ್ನೂರು ಪೊಲೀಸರ ವಿರುದ್ಧ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *