Headlines

ಬೆಂಗಳೂರಿನಲ್ಲಿ ಮತ್ತೊಂದು ಕೋ-ಆಪರೇಟಿವ್ ಸೊಸೈಟಿಯಲ್ಲಿ ಹಗರಣ: 70 ಕೋಟಿ ರೂ. ವಂಚನೆ

ಬೆಂಗಳೂರಿನಲ್ಲಿ ಮತ್ತೊಂದು ಕೋ-ಆಪರೇಟಿವ್ ಸೊಸೈಟಿಯಲ್ಲಿ ಹಗರಣ: 70 ಕೋಟಿ ರೂ. ವಂಚನೆ


ಬೆಂಗಳೂರು, ಅಕ್ಟೋಬರ್ 31: ಅಲ್ಲಿದ್ದವರಲ್ಲಿ ನಿವೃತ್ತ ಸಿಬ್ಬಂದಿಗಳೇ ಹೆಚ್ಚು. ಭವಿಷ್ಯಕ್ಕೆ ಸಹಾಯ ಆಗುತ್ತೆ ಅಂತಾ ಉಳಿತಾಯ ಹಣವನ್ನು ತಾವೇ ಮಾಡಿಕೊಂಡಿದ್ದ EPFO ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿನಲ್ಲಿ ಹೂಡಿಕೆ ಮಾಡಲಾಗಿತ್ತು. ತಿಂಗಳ ಪ್ರತಿ ಬಡ್ಡಿ ಹಣ ಖಾತೆಗೆ ಬರುತ್ತಲೇ ಇತ್ತು. ಆದರೆ ಮೂರು ತಿಂಗಳಿನಿಂದ ಹಣ ಬಂದಿರಲಿಲ್ಲ. ಓಡೋಡಿ ಬಂದು ಪರಿಶೀಲಿಸಿದಾಗ 70 ಕೋಟಿ ರೂ. ವಂಚನೆ (ವಂಚನೆ) ನಡೆದಿರುವುದು ಬಯಲಾಗಿದೆ.

EPFO ಸಿಬ್ಬಂದಿ ಮತ್ತು ನಿವೃತ್ತ ಸಿಬ್ಬಂದಿಗಳು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು. ಇವರೆಲ್ಲಾ ತಮಗೆ ಅನುಕೂಲವಾಗಲಿ ಅಂತಾ 61 ವರ್ಷದ ಹಿಂದೆ EPFO ​​ಸಿಬ್ಬಂದಿಗಳೇ ಸೇರಿ EPFO ​​ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಂತಾ ರಚಿಸಿಕೊಂಡಿದ್ದಾರೆ. ಬಂದ ಉಳಿತಾಯದ ಹಣವನ್ನೆಲ್ಲಾ ಇದರಲ್ಲಿ ಇರಿಸಲಾಗಿದೆ. ಅವಶ್ಯಕತೆ ಇರುವ ಸಿಬ್ಬಂದಿಗಳಿಗೆ ಈ ಸೊಸೈಟಿ ಸಾಲವನ್ನು ಕೂಡ ನೀಡಲಾಗುವುದು. ಇಷ್ಟು ದಿನ ಆರಾಮಗೆ ವ್ಯವಹಾರ ನಡೆದುಕೊಂಡು ಬರುತ್ತಿತ್ತು. ಆದರೆ ಕಳೆದ ಮೂರು ತಿಂಗಳಿನಿಂದ ಯಾವಾಗ ಬಡ್ಡಿ ಹಣ ಬರುವುದು ಸ್ಟಾಪ್ ಆಯಿತೋ ಸಮಸ್ಯೆ ಶುರುವಾಗಿದೆ.

ಇದನ್ನೂ ಓದಿ: ಮನೆಕೆಲಸದಾಕೆಗೆ ಕೋಟಿ ರೂ ಮನೆ ಕೊಟ್ಟ ಒಡತಿ: ಆದ್ರೂ ತಿಂದ ಮನೆಗೆ ದ್ರೋಹ ಬಗೆದ್ಲು

ಎಲ್ಲಾ ಸಿಬ್ಬಂದಿಗಳು ಸೇರಿ ಈ ಸೊಸೈಟಿನಲ್ಲಿ 73 ಕೋಟಿ ರೂ. ಅಷ್ಟು ಹೂಡಿಕೆ ಮಾಡಿದರು. ಆದರೆ ಕಳೆದ 15 ವರ್ಷದಿಂದ SIO ಆಗಿರುವ ಗೋಪಿ ಗೌಡ ಮತ್ತು ಅಕೌಂಟೆಂಟ್ ಜಗದೀಶ್ ಸೇರಿ ಈ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು

ಬಡ್ಡಿ ಹಣ ಬರದಿದ್ದಾಗ ಬಂದು ಪರಿಶೀಲಿಸಿದಾಗ ಕೇವಲ 3 ಕೋಟಿ ರೂ. ಹಣವನ್ನು ಮಾತ್ರ ಸಾಲವಾಗಿ ಸೊಸೈಟಿ ನೀಡಿದ್ದು, ಉಳಿದ ಹಣ ಖಾತೆಯಲ್ಲಿ ಇಲ್ಲ ಅನ್ನೋದು ಗೊತ್ತಾಗಿದೆ. ತಕ್ಷಣ ಆತಂಕಗೊಂಡ ಸಿಬ್ಬಂದಿಗಳೆಲ್ಲ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಪಡೆದಿರುವ ಪೊಲೀಸರು ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ವೃದ್ಧಾಪ್ಯದಲ್ಲಿ ಮಹಿಳೆಯರ ಚಪಲ: ಬೆಂಗಳೂರಿನಲ್ಲಿ ವ್ಯಕ್ತಿ ಕಳೆದುಕೊಂಡಿದ್ದು ಲಕ್ಷ ಲಕ್ಷ ಹಣ

ಸದ್ಯ ದೂರು ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದು ವೇಳೆ ವಂಚನೆ ಆಗಿರುವುದು ಸತ್ಯವೇ ಆದರೆ ಪ್ರಕರಣ ಲಭ್ಯವಾಗುವಂತೆ ವರ್ಗಾವಣೆ ಆಗುವ ಸಾಧ್ಯತೆ ಇದೆ. ಅದೇನೇ ಹೇಳಿ ಕಷ್ಟ ಕಾಲದಲ್ಲಿ ಸಹಾಯ ಆಗುತ್ತೆ ಹಣ ಇಟ್ಟ ಹಿರಿಜೀವಗಳು ಅಂತಾ ಪೊಲೀಸ್ ಠಾಣೆಗೆ ಅಲೆಯಿರುವುದು ಮಾತ್ರ ವಿಪರ್ಯಾಸ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *