‘ಬಾಹುಬಲಿ: ದಿ ಎಪಿಕ್’ ಮೊದಲ ದಿನ ಕಲೆಕ್ಷನ್ ಎಷ್ಟು? ಬಾಕ್ಸ್ ಆಫೀಸ್​​ನಲ್ಲಿ ದಾಖಲೆ

‘ಬಾಹುಬಲಿ: ದಿ ಎಪಿಕ್’ ಮೊದಲ ದಿನ ಕಲೆಕ್ಷನ್ ಎಷ್ಟು? ಬಾಕ್ಸ್ ಆಫೀಸ್​​ನಲ್ಲಿ ದಾಖಲೆ


‘ಬಾಹುಬಲಿ: ದಿ ಬಿಗಿನಿಂಗ್’ (ಬಾಹುಬಲಿ) ಮತ್ತು ‘ಬಾಹುಬಲಿ: ದಿ ಕನ್ ಕ್ಲೂಷನ್’ ಸಿನಿಮಾಗಳು ಭಾರತೀಯ ಚಿತ್ರರಂಗದ ಅತ್ಯಂತ ಪ್ರಮುಖ ಸಿನಿಮಾಗಳು. ಭಾರತೀಯ ಚಿತ್ರರಂಗದ ಶಕ್ತಿ, ಕ್ರಿಯಾಶೀಲತೆಯನ್ನು ಜಗತ್ತಿಗೆ ಸಾರಿದ ಸಿನಿಮಾಗಳು. ರಾಜಮೌಳಿ ನಿರ್ದೇಶಿಸಿರುವ ಈ ಸಿನಿಮಾಗಳು ಇದೀಗ ‘ಬಾಹುಬಲಿ: ದಿ ಎಪಿಕ್’ ಹೆಸರಿನಲ್ಲಿ ಒಂದೇ ಸಿನಿಮಾ ಆಗಿ ಮರು ಬಿಡುಗಡೆ ಆಗಿವೆ. ನಿನ್ನೆ (ಅಕ್ಟೋಬರ್ 31) ‘ಬಾಹುಬಲಿ: ದಿ ಎಪಿಕ್’ ಮರು ಬಿಡುಗಡೆ ಆಗಿದ್ದು, ಸಿನಿಮಾ ಮೊದಲ ದಿನ ಗಳಿಸಿರುವ ಮೊತ್ತ ಎಷ್ಟು?

‘ಬಾಹುಬಲಿ’ ಸಿನಿಮಾಕ್ಕೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಇಂತಹ ‘ಬಾಹುಬಲಿ: ದಿ ಎಪಿಕ್’ ಸಿನಿಮಾವನ್ನು ಭಾರತದಿಂದ ವಿಶ್ವದ ಹಲವು ಪ್ರಮುಖ ರಾಷ್ಟ್ರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ಸಿನಿಮಾದ ಪ್ರಚಾರಕ್ಕಾಗಿ ಪ್ರಭಾಸ್, ರಾಣಾ ದಗ್ಗುಬಾಟಿ, ರಾಜಮೌಳಿ ಅವರ ವಿಶೇಷ ಸಂದರ್ಶನಗಳನ್ನು ಸಹ ಮಾಡಿದ್ದರು.

‘ಬಾಹುಬಲಿ: ದಿ ಎಪಿಕ್’ ಸಿನಿಮಾ ಭಾರತದಲ್ಲಿ ಮಾತ್ರ ಮೊದಲ ದಿನ ಸುಮಾರು 10 ಕೋಟಿ ರೂಪಾಯಿಗಳನ್ನು ಗಳಿಸಿದೆ. ಮರು ಬಿಡುಗಡೆ ಆದ ಸಿನಿಮಾ ಒಂದು ಮೊದಲ ದಿನವೇ ಇಷ್ಟು ದೊಡ್ಡ ಮೊತ್ತ ಗಳಿಕೆ ಮಾಡಿರುವುದು ಇದೇ ಮೊದಲು. ಮರು ಆದ ಇನ್ಯಾವ ಸಿನಿಮಾ ಕೂಡ ಇಷ್ಟು ದೊಡ್ಡ ಮೊತ್ತವನ್ನು ಬಾಕ್ಸ್ ಆಫೀಸ್ ನಲ್ಲಿ ಮಾಡಿದೆ.

ಇದನ್ನೂ ಓದಿ:’ಬಾಹುಬಲಿ’ ರೀ ರಿಲೀಸ್ ತಮನ್ನಾ ಅಭಿಮಾನಿಗಳಿಗೆ ಮತ್ತೆ ಬೇಸರ

ಇನ್ನು ಸಿನಿಮಾದ ಚಿತ್ರದ ಸೀಸ್ ಕಲೆಕ್ಷನ್ ಸುಮಾರು 3 ರಿಂದ ನಾಲ್ಕು ಕೋಟಿ ಆಗಿರಬಹುದು ಅಂದಾಜಿದೆ. ವಿಶೇಷವಾಗಿ ಉತ್ತರ ಅಮೆರಿಕ, ದುಬೈ ಇನ್ನಿತರ ಕಡೆಗಳಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಬಹಳ ಚೆನ್ನಾಗಿದೆ. ಈ ಭಾಗಗಳಲ್ಲಿ ‘ಬಾಹುಬಲಿ: ದಿ ಎಪಿಕ್’ ಸಿನಿಮಾ ಉತ್ತಮ ಗಳಿಕೆಯ ನಿರೀಕ್ಷೆಯಿದೆ.

‘ಬಾಹುಬಲಿ 1’ ಮತ್ತು ‘ಬಾಹುಬಲಿ 2’ ಸಿನಿಮಾಗಳನ್ನು ಒಟ್ಟಿಗೆ ಸೇರಿಸಿ ‘ಬಾಹುಬಲಿ: ದಿ ಎಪಿಕ್’ ಮಾಡಲಾಗಿದೆ. ಎರಡು ಸಿನಿಮಾಗಳಲ್ಲಿ ಹಲವಾರು ಭಾಗಗಳನ್ನು ಕತ್ತರಿಸಿ ‘ಬಾಹುಬಲಿ: ದಿ ಎಪಿಕ್’ ಸಿನಿಮಾವನ್ನು 3:43 ಗಂಟೆಗಳಿಗೆ ಇಳಿಸಲಾಗಿದೆ. ಈ ಎಡಿಟಿಂಗ್ ಪ್ರಕ್ರಿಯೆಯಲ್ಲಿ ಹಲವು ದೃಶ್ಯಗಳಿಗೆ ರಾಜಮೌಳಿ ಕತ್ತರಿ ಹಾಕಿದ್ದಾರೆ. ಮೊದಲ ಭಾಗದಲ್ಲಿದ್ದ ಸುದೀಪ್ ದೃಶ್ಯಗಳಿಗೆ ಕತ್ತರಿ ಹಾಕಿದ್ದಾರೆ. ತಮನ್ನಾ ಅವರ ಹಾಡಿಗೆ ಕತ್ತರಿ ಹಾಕಿದ್ದಾರೆ. ಅನುಷ್ಕಾ-ಪ್ರಭಾಸ್ ಹಾಡಿಗೆ ಕತ್ತರಿ ಹಾಕಿದ್ದಾರೆ. ರಾಜಮೌಳಿ ತಮ್ಮ ಅತಿಥಿ ಪಾತ್ರಕ್ಕೂ ಕತ್ತರಿ ಹಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *