Headlines

ರಾಜ್ಯೋತ್ಸವ ವಿಶೇಷ: ‘ಕಮಲ್-ರಜನಿ ಸೇರಿಸಿದರೆ ವಿಷ್ಣುವರ್ಧನ್’; ಸುಹಾಸಿನಿ

ರಾಜ್ಯೋತ್ಸವ ವಿಶೇಷ: ‘ಕಮಲ್-ರಜನಿ ಸೇರಿಸಿದರೆ ವಿಷ್ಣುವರ್ಧನ್’; ಸುಹಾಸಿನಿ


ಕಮಲ್ ಹಾಸನ್ (ಕಮಲ್ ಹಾಸನ್) ಅವರು ಚಿತ್ರರಂಗದಲ್ಲಿ ಮಾಡಿದ ಸಾಧನೆ ಎಂಥದ್ದು ಅಂತ ಗೊತ್ತು. ಅದೇ ರೀತಿ ರಜನಿಕಾಂತ್ ಕೂಡ ತಮಿಳು ಇಂಡಸ್ಟ್ರಿಯಲ್ಲಿ ಮಾಡಿದ ಸಾಧನೆ ದೊಡ್ಡದು. ಇಬ್ಬರ ಶಕ್ತಿ ಸೇರಿದರೆ ಅದೆಷ್ಟು ದೊಡ್ಡ ಪವರ್ ಆಗುತ್ತದೆ ಎಂಬ ಕಲ್ಪನೆ ಅನೇಕರಿಗೆ ಊಹೆಗೂ ಮೀರಿದ್ದು. ಆದರೆ, ಇವರಿಬ್ಬರು ಸೇರಿದರೆ ವಿಷ್ಣುವರ್ಧನ್ ಎಂದು ಸುಹಾಸಿನಿ ಹೇಳಿಕೆ ನೀಡಿದ್ದರು. ಈ ವಿಡಿಯೋ ಈಗ ವೈರಲ್ ಆಗಿದೆ. ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಸಾಧನೆ ತುಂಬಾನೇ ದೊಡ್ಡದು.

ವಿಷ್ಣುವರ್ಧನ್ ಅವರು ಕನ್ನಡ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರೂ ಎಂದರೂ ತಪ್ಪಾಗಲಿಕ್ಕಿಲ್ಲ. ಅವರು ನಟಿಸಿದ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಅವರು ನಟಿಸಿದ ಮೊದಲ ಚಿತ್ರ ‘ನಾಗರಹಾವು’ ಯಾರೂ ಸಾಕಷ್ಟು ದೊಡ್ಡ ಯಶಸ್ಸು ಕಂಡಿತು. ವಿಷ್ಣು ಹೀರೋ ಆಗಲು ಈ ಚಿತ್ರ ಬುನಾದಿ ಹಾಕಿ ಕೊಟ್ಟಿತ್ತು. ಆ ಬಳಿಕ ಅವರ ಸಾಲು ಸಾಲು ಹಿಟ್ ಕೊಟ್ಟರು.

ವಿಷ್ಣುವರ್ಧನ್ ಅವರು ಕನ್ನಡದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಪರಭಾಷೆಯಲ್ಲಿ ಅವರು ನಟಿಸಿದ್ದಾರೆ. ಅವರು ಬಾಲಿವುಡ್ ನಟ ಅಕ್ಷಯ್ ಕುಮಾರ್, ತಮಿಳು ನಟ ರಜನಿಕಾಂತ್ ಮೊದಲಾದವರ ಜೊತೆ ನಟಿಸಿದ್ದಾರೆ. ಅವರು ಮಾಡಿದ ಸಾಧನೆ ತುಂಬಾನೇ ದೊಡ್ಡದು. ವಿಷ್ಣುವರ್ಧನ್ ಸಾಮರ್ಥ್ಯ ಏನು ಎಂಬುದು ಅವರ ಜೊತೆ ಕೆಲಸ ಮಾಡಿದವರಿಗೆ.

ಇದನ್ನೂ ಓದಿ:ಡಾ ರಾಜ್ ಕುಮಾರ್, ವಿಷ್ಣುವರ್ಧನ್, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಘೋಷಣೆ

ವಿಷ್ಣುವರ್ಧನ್ ಅವರನ್ನು ಹತ್ತಿರದಿಂದ ಕಂಡವರು ಸುಹಾಸಿನಿ. ‘ಬಂಧನ’ ಸಿನಿಮಾದಲ್ಲಿ ಇವರ ಜೋಡಿ ಸಾಕಷ್ಟು ಗಮನ ಸೆಳೆಯಿತು. ‘ಮುತ್ತಿನ ಹಾರ’, ​​’ಮಾತಾಡ್ ಮಾತಾಡ್ ಮಲ್ಲಿಗೆ’ ಮೊದಲಾದ ಚಿತ್ರಗಳಲ್ಲಿ ಇವರು ನಟಿಸಿ ಗಮನ ಸೆಳೆದಿದ್ದಾರೆ. ವಿಷ್ಣು ಶಕ್ತಿಯಿಂದ ಕಂಡಿದ್ದರು ಸುಹಾಸಿನಿ. ವಿಷ್ಣು ಬಗ್ಗೆ ಅವರು ಪ್ರೀತಿಯಿಂದ ಮಾತನಾಡುತ್ತಿದ್ದರು.

‘ಕಮಲ್ ಹಾಸನ್, ರಜನಿಕಾಂತ್ ಕಂಬೈನ್ ಮಾಡಿದ್ರೆ ವಿಷ್ಣುವರ್ಧನ್. ಚಿರಂಜೀವಿ ಬಳಿ ನಾನು ಯಾವಾಗಲೂ ಹೇಳುತ್ತಾ ಇರುತ್ತೇನೆ. ವಿಷ್ಣು ಅವರು ಪ್ರಾಪರ್ ಹೀರೋ’ ಎಂದು ಸುಹಾಸಿನಿ ಅವರು ಹೇಳಿದ್ದಾರೆ. ಸುಹಾಸಿನಿ ಅವರಿಹೆ ವಿಷ್ಣು ಬಗ್ಗೆ ಅಪಾರ ಗೌರವ ಇದೆ. ವಿಷ್ಣುವರ್ಧನ್ ನಿಧನದ ಬಳಿಕವೂ ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 9:28 am, ಶನಿ, 1 ನವೆಂಬರ್ 25



Source link

Leave a Reply

Your email address will not be published. Required fields are marked *