Satish Jarkiholi vehicle fuel leak: ಬೆಳಗಾವಿಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಪಥಸಂಚಲನ ಪರಿವೀಕ್ಷಣಾ ವಾಹನದಲ್ಲಿ ದಿಢೀರ್ ಇಂಧನ ಸೋರಿಕೆಯಾಗಿದೆ. ಈ ಅನಿರೀಕ್ಷಿತ ಘಟನೆಯಿಂದಾಗಿ, ಕೊನೆ ಕ್ಷಣದಲ್ಲಿ ಸಚಿವರ ಪರಿವೀಕ್ಷಣೆಯನ್ನು ರದ್ದುಗೊಳಿಸಲಾಯಿತು.
15

Image Credit : Asianet News
ವಾಹನದಲ್ಲಿ ಇಂಧನ ಸೋರಿಕೆ
ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ ಕರೆದೊಯ್ಯಬೇಕಿದ್ದ ವಾಹನದಲ್ಲಿ ದಿಢೀರ್ ಇಂಧನ ಸೋರಿಕೆಯಾಗಿತ್ತು. ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
25
Image Credit : Asianet News
ಏರ್ ಗ್ಯಾಸ್ ಸಿಂಪಡಣೆ
ಸಚಿವರ ಪಥಸಂಚಲನ ಪರಿವೀಕ್ಷಣೆಗೆ ವಾಹನವನ್ನು ಸಹ ಹೂಗಳಿಂದ ಅಲಂಕರಿಸಲಾಗಿತ್ತು. ತೆರೆದ ವಾಹನದಲ್ಲಿ ಸಚಿವ ಸತೀಶ್ ಜಾರಕಿಹೊಳಿ ತೆರಳಬೇಕಿತ್ತು. ಕ್ರೀಡಾಂಗಣದಲ್ಲಿ ವಾಹನ ನಿಲ್ಲಿಸಿದಾಗ ಇಂಧನ ಸೋರಿಕೆಯಾಗುತ್ತಿರೋದು ಕಂಡು ಬಂದಿದೆ. ಇಂಧನ ಸೋರಿಕೆ ಹಿನ್ನೆಲೆಯಲ್ಲಿ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಯಿಂದ ಏರ್ ಗ್ಯಾಸ್ ಸಿಂಪಡಣೆ ಮಾಡಿದ್ದಾರೆ.
35
Image Credit : Asianet News
ದಿಢೀರ್ ಇಂಧನ ಸೋರಿಕೆಗೆ ಕಾರಣ ಏನು?
45
Image Credit : Asianet News
ಕನ್ನಡಮಯವಾದ ಬೆಳಗಾವಿ
55
Image Credit : Asianet News
ಕನ್ನಡ ರಾಜ್ಯೋತ್ಸವ
ನವೆಂಬರ್ 1ರಂದು ಆಚರಿಸಲಾಗುವ ಕನ್ನಡ ರಾಜ್ಯೋತ್ಸವು ಕರ್ನಾಟಕದ ಸಂಸ್ಥಾಪನಾ ದಿನವಾಗಿದೆ. 1956 ರ ನವೆಂಬರ್ 1 ರಂದು ಮೈಸೂರು ರಾಜ್ಯವನ್ನು (ಈಗಿನ ಕರ್ನಾಟಕ) ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳನ್ನು ಒಗ್ಗೂಡಿಸಿ ರಚಿಸಲಾಯಿತು. ಈ ಹಬ್ಬದ ಮುಖ್ಯ ಉದ್ದೇಶಗಳು ಕರ್ನಾಟಕದ ಏಕೀಕರಣವನ್ನು ಸ್ಮರಿಸುವುದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುವುದು, ಮತ್ತು ನಾಡಿನ ಸಾಧಕರನ್ನು ಗೌರವಿಸುವುದಾಗಿದೆ.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ 2025: ನಿಮ್ಮ ಆಪ್ತರಿಗೆ ಕನ್ನಡಿಗರ ಹಬ್ಬದ ಶುಭಾಶಯ ತಿಳಿಸಿ