ರಾಜ್ಯೋತ್ಸವ ವಿಶೇಷ: ಕನ್ನಡ ಮತ್ತು ಕನ್ನಡ ಚಿತ್ರರಂಗ

ರಾಜ್ಯೋತ್ಸವ ವಿಶೇಷ: ಕನ್ನಡ ಮತ್ತು ಕನ್ನಡ ಚಿತ್ರರಂಗ


ಇಂದು ಕನ್ನಡ ರಾಜ್ಯೋತ್ಸ, ಕನ್ನಡ ಚಿತ್ರರಂಗವು (ಸ್ಯಾಂಡಲ್ವುಡ್) ಕನ್ನಡ ಭಾಷೆ, ಕನ್ನಡ ಸಂಸ್ಕೃತಿ, ಇತಿಹಾಸದ ಪ್ರಮುಖ ಪ್ರಸಾರಕ ಮತ್ತು ಪ್ರಚಾರಕವಾಗಿಯೂ ಕಾರ್ಯನಿರ್ವಹಿಸುತ್ತಿದೆ. ಚಿತ್ರರಂಗವು ಕನ್ನಡ ಭಾಷೆ ಮತ್ತು ಕನ್ನಡಿಗರ ಏಳ್ಗೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಕನ್ನಡ ರಾಜ್ಯೋತ್ಸವದಂದು ಈ ಬಗ್ಗೆ ಒಂದು ಇಣುಕು ನೋಟ ಇಲ್ಲಿದೆ…

ಮದ್ರಾಸಿನಲ್ಲಿ ಅವಮಾನಗಳನ್ನು ಸಹಿಸಿಕೊಂಡು, ದಬ್ಬಾಳಿಕೆಗೆ ಒಳಪಟ್ಟು ಕಷ್ಟಗಳ ಮಧ್ಯೆಯೇ ಕನ್ನಡ ಸಿನಿಮಾಗಳನ್ನು ಚಿತ್ರೀಕರಿಸಿ ಕನ್ನಡಿಗರಿಗೆ ನೀಡುತ್ತಿದ್ದ ಚಿತ್ರರಂಗದ ಹಿರಿಯರು ದಿಟ್ಟ ನಿರ್ಧಾರ ಮಾಡಿ ಇಡೀ ಚಿತ್ರರಂಗವನ್ನು ಬೆಂಗಳೂರಿಗೆ ತಂದಿದ್ದು ಐತಿಹಾಸಿಕ ನಿರ್ಣಯ. ಇದರಿಂದ ಸಾಕಷ್ಟು ಮಂದಿ ಕನ್ನಡಿಗರಿಗೆ ಉದ್ಯೋಗ ದೊರಕಿತು, ಕನ್ನಡ ಚಿತ್ರರಂಗದ ಸ್ವಂತ ಕಾಲಮೇಲೆ ನಿಂತು, ಸ್ಪಷ್ಟ ಉದ್ಯಮವಾಗಿ ರೂಪುಗೊಳ್ಳುವಂತಾಯಿತು. ಮುಖ್ಯವಾಗಿ ಕನ್ನಡಿಗರ ಸ್ವಾಭಿಮಾನದ ಪರಿಚಯ ನೆರೆ ಹೊರೆಯವರಿಗೆ ಆಯಿತು.

ಐತಿಹಾಸಿಕ, ಸಾಮಾಜಿಕ ಹೀಗೆ ಹಲವು ವಿಧದ ಸಿನಿಮಾಗಳನ್ನು ನಿರ್ಮಿಸುವ ಮೂಲಕ ಕನ್ನಡಿಗರಲ್ಲಿ ಸಾಮಾಜಿಕ ಜಾಗೃತಿ, ವೈಚಾರಿಕ ಜಾಗೃತಿ, ಧಾರ್ಮಿಕ ಜಾಗೃತಿ ಮೂಡಿಸುವಲ್ಲಿ ಕನ್ನಡ ಸಿನಿಮಾಗಳು ಯಶಸ್ವಿ ಆಗಿವೆ. ‘ಬಂಗಾರದ ಮನುಷ್ಯ’, ‘ಮೇಯರ್ ಮುತ್ತಣ್ಣ’, ‘ಮಂತ್ರಾಲಯ ಮಹಾತ್ಮೆ’, ‘ಭೂತಯ್ಯನ ಮಗ ಅಯ್ಯು’ ಹೀಗೆ ಹಲವು ಸಿನಿಮಾಗಳನ್ನು ಉದಾಹರಣೆಯಾಗಿ ನೀಡಬಹುದು. ಸಾಕ್ಷರತೆಗಾಗಿ ಮಾಡಿದ ಸಿನಿಮಾಗಳು, ಜೀತ ವಿರೋಧಿ ಸಿನಿಮಾಗಳು, ಕುಡಿತ ವಿರೋಧಿ ಸಿನಿಮಾಗಳು ಇನ್ನೂ ಹಲವಾರು ಸಿನಿಮಾಗಳು ಸಾಮಾಜಿಕ ಬದಲಾವಣೆಗೆ ಕಾರಣವಾಗಿವೆ.

ಕನ್ನಡದ ಪರ, ಕನ್ನಡಿಗರ ಪರವನ್ನು ಕನ್ನಡ ಚಿತ್ರರಂಗ ಬಿಟ್ಟುಕೊಟ್ಟಿಲ್ಲ. ಗೋಕಾಕ್ ಚಳುವಳಿ ಅದಕ್ಕೆ ಮುಂಚಿನಿಂದಲೂ ಸಹ ಕನ್ನಡ ಚಿತ್ರರಂಗದ ಕನ್ನಡಿಗರ ಪರ ನಿಂತಿದೆ. ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಿದೆ. ಸಣ್ಣ-ಪುಟ್ಟ ನೈಸರ್ಗಿಕ ಅನಾಹುತಗಳಾದಾಗಲೂ ಸಹ ರಾಜ್, ವಿಷ್ಣುವರ್ಧನ್ ಕುಮಾರ್ ಸೇರಿದಂತೆ ಹಲವು ನಟ-ನಟಿಯರು ಬೀದಿಗೆ ಇಳಿದು ದೇಣಿಗೆ ಸಂಗ್ರಹಿಸಿದರು. ದೇಣಿಗೆ ಸಂಗ್ರಹಿಸಲು ನಾಟಕಗಳ ಪ್ರದರ್ಶನ ಏರ್ಪಡಿಸಲಾಗಿದೆ, ಇತ್ತೀಚೆಗೆ ಆ ಸಂಪ್ರದಾಯ ಇಲ್ಲ.

ಇದನ್ನೂ ಓದಿ:ಕನ್ನಡ ರಾಜ್ಯೋತ್ಸವ: ನವೆಂಬರ್ 1 ರಿಂದ ಎಲ್ಲ ಚಿತ್ರಮಂದಿರಗಳಲ್ಲಿ ಒಂದು ವಾರ ಕನ್ನಡ ಸಿನಿಮಾಗಳು ಕಡ್ಡಾಯ!

ಗೋಕಾಕ್ ಚಳುವಳಿ ಕರ್ನಾಟಕದ ಇತಿಹಾಸದಲ್ಲಿಯೇ ಅತ್ಯಂತ ಪ್ರಮುಖ ಚಳುವಳಿ. ಕನ್ನಡ ಚಿತ್ರರಂಗ ಕನ್ನಡದ ಪರವಾಗಿ ಎಷ್ಟು ಬದ್ಧತೆ ಇದೆ ಎಂಬುದಕ್ಕೆ ಉದಾಹರಣೆ. ಗೋಕಾಕ್ ಚಳುವಳಿಯನ್ನು ಮುನ್ನಡೆಸಿದೆ ಕನ್ನಡ ಚಿತ್ರರಂಗ. ಅದರಲ್ಲೂ ವಿಶೇಷವಾಗಿ ಡಾ ರಾಜ್ ಕುಮಾರ್. ಕರ್ನಾಟಕದ ಮೇಲೆ ಕನ್ನಡ ಭಾಷೆಯ ಮೇಲೆ ಗೋಕಾಕ್ ಚಳವಳಿಯ ಪ್ರಭಾವವನ್ನು ವಿವರಿಸುವುದು ಸುಲಭವಲ್ಲ.

ನೆಲ-ಜಲದ ವಿಷಯವಾಗಿಯೂ ಚಿತ್ರರಂಗ ಸದಾ ನಿಂತಿದೆ. ಬೆಳಗಾವಿ ಗಡಿ ಸಮಸ್ಯೆ, ಕಾಸರಗೋಡು ಸಮಸ್ಯೆಗಳ ಬಗ್ಗೆ ಚಿತ್ರರಂಗ ಸದಾ ಕನ್ನಡಪರ ನಿಲುವು ವ್ಯಕ್ತಪಡಿಸಿದೆ. ಇನ್ನು ಕಾವೇರಿ ಜಲ ವಿವಾದದಲ್ಲಂತೂ ಪ್ರತಿ ಬಾರಿಯೂ ಸಹ ಚಿತ್ರರಂಗದ ಹೋರಾಟದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ರಾಜ್ಕುಮಾರ್ ಇಂದು ಆರಂಭಿಸಿ ಈಗಿನ ಹಲವು ನಟರು ಸಹ ಕಾವೇರಿ ಹೋರಾಟದಲ್ಲಿದ್ದಾರೆ. 202 ಸಹ ಚಿತ್ರರಂಗ ಕಾವೇರಿ ಹೋರಾಟದಲ್ಲಿ 3 ರಿತ್ತು.

ಸಿನಿಮಾಗಳ ಮೂಲಕ ಕನ್ನಡತನದ ಬಗ್ಗೆ ಕನ್ನಡಿಗರಲ್ಲಿ ಹೆಮ್ಮೆ, ಅಭಿಮಾನ ಮೂಡಿಸುವ ಕಾರ್ಯವನ್ನು ಕನ್ನಡ ಚಿತ್ರರಂಗ ಮಾಡಿದೆ. ಭಾಷೆಯ ಹಿರಿಮೆ ಬಗ್ಗೆ, ನಾಡಿನ ಹಿರಿಮೆ ಕನ್ನಡ ಸಿನಿಮಾಗಳಲ್ಲಿ ಇರುವಷ್ಟು ಹಾಡುಗಳು, ದೃಶ್ಯಗಳು ಭಾರತದ ಇನ್ಯಾವುದೇ ಭಾಷೆಯ ಸಿನಿಮಾಗಳಲ್ಲಿ ಇಲ್ಲ. ಭಾಷೆಯ ಬಗ್ಗೆ ಕನ್ನಡಿಗರಲ್ಲಿ ಅಭಿಮಾನ ಮೂಡಿಸುವಲ್ಲಿ ಕನ್ನಡ ಸಿನಿಮಾಗಳ ಪಾತ್ರ ಮಹತ್ವದ್ದು.

ಇತ್ತೀಚೆಗಂತೂ ‘ಕಾಂತಾರ’, ‘ರಂಗಿತರಂಗ’ ಇನ್ನೂ ಹಲವು ಸಿನಿಮಾಗಳ ಮೂಲಕ ಕನ್ನಡ ನೆಲದ ಆಚರಣೆಯನ್ನು ವಿಶ್ವಕ್ಕೆ ಪರಿಚಯಿಸುವ ಯತ್ನಗಳನ್ನು ಚಿತ್ರರಂಗ ಮಾಡುತ್ತಿದೆ. ಜೊತೆಗೆ ‘ಕೆಜಿಎಫ್’, ‘ವಿಕ್ರಾಂತ್ ರೋಣ’ ಈ ಕೆಲವು ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದ ಮಾರುಕಟ್ಟೆ ವಿಸ್ತರಿಸುವ ಪ್ರಯತ್ನಗಳು ಸಹ ಯಶಸ್ವಿ ಆಗಿದ್ದು, ಕನ್ನಡಿಗರಿಗೆ ಹೆಚ್ಚು ಉದ್ಯೋಗ ಸಿಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *