Rave Party Raid: ರಾಮನಗರದಲ್ಲಿ ರೇವ್ ಪಾರ್ಟಿ ಮೇಲೆ ಪೊಲೀಸ್ ದಾಳಿ: 130ಕ್ಕೂ ಹೆಚ್ಚು ಯುವಕ-ಯುವತಿಯರ ಬಂಧನ! | Ramanagara Rave Party Raided More Than 130 Detained At Ayana Resort Gvd

Rave Party Raid: ರಾಮನಗರದಲ್ಲಿ ರೇವ್ ಪಾರ್ಟಿ ಮೇಲೆ ಪೊಲೀಸ್ ದಾಳಿ: 130ಕ್ಕೂ ಹೆಚ್ಚು ಯುವಕ-ಯುವತಿಯರ ಬಂಧನ! | Ramanagara Rave Party Raided More Than 130 Detained At Ayana Resort Gvd



Rave Party Raid: ರಾಮನಗರದಲ್ಲಿ ರೇವ್ ಪಾರ್ಟಿ ಮೇಲೆ ಪೊಲೀಸ್ ದಾಳಿ: 130ಕ್ಕೂ ಹೆಚ್ಚು ಯುವಕ-ಯುವತಿಯರ ಬಂಧನ! | Ramanagara Rave Party Raided More Than 130 Detained At Ayana Resort Gvd

ಅಯಾನ್ ಹೋಂ ಸ್ಟೇನಲ್ಲಿ ರೇವ್ ಪಾರ್ಟಿ ಆರೋಪ ಹಿನ್ನೆಲೆಯಲ್ಲಿ ತಡರಾತ್ರಿ ಕಗ್ಗಲೀಪುರ ಪೊಲೀಸರು ದಾಳಿ ಮಾಡಿ ಯುವಕ, ಯುವತಿಯರು ಸೇರಿ 130 ಹೆಚ್ಚು ಜನರನ್ನು ಬಂಧಿಸಿದ್ದಾರೆ. 19-23 ವರ್ಷದವರೆಗಿನ ಯುವಕ ಯುವತಿಯರು ಪಾರ್ಟಿಯಲ್ಲಿ ಭಾಗಿಯಾಗಿದ್ದರು.

ರಾಮನಗರ (ನ.01): ಅಯಾನ್ ಹೋಂ ಸ್ಟೇನಲ್ಲಿ ರೇವ್ ಪಾರ್ಟಿ ಆರೋಪ ಹಿನ್ನೆಲೆಯಲ್ಲಿ ತಡರಾತ್ರಿ ಕಗ್ಗಲೀಪುರ ಪೊಲೀಸರು ದಾಳಿ ಮಾಡಿ ಯುವಕ, ಯುವತಿಯರು ಸೇರಿ 130 ಹೆಚ್ಚು ಜನರನ್ನು ಬಂಧಿಸಿದ್ದಾರೆ. ತಡರಾತ್ರಿ ಅಯಾನ್ ಹೋಂ ಸ್ಟೇನಲ್ಲಿ ರೇವ್ ಪಾರ್ಟಿ ಆರೋಪ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿದ್ದರು. ಪಾರ್ಟಿಯಲ್ಲಿ ಇದ್ದವರೆಲ್ಲಾ ಬೆಂಗಳೂರು ಮೂಲದವರಾಗಿದ್ದು 150ಕ್ಕೂ ಹೆಚ್ಚು ಜನರು ಪಾರ್ಟಿಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಸದ್ಯ ರೇವ್ ಪಾರ್ಟಿ ನಡೆಸಿದ್ದವರಿಗೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆಸಲಾಗಿದ್ದು, ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ವಾಟ್ಸ್ ಆಪ್‌ನಲ್ಲಿ ಗ್ರೂಪ್‌ ಮಾಡಿಕೊಂಡು ಪಾರ್ಟಿ ಆಯೋಜನೆ ಮಾಡಲಾಗಿದ್ದು, 19-23 ವರ್ಷದವರೆಗಿನ ಯುವಕ ಯುವತಿಯರು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಜೆನ್ ಜೀ ಎಂಬ ಗ್ರೂಪ್ ಮಾಡಿಕೊಂಡು ಪಾರ್ಟಿಯಲ್ಲಿ ಯುವಕ-ಯುವತಿಯರು ಭಾಗಿಯಾಗಿದ್ದು, ಬೆಂಗಳೂರು ಮೂಲದ ವಿದ್ಯಾರ್ಥಿಗಳು ಪಾರ್ಟಿಯಲ್ಲಿದ್ದರು. ಪ್ರತಿ ಬಾರಿ ಪಾರ್ಟಿ ಆಯೋಜನೆ ಮಾಡ್ತಿದ್ದಾಗಲೂ ವಾಟ್ಸ್ ಆಪ್ ಗ್ರೂಪ್ ಮುಖಾಂತರ ಅಪ್ ಡೇಟ್ ಮಾಡಿಕೊಂಡು ಪಾರ್ಟಿಯಲ್ಲಿ ಯುವಕ-ಯುವತಿಯರು ಭಾಗಿಯಾಗ್ತಿದ್ದರು ಎಂದು ತಿಳಿದು ಬಂದಿದೆ.

ಅನುಮತಿ ಪಡೆಯದೇ ಪಾರ್ಟಿ ಆಯೋಜನೆ

ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಹೋಮ್ ಸ್ಟೇ ತೆರೆಯಲಾಗಿದೆ. ಯಾವುದೇ ಅನುಮತಿ ಪಡೆಯದೇ ಪಾರ್ಟಿ ಆಯೋಜನೆ ಮಾಡಿದ್ದಾರೆ. ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಕೊಡ್ತಿದ್ದಾರೆ ಅಂತ ಮಾಹಿತಿ ಬಂತು. ಈ ಹಿನ್ನೆಲೆ ಕಗ್ಗಲೀಪುರ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ದಾಳಿ‌ ಮಾಡಲಾಗಿದೆ. ಪಾರ್ಟಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಜನ ಇದ್ರು.35 ಯುವತಿಯರು, ಮೂವರು ಅಪ್ರಾಪ್ತರು, ಸೇರಿ 70 ಮಂದಿ ಯುವಕರು ಇದ್ದಾರೆ. ಅದರಲ್ಲಿ ಕೆಲವರು ಮಾದಕ ವ್ಯಸನಿಗಳು ಇದ್ದಾರೆ. ಸ್ಥಳದಲ್ಲಿ ಕೆಲ ಇಂಜೆಕ್ಷನ್ ರೀತಿಯ ಮಾದಕ ವಸ್ತುಗಳು ಪತ್ತೆಯಾಗಿದೆ. ವಶಕ್ಕೆ ತೆಗೆದುಕೊಂಡು ಟೆಸ್ಟ್‌ಗೆ ಕಳುಹಿಸಿದ್ದೇವೆ. 4 ಜನ ಕಾರ್ಯಕ್ರಮ ಆಯೋಕರ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಎಲ್ಲಾ ವಿದ್ಯಾರ್ಥಿಗಳನ್ನ ಮೆಡಿಕಲ್ ಟೆಸ್ಟ್ ಮಾಡಿಸಿ ಅಡ್ರೆಸ್ ಪಡೆದು ಕಳುಹಿಸಿದ್ದೇವೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ತಿಳಿಸಿದರು.



Source link

Leave a Reply

Your email address will not be published. Required fields are marked *