ಬೆಳಗಾವಿ, ನವೆಂಬರ್ 1: ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಂದರ್ಭದಲ್ಲಿ ಕುಂದಾನಗರಿ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾರಿ ಅನಾಹುತ ತಪ್ಪಿದೆ. ರಾಜ್ಯೋತ್ಸವ ಪರೇಡ್ ವೀಕ್ಷಣೆಗೆ ತೆರಳುವ ಸಚಿವ ಸತೀಶ್ ಅವರ ಜೀಪ್‌ನಿಂದ ಅಕಸ್ಮಾತ್ ಡೀಸೆಲ್ ಸೋರಿಕೆಯಾಗಿದೆ. ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಪರೇಡ್ ವೀಕ್ಷಣೆಗೆ ತೆರಳಲು ಸಚಿವರು ಸಿದ್ಧರಾಗಿದ್ದರೆ ಜೀಪ್‌ನ ಕೆಳಭಾಗದಲ್ಲಿ ಡೀಸೆಲ್ ಸೊರಿಕೆಯದ್ದು ಗಮನಕ್ಕೆ ಬಂದಿದೆ. ಬೆಂಕಿ ಹೊತ್ತಿಕೊಳ್ಳದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಫೈರ್ ಕಂಟ್ರೋಲ್ ಗ್ಯಾಸ್ ಸಿಂಪಡಣೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಬಳಿಕ ಪೊಲೀಸರು ಜೀಪ್ ಅನ್ನು ಮೈದಾನದಿಂದ ಹೊರತೆಗೆದುಕೊಂಡು ಹೋದರು.