ಶ್ರೀಹರಿಕೋಟ, ನವೆಂಬರ್ 2: ಭಾರತದಲ್ಲಿ ಇದೂವರೆಗೂ ನಿರ್ಮಿಸಲಾದ ಸೆಟಿಲೈಟ್ಗಳಲ್ಲಿ ಅತ್ಯಂತ ಭಾರವಾದೆನ್ನಲಾದ ಸಿಎಂಎಸ್-03 ಕಮ್ಯೂನಿಕೇಶನ್ ಸೆಟಿಲೈಟ್ (CMS-03 ಉಪಗ್ರಹ) ಅನ್ನು ಯಶಸ್ವಿಯಾಗಿ ನಭಕ್ಕೆ ಸಾಗಿಸಲಾಗಿದೆ. ಇಸ್ರೋ ನಿರ್ಮಿಸಿರುವ, ಬಾಹುಬಲಿ ಎಂದೆಂದಿಗೂ ಖ್ಯಾತವಾಗಿರುವ 43.5 ಮೀಟರ್ ಎತ್ತರದ ಎಲ್ವಿಎಂ3-ಎಂ4 ರಾಕೆಟ್ (LVM3-M4 ರಾಕೆಟ್) CMS-03 ಉಪಗ್ರಹವನ್ನು ಕೂರಿಸಿ ಆಗಸಕ್ಕೆ ಕಳುಹಿಸಲಾಗಿದೆ. ಆಂಧ್ರದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಸೆಂಟರ್ನಲ್ಲಿ ಸಂಜೆ 5:26ಕ್ಕೆ ಈ ಉಡಾವಣೆ ಮಾಡಲಾಗಿದೆ.
ಸಂವಹನ ಉಪಗ್ರಹವಾದ ಸಿಎಂಎಸ್-03 ಬರೋಬ್ಬರಿ 4,410 ಕಿಲೋ ತೂಕದ್ದಾಗಿದೆ. ಇದನ್ನು ಜಿಟಿಒ (ಜಿಯೋಸಿಂಕ್ರೊನಸ್ ಟ್ರಾನ್ಸ್ಫರ್ ಆರ್ಬಿಟ್) ಕಕ್ಷೆಗೆ ಸೇರಿಸಲಾಗಿದೆ. ಬಹಳ ಕಡಿಮೆ ಈ ಭಾರೀ ತೂಕದ ಉಪಗ್ರಹವನ್ನು ನಭಕ್ಕೆ ಸಾಗಿಸಲಾಗಿದೆ.
ಇದನ್ನೂ ಓದಿ: ದಾಖಲೆಗೆ ದೊಡ್ಡ ಬೇಡಿಕೆ; ಜೇನುಸಾಕಣೆಗೆ ಕೇಂದ್ರದಿಂದ ಉತ್ತೇಜನ; ‘ಸಿಹಿ ಕ್ರಾಂತಿ’ ಹಾದಿಯಲ್ಲಿ ಭಾರತ
ದೊಡ್ಡ ತೂಕದ ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಲು ಇಸ್ರೋ ಫ್ರಾನ್ಸ್ ದೇಶದ ಏರಿಯೇನ್ ಸ್ಪೇಸ್ ಕಂಪನಿಯ ರಾಕೆಟ್ಗಳನ್ನು ಬಳಸುತ್ತಿದೆ. ಫ್ರೆಂಚ್ ಗಯಾನ ಪ್ರದೇಶದಲ್ಲಿ ಅವುಗಳನ್ನು ಉಡಾವಣೆ ಮಾಡಬಹುದಾಗಿದೆ. ಈಗ ಭಾರತದ ನೆಲದಲ್ಲಿ ಉಡಾವಣೆಯಾದ ಅತ್ಯಂತ ಹೆಚ್ಚು ತೂಕದ ಸೆಟಿಲೈಟ್ ಎಂಬ ದಾಖಲೆಯನ್ನು ಸಿಎಂಎಸ್-03 ಬರೆದಿದೆ.
CMS-03 ಸಂವಹನ ಉಪಗ್ರಹದ ವಿಶೇಷತೆಗಳೇನು?
CMS-03 ಒಂದು ಕಮ್ಯೂನಿಕೇಶನ್ ಸೆಟಿಲೈಟ್ ಆಗಿದ್ದು, ಟೆಲಿಕಾಂ, ಇಂಟರ್ನೆಟ್, ಬ್ರಾಡ್ ಕ್ಯಾಸ್ಟಿಂಗ್ ಸೇವೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮಿಲಿಟರಿ ಕಣ್ಗಾವಲು ನಡೆಸುವುದು ಸೇರಿದಂತೆ ಹಲವು ಕಾರ್ಯಗಳಿಗೆ ಸಿಎಂಎಸ್-03 ಸೇವೆಯನ್ನು ಬಳಸಿಕೊಳ್ಳಬಹುದು.
ಇದನ್ನೂ ಓದಿ: ಆರ್ಜೆಡಿ ಕಾಂಗ್ರೆಸ್ ತಲೆಗೆ ಬಂದೂಕಿಟ್ಟು, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಾಗಿದೆ: ನರೇಂದ್ರ ಮೋದಿ
ಚಂದ್ರಯಾನ-3 ಉಪಗ್ರಹ ಹೊತ್ತು ಹೋಗಿದ್ದ ಬಾಹುಬಲಿ ರಾಕೆಟ್
ಸಿಎಂಎಸ್-03 ಸೆಟಿಲೈಟ್ ಅನ್ನು ಹೊತ್ತು ಹೋದ ಎಲ್ವಿಎಂ-3 ಬಾಬುಬಲಿ ರಾಕೆಟ್ ಎಂದೆಂದಿಗೂ ಹೆಸರಾಗಿದೆ. ಹೆಚ್ಚು ತೂಕದ ಸೆಟಿಲೈಟ್ಗಳನ್ನು ಹೊತ್ತು ಹೋಗುವ ಸಾಮರ್ಥ್ಯ ಇದೆ. 4,000 ಕಿಲೋಗಳಷ್ಟು ಸೆಟಿಲೈಟ್ಗಳನ್ನು ಇದು ಜಿಟಿಯೋ ಕಕ್ಷೆಗೆಬಲ್ಲುದು. ಕೆಳ ಭೂಕಕ್ಷೆಯಾದರೆ 8,000 ಕಿಲೋ ತೂಕದ ಸೆಟಿಲೈಟ್ಗಳನ್ನೂ ಇದು ಹೊತ್ತೊಯ್ಯಬಲ್ಲದು.
2023ರಲ್ಲಿ ಚಂದ್ರನ ದಕ್ಷಿಣ ಧ್ರುವಕ್ಕೆ ಹೋದ ಚಂದ್ರಯಾನ-3 ಸೆಟಿಲೈಟ್ ಅನ್ನು ಆಗಸಕ್ಕೆ ಸೇರಿಸಿದ್ದು ಎಲ್ವಿಎಂ-3 ರಾಕೆಟ್ ಎಂಬುದು ವಿಶೇಷ. ಅದಕ್ಕೂ ಹಿಂದಿನ ವರ್ಷದ (2022) 72 ಸೆಟಿಲೈಟ್ಗಳನ್ನು ಹೊತ್ತೊಯ್ದು ಕೆಳ ಭೂಕಕ್ಷೆಗೆ ಸೇರಿಸಿತ್ತು ಈ ರಾಕೆಟ್.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ