ನವೆಂಬರ್ 2: ಭಾರತದ ವಿನೂತನ ಪೇಮೆಂಟ್ ಸಿಸ್ಟಂ ಎನಿಸಿರುವ ಯುಪಿಐ (ಯುಪಿಐ) ಬಳಕೆ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿದೆ. ಹಲವು ಹೊಸ ದಾಖಲೆಗಳನ್ನು ಬರೆಯುತ್ತಿದೆ. ಕಳೆದ ತಿಂಗಳು (ಅಕ್ಟೋಬರ್) 2,070 ಕೋಟಿಗಳಷ್ಟು ಯುಪಿಐ ವಹಿವಾಟುಗಳು ದಾಖಲಾಗಿವೆ. ಒಂದು ತಿಂಗಳಲ್ಲಿ 2,000 ಕೋಟಿ ಯುಪಿಐ ವಹಿವಾಟು ದಾಖಲಾಗಿರುವುದು ಇದು ಎರಡನೇ ಬಾರಿ. ಆಗಸ್ಟ್ನಲ್ಲಿ 2,001 ಕೋಟಿಯಷ್ಟು ಯುಪಿಐ ಟ್ರಾನ್ಸಾಕ್ಷನ್ಗಳು ನಡೆದಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ 1,963 ಕೋಟಿ ಟ್ರಾನ್ಸಾಕ್ಷನ್ ಅಗತ್ಯ. ಈಗ ಅಕ್ಟೋಬರ್ನಲ್ಲಿ 2,070 ಕೋಟಿ ಯುಪಿಐ ವಹಿವಾಟುಗಳು ಆಗಿರುವುದು ಹೊಸ ದಾಖಲೆ ಎನಿಸಿದೆ.
ಒಂದು ದಿನದ ಗರಿಷ್ಠ ಯುಪಿಐ ವಹಿವಾಟು
ಅಕ್ಟೋಬರ್ ತಿಂಗಳಿನಲ್ಲಿ ನಡೆದ 2,070 ಟ್ರಾನ್ಸಾಕ್ಷನ್ಗಳಿಂದ 27.28 ಲಕ್ಷ ಕೋಟಿ ರೂ ಮೌಲ್ಯದ ಹಣದ ವಹಿವಾಟು ನಡೆದಿದೆ. ಇದೂ ಕೂಡ ದಾಖಲೆ ಎನಿಸಿದೆ. ಆಗಸ್ಟ್ನಲ್ಲಿ 24.85 ಲಕ್ಷ ಕೋಟಿ ರೂ, ಸೆಪ್ಟೆಂಬರ್ನಲ್ಲಿ 24.90 ಲಕ್ಷ ಕೋಟಿ ರೂ ಮೌಲ್ಯದ ಯುಪಿಐ ವಹಿವಾಟು ನಡೆದಿದೆ.
ಇದನ್ನೂ ಓದಿ: ಅಕ್ಟೋಬರ್ನಲ್ಲಿ 1.96 ಲಕ್ಷ ಕೋಟಿ ರೂ ಜಿಎಸ್ ಟಿ ಸಂಗ್ರಹ; ರೀಫಂಡ್ಗಳಲ್ಲಿ ಶೇ. 39ರಷ್ಟು ಏರಿಕೆ
ಆಗಸ್ಟ್ 18ರಂದು ಒಂದೇ ದಿನ 75 ಕೋಟಿಗೂ ಅಧಿಕ ಯುಪಿಐ ಟ್ರಾನ್ಸಾಕ್ಷನ್ಗಳು ನಡೆದಿವೆ. ಎನ್ ಪಿ ದತ್ತಾಂಶದ ಪ್ರಕಾರ ಆ ದಿನ 75.43 ಕೋಟಿ ಟ್ರಾನ್ಸಾಕ್ಷನ್ಗಳು ನಡೆದಿವೆ. ಇದೂವರೆಗೆ ಯಾವುದೇ ದಿನ ಇಷ್ಟೊಂದು ಸಂಖ್ಯೆಯಲ್ಲಿ ಟ್ರಾನ್ಸಾಕ್ಷನ್ ನಡೆದಿರುವುದು ಇಲ್ಲ.
ಡಿಜಿಟಲ್ ಪೇಮೆಂಟ್ಗಳಲ್ಲಿ ಯುಪಿಐ ಕಿಂಗ್
ಭಾರತದಲ್ಲಿ ಬಳಕೆಯಲ್ಲಿರುವ ಡಿಜಿಟಲ್ ಪೇಮೆಂಟ್ ಸಿಸ್ಟಂಗಳ ಮೇಲಿನ ಯುಪಿಐ ಕಿಂಗ್ ಎನಿಸಿದೆ. ಶೇ. 84.4ರಷ್ಟು ಡಿಜಿಟಲ್ ಪೇಮೆಂಟ್ಗಳು ಯುಪಿಐನಿಂದ ಆಗುತ್ತಿವೆ. ನೆಫ್ಟ್ ಟ್ರಾನ್ಸ್ಫರ್ ಶೇ. 3.9, ಐಎಂಪಿಎಸ್ ಟ್ರಾನ್ಸ್ಫರ್ ಶೇ 2.1ರಷ್ಟು ದಾಖಲಾಗಿದೆ. ಟ್ರಾನ್ಸಾಕ್ಷನ್ ಯುಪಿಐ ಪ್ರಾಬಲ್ಯ ಅಬಾಧಿತವಾಗಿದೆ. ಆದರೆ, ಡಿಜಿಟಲ್ ಪೇಮೆಂಟ್ ಮೌಲ್ಯದಲ್ಲಿ ಯುಪಿಐ ಪಾಲು ಶೇ. 9 ಮಾತ್ರವೇ. ಆರ್ ಟಿಜಿಎಸ್ ಸಿಸ್ಟಂ ಶೇ. 69ರಷ್ಟು ಮೌಲ್ಯದ ವಹಿವಾಟುಗಳು ಬಳಕೆಯಾಗಿದೆ.
ಇದನ್ನೂ ಓದಿ: ಒಂದೂವರೆ ಲಕ್ಷಕ್ಕಿಂತ ಹೆಚ್ಚು ಸಂಬಳ; ಸೇವಿಂಗ್ಸ್ ಶೂನ್ಯ; ಇವತ್ತಿನ ಸುಖ ಮುಖ್ಯವೋ, ಭವಿಷ್ಯದ ಸುಖ ಮುಖ್ಯವೋ? ನೀವೇನಂತೀರಿ?
ಸಣ್ಣ ಮೌಲ್ಯದ ವಹಿವಾಟುಗಳಿಗೆ ಯುಪಿಐ ಹೆಚ್ಚು ಬಳಕೆಯಲ್ಲಿದೆ. ಯುಪಿಐ ವಹಿವಾಟಿಗೆ ದೈನಿಂದ ಮಿತಿ ನಿರ್ಬಂಧಗಳಿರುವುದರ ಜೊತೆಗೆ ಅಧಿಕ ಮೊತ್ತದ ಟ್ರಾನ್ಸಾಕ್ಷನ್ಗಳಿಗೆ ಯುಪಿಐ ಅನ್ನು ಬಳಕೆ ಮಾಡಲಾಗುವುದಿಲ್ಲ. 2 ಲಕ್ಷ ರೂ ಅಧಿಕ ಮೊತ್ತದ ಹಣ ಕಳುಹಿಸಲು ಆರ್ ಟಿಜಿಎಸ್ ಅನ್ನೇ ಹೆಚ್ಚಾಗಿ ಆಯ್ಕೆ ಮಾಡಲಾಗಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ