ಬಿಗ್​​ಬಾಸ್ ಕನ್ನಡ ಸೀಸನ್ 12ರಿಂದ ಮಲ್ಲಮ್ಮ ಹೊರಕ್ಕೆ: ವಿಶೇಷ ಬೀಳ್ಕೊಡುಗೆ ಕೊಟ್ಟ ಬಿಗ್​​ಬಾಸ್

ಬಿಗ್​​ಬಾಸ್ ಕನ್ನಡ ಸೀಸನ್ 12ರಿಂದ ಮಲ್ಲಮ್ಮ ಹೊರಕ್ಕೆ: ವಿಶೇಷ ಬೀಳ್ಕೊಡುಗೆ ಕೊಟ್ಟ ಬಿಗ್​​ಬಾಸ್


ಬಿಗ್ಬಾಸ್ ಕನ್ನಡ ಸೀಸನ್ 12 (ಬಿಗ್ ಬಾಸ್ ಕನ್ನಡ) ರಿಂದ ಈ ವಾರ ಒಬ್ಬ ಸ್ಪರ್ಧಿ ಹೊರಗೆ ಹೋಗಿದ್ದಾರೆ. ಕಳೆದ ವಾರ ಯಾರೂ ಸಹ ಎಲಿಮಿನೇಟ್ ಆಗಿರಲಿಲ್ಲ. ಆದರೆ ಈ ವಾರ ಮಲ್ಲಮ್ಮ ಮನೆಯಿಂದ ಹೊರಗೆ ಬಂದಿದ್ದಾರೆ. ಮಲ್ಲಮ್ಮ ಮನೆಯ ಹಿರಿಯ ಸದಸ್ಯೆ ಆಗಿದ್ದರು. ಬಹುಷ ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಹಿರಿಯ ಸ್ಪರ್ಧಿ ಆಗಿದ್ದರು ಮಲ್ಲಮ್ಮ. ವಯಸ್ಸು ಮರೆತು ಎಲ್ಲರೊಟ್ಟಿಗೆ ಬೆರೆತು ಚೆನ್ನಾಗಿಯೇ ಆಡುತ್ತಿದ್ದರು. ಈಗ ಅನಿವಾರ್ಯವಾಗಿ ಮನೆಯಿಂದ ಹೊರ ಹೋಗಿದ್ದಾರೆ. ಆದರೆ ಕಂಡುಬಂದ ಬಿಗ್ಬಾಸ್, ಮಲ್ಲಮ್ಮನನ್ನು ವಿಶೇಷವಾಗಿ ಬೀಳ್ಕೊಟ್ಟರು.

ಈ ವಾರ ನಾಮಿನೇಟ್ ಆದವರಲ್ಲಿ ನಿನ್ನೆ ಸೇಫ್ ಆಗಿದ್ದರು. ಭಾನುವಾರದ ಎಪಿಸೋಡ್ ನಲ್ಲಿ ಗಿಲ್ಲಿ, ಅಶ್ವಿನಿ, ರಾಶಿಕಾ, ಧ್ರುವಂತ್, ಧನುಷ್, ಸ್ಪಂದನಾ ಅವರು ಸೇಫ್ ಆದರು. ಕೊನೆಯದಾಗಿ ಮಾಳು ಮತ್ತು ಮಲ್ಲಮ್ಮ ಇಬ್ಬರೂ ಉಳಿದುಕೊಂಡರು. ಆಗ ಸುದೀಪ್ ನೀವೂ ಸಹ ಬಿಗ್ಬಾಸ್ ಮನೆಯ ವಿಶೇಷ ಸ್ಪರ್ಧಿಗಳು, ಆರ್ಥಿಕ ಹಿನ್ನೆಲೆ ಇಲ್ಲದೆ, ಹಲವು ಕಷ್ಟಗಳನ್ನು ಮೆಟ್ಟಿನಿಂತು ನಿಮ್ಮ ಸ್ವಂತ ವ್ಯಕ್ತಿತ್ವದಿಂದ ಬಿಗ್ಬಾಸ್ ಮನೆಗೆ ಬಂದಿದ್ದೀರಿ, ಇಬ್ಬರಲ್ಲಿ ಯಾರು ಬಂದರೂ ಸಹ ಸಾಧನೆ ಮಾಡಿ ನೀವು ಬಂದಿದ್ದೀರಿ ಎಂದರ್ಥ. ಬಳಿಕ ಯಾರ ವಿಡಿಯೋ ಹಾಕಿಲ್ಲಯೋ ಅವರು ಔಟ್ ಎಂದರ್ಥ ಹೇಳಿದರು. ಎಲ್ಲರೂ ಕುತೂಹಲದಿಂದ ಕಾಯಬೇಕಾದರೆ ಮಲ್ಲಮ್ಮನ ವಿಡಿಯೋ ಪ್ಲೇ ಆಯ್ತು. ಆ ಮೂಲಕ ಮಲ್ಲಮ್ಮ ಹೊರ ಹೋಗುವುದು ಖಾತ್ರಿ ಆಯ್ತು.

ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಕಬಡ್ಡಿ: ರೊಚ್ಚಿಗೆದ್ದ ರಾಶಿಕಾ-ರಕ್ಷಿತಾ

ಆದರೆ ಬಿಗ್ಬಾಸ್, ಮಲ್ಲಮ್ಮನಿಗೆ ವಿಶೇಷ ಬೀಳ್ಕೊಡುಗೆಯನ್ನು ಮಾಡಲಾಗಿದೆ. ಅವರಿಗಾಗಿ ಲೈಕ್‌ಗಳ ಒಂದು ವಿಶೇಷ ಚಪ್ಪರವನ್ನು ಅದರ ಕೆಳಗೆ ಅವರನ್ನು ನಿಲ್ಲಿಸಿ ಮಾತನಾಡಿದ ಬಿಗ್‌ಬಾಸ್, ‘ಬಿಗ್ಬಾಸ್ ಮನೆಗೆ ನೂರಾರು ಮಂದಿ ಸ್ಪರ್ಧಿಗಳು ಬಂದಿದ್ದಾರೆ ಆದರೆ ಅವರೆಲ್ಲರಿಗೂ ನೀವು ಭಿನ್ನವಾಗಿವೆ. ಬಿಗ್ಬಾಸ್ ಮನೆಗೆ ಬರಲು ಆರ್ಥಿಕ, ಸಾಮಾಜಿಕ ಹಿನ್ನೆಲೆ ಇಲ್ಲ ವ್ಯಕ್ತಿತ್ವ ಇದ್ದರೆ ಸಾಕೆಂದು ತೋರಿಸಲಾಗಿದೆ ಎಂದು ತೋರಿಸಲಾಗಿದೆ. ನೀವು ಪ್ರಜ್ಞಾವಂತ ಸ್ಪರ್ಧಿ ಆಗಿದ್ದೀರಿ, ನೀವು ಬಿಗ್ ಬಾಸ್ ಮನೆಯ ಹೆಮ್ಮೆಯ ಸ್ಪರ್ಧಿ, ಈ ಮನೆ ಸದಾ ನಿಮ್ಮದೇ, ಬಿಗ್ಬಾಸ್ ನಿಮ್ಮನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ನಿಮ್ಮ ಹೊರಗಿನ ಜೀವನಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿ ಬೀಳ್ಕೊಟ್ಟರು.

ಮಲ್ಲಮ್ಮ ಹೋಗುವ ಧ್ರುವಂತ್, ರಕ್ಷಿತಾ ಹಾಗೂ ಇನ್ನೂ ಕೆಲವರು ಕಣ್ಣೀರು ಹಾಕಿದರು. ಇಡೀ ಮನೆಯೇ ಭಾವುಕವಾಗಿ ಮಲ್ಲಮ್ಮನನ್ನು ಮನೆಯಿಂದ ಹೊರಗೆ ಕಳಿಸಿಕೊಟ್ಟಿತು. ಮಲ್ಲಮ್ಮನು ಹೊರ ಬಂದ ಬಳಿಕ ಸುದೀಪ್ ಬಳಿಯೂ ಸಹ ಬೇಸರ ಇರುತ್ತಿತ್ತು. ‘ಅಮ್ಮ ಅಮ್ಮ ಅಂದು ನನ್ನನ್ನು ಪ್ರತ್ಯೇಕವಾಗಿಟ್ಟು ಬಿಟ್ಟರು’ ಎಂದು ಅಳಲು ತೊಡಿಕೊಂಡರು. ಸುದೀಪ್ ಸಹ ಮಲ್ಲಮ್ಮ ಅವರು ಆಡಿದ ಬೆಳ್ಳಿ ಕೊಂಡಾಡಿ ಅವರಿಗೆ ಬೀಳ್ಕೊಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *