ಬೆಂಗಳೂರು, ನವೆಂಬರ್ 3: ಕರ್ನಾಟಕ ಕಾಂಗ್ರೆಸ್ ನಲ್ಲಿ (ಕಾಂಗ್ರೆಸ್) ಅದಲು ಬದಲು ಆಟ ಶುರುವಾಗುತ್ತಾ? ಸಿಎಂ ಕುರ್ಚಿ ಬದಲಾಗುತ್ತಾ? ಸಂಪುಟ ವಿಸ್ತರಣೆಯಾಗುತ್ತಾ ಎಂಬ ಸಾಕಷ್ಟು ಗೊಂದಲಗಳಿವೆ. ಇದರ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ (ಡಿಕೆ ಶಿವಕುಮಾರ್) ಆಡುತ್ತಿರುವ ಒಂದೊಂದು ಮಾತುಗಳು ಮತ್ತು ಹಿಡಿಯುತ್ತಿರುವ ಒಂದೊಂದು ಹೆಜ್ಜೆಗಳು ಸಾಕಷ್ಟು ಕುತೂಹಲ ಮೂಡಿಸಿವೆ. ಡಿಸಿಎಂ ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ಡೆಡ್ಲೈನ್ ಹಾಕಿದ್ದಾರೆಂಬ ವದಂತಿ ಕಾಂಗ್ರೆಸ್ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಇದರ ಜೊತೆಗೆ ಏನೇ ಇರಲಿ, ಬಿಹಾರ ಚುನಾವಣೆ ಬಳಿಕವೇ ಬದಲಾವಣೆಯಾಗಲಿದೆ ಎಂಬ ಚರ್ಚೆಗಳು ಕೂಡ ಗರಿಗೆದರಿವೆ. ಇದಕ್ಕೆಲ್ಲಾ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಬಿಹಾರ ಸಮುದಾಯದವರ ಎದುರು ಆಡಿರುವ ಒಂದು ಮಾತು ಪುಷ್ಟಿ ನೀಡಿದೆ.
ಡಿಕೆ ಶಿವಕುಮಾರ್ ಬಳಿ ಬಿಹಾರಿಗಳು ಹೇಳಿದ್ದೇನು?
ನವೆಂಬರ್ 6ಮತ್ತು 11ಕ್ಕೆ ಬಿಹಾರದಲ್ಲಿ ಮತದಾನ. ಬೆಂಗಳೂರಿನಲ್ಲೂ ಬಿಹಾರಿಗಳು ವಾಸವಿದ್ದಾರೆ. ಇವರನ್ನು ಭಾನುವಾರ ಭೇಟಿ ಮಾಡಿದ್ದ ಡಿಕೆ ಶಿವಕುಮಾರ್, ಬಿಹಾರಕ್ಕೆ ಹೋಗಿ ಮಹಾಘಟಬಂಧನಕ್ಕೆ ಮತ ಹಾಕಿ ಎಂದು ಕರೆ ಕೊಟ್ಟಿದ್ದಾರೆ. ಈ ವೇಳೆ ಮಾತನಾಡಿದ ಬಿಹಾರದ ಕಂಪನಿ, ನೀವು ಆಗುವುದನ್ನು ನೋಡಲು ಬಯಸುತ್ತೇವೆ ಸಿಎಂ ಸಿಎಂ. ನಮ್ಮ ಸಮಾಜದವರೆಲ್ಲರೂ ನಿಮ್ಮನ್ನು ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತೇವೆ. ಪೂರ್ತಿ ಬಿಹಾರವಾಸಿಗಳು ನಿಮ್ಮ ಜೊತೆಗಿದ್ದಾರೆ. ಎಲ್ಲರೂ ಬೆಂಗಳೂರಷ್ಟೇ ಅಲ್ಲ, ಬಿಹಾರದಲ್ಲೂ ನಿಮ್ಮ ಬೆಂಬಲಕ್ಕಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಬಿಹಾರವಾಸಿಗಳೆಲ್ಲಾ ನೀವು ಮುಖ್ಯಮಂತ್ರಿಯಾಗುವುದನ್ನು ಬಯಸುತ್ತೇವೆ ಎಂದು ಹೇಳಿದರು.
ಬಿಹಾರವಾಸಿಗಳೊಂದಿಗೆ ಮಾತನಾಡುತ್ತಾ ಡಿಕೆಶಿ ಕೊಟ್ಟ ಸಂದೇಶವೇನು?
ಬಿಹಾರವಾಸಿಗಳ ಜತೆ ಮಾತನಾಡುತ್ತಾ ಡಿಕೆ ಶಿವಕುಮಾರ್, ದೊಡ್ಡ ಸಂದೇಶವನ್ನೇ ಕೊಟ್ಟಂತಿದೆ. ‘ನೀವು ನನಗೆ ದೊಡ್ಡ ಸ್ಥಾನ ಸಿಗಬೇಕು ಎಂದು ಹೇಳಿದ್ದೇನೆ. ಅದು ಮುಖ್ಯವಲ್ಲ. ಅಲ್ಲಿ ಬಿಹಾರದಲ್ಲಿ ಮಹಾಘಟಬಂಧನ ಅಧಿಕಾರಕ್ಕೆ ತಂದರೆ ನೀವು ನನಗೆ ಎಲ್ಲಾ ಸ್ಥಾನವನ್ನೂ ಕೊಟ್ಟಂತೆ. ನೀವೆಲ್ಲಾ ಹೋಗಿ ಬಿಹಾರದಲ್ಲಿ ಮತ ಚಲಾಯಿಸಿ ‘ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಅತ್ತ ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಜಮೀರ್ ಅಹ್ಮದ್, ಸಿಎಂ ಸಿದ್ದರಾಮಯ್ಯ ಟಗರು. ಟಗರಿಗೆ ಟಕ್ಕರ್ ಕೊಡುವುದಕ್ಕಾಗುವುದಿಲ್ಲ. ಅಷ್ಟೇ ಅಲ್ಲ, 2028ರ ಬಳಿಕ ದಲಿತರು ಸಿಎಂ ಆಗಬೇಕು ಎಂದು ಒತ್ತಿ ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ದೆಹಲಿ ದಂಡಯಾತ್ರೆ: ಅಹಿಂದ ಅಸ್ತ್ರವೇ?
ಬಿಹಾರ ಚುನಾವಣಾ ಹತ್ತಿರವಾಗುತ್ತಿದ್ದಂತೆ ರಾಜ್ಯ ನಾಯಕರ ದೆಹಲಿ ಯಾತ್ರೆಯು ತೀವ್ರಗೊಂಡಿದೆ. ಡಿಕೆ ಶಿವಕುಮಾರ್ ಬೆನ್ನಲ್ಲೇ, ಸತೀಶ್ ಜಾರಕಿಹೊಳಿ ಇಂದು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಇದು ಕುತೂಹಲ ಮೂಡಿಸಿದೆ.
ದೆಹಲಿಗೆ ವಾಪಸ್ ಆಗಿರುವ ಡಿಕೆಶಿ ಮತ್ತೆ ದೆಹಲಿಗೆ ತೆರಳಲಿದ್ದಾರೆ. ಇದಕ್ಕೂ ಮುನ್ನವೇ ಸತೀಶ್ ಜಾರಕಿಹೊಳಿ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಸತೀಶ್ ಜಾರಕಿಹೊಳಿಯ ದೆಹಲಿ ಪ್ರವಾಸದ ವಿವರ ರಹಸ್ಯವಾಗಿಯೇ ಇದೆ. ಅಹಿಂದ ನಾಯಕರೆಂದ ಗುರುತಿಸಿಕೊಳ್ಳುತ್ತಿರುವ ಸತೀಶ್ಗೆ ಅಹಿಂದ ನಾಯಕತ್ವ ಸಿಗಬೇಕು ಎಂದು ಸಿಎಂ ಪುತ್ರ ಯತೀಂದ್ರ ಕೂಡ ಹೇಳಿದ್ದಾರೆ. ಸತೀಶ್ ಜಾರಕಿಹೊಳಿ ಕೂಡ ಅಹಿಂದಕ್ಕೆ ನಾಯಕತ್ವ ಸಿಗಬೇಕು. ಈ ದೆಹಲಿಗೆ ತೆರಳಿ ಮಲ್ಲಿಕಾರ್ಜುನ ಖರ್ಗೆ ಸಮಯವನ್ನು ನಿಗದಿ ಮಾಡಿಕೊಂಡಿರುವ ಸತೀಶ್, ವೇಣುಗೋಪಾಲ್, ಸುರ್ಜೇವಾಲರನ್ನು ಭೇಟಿಯಾಗುವ ಸಾಧ್ಯತೆ ಇದೆ. ಸಚೀವ ಸತೀಶ್ ಜೊತೆ ಐದಾರು ಮಾಜಿ ಶಾಸಕರು ದೆಹಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ದೆಹಲಿಯಲ್ಲಿ ಅಹಿಂದ ನಾಯಕತ್ವದ ಬಗ್ಗೆ ಚರ್ಚೆಯಾಗುತ್ತಾ? ಕೆಪಿಸಿಸಿ ಅಧ್ಯಕ್ಷ ರೇಸ್ನಲ್ಲಿರೋ ಸತೀಶ್ ಅಧ್ಯಕ್ಷಗಿರಿ ಬಗ್ಗೆಯೂ ಮಾತುಕತೆ ನಡೆಸ್ತಾರಾ ಅನ್ನೋದು ಕುತೂಹಲ ಮೂಡಿಸಿದೆ. ಹೋಗುವವರೆಲ್ಲಾ ದೆಹಲಿಗೆ ಹೋಗಲಿ ಎಂದು ಡಿಕೆ ಶಿವಮುಮಾರ್ ಹೇಳಿದ್ದಾರೆ, ಸಿಎಂ ನನಗೆ ಆ ಬಗ್ಗೆ ಮಾಹಿತಿ ಇಲ್ಲ.
ಇದನ್ನೂ ಓದಿ: ನವೆಂಬರ್ ಆರಂಭದಲ್ಲೇ ಸಿಡಿದ ಡೆಡ್ಲೈನ್ ಬಾಂಬ್: ಕಾಂಗ್ರೆಸ್ನಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ ಡೆಡ್ಲೈನ್!
ಕಾಂಗ್ರೆಸ್ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್, ನವೆಂಬರ್ ಆದ್ಮೇಲೆ ಈ ಸರ್ಕಾರ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಒಟ್ಟಾರೆ ಕಾಂಗ್ರೆಸ್ ಕುರ್ಚಿ ಕದನ ದೆಹಲಿಗೆ ಬಂದು ನಿಂತಿದ್ದು, ಬಿಹಾರ ಚುನಾವಣೆ ಬಳಿಕ ಮುಂದೇನಾಗಲಿದೆ ಎಂಬ ಕುತೂಹಲ ಮೂಡಿಸಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ