ಬಿಗ್ ಬಾಸ್ನ (ಬಿಗ್ ಬಾಸ್) ಈ ಹಿಂದಿನ ಸೀಸನ್‌ಗಳಲ್ಲಿ ಜಗಳಗಳು ಇದ್ದವು. ಆದರೆ, ಊಟಕ್ಕೆ ಉಪ್ಪಿನಕಾಯಿ ರೀತಿ ಇತ್ತು. ಆದರೆ, ಇತ್ತೀಚಿನ ಸೀಸನ್‌ಗಳಲ್ಲಿ ಉಪ್ಪಿನಕಾಯಿಯೇ ಊಟವಾಗಿದೆ. ಈ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದೀಪ್ ಈ ವಿಚಾರದಲ್ಲಿ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ, ರಿಷಾ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ ಮೊದಲಾದವರು ಜಗಳ ಮಾಡಿಕೊಂಡಿದ್ದರು. ಏರು ಧ್ವನಿಯಲ್ಲಿ ಮಾತನಾಡಿ ಜಗಳದ ಕೇಂದ್ರ ಬಿಂದು ಆಗಿದ್ದರು. ಈ ಜಗಳದ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಅದರಲ್ಲೂ ಪ್ರತಿ ವಾರ ಒಬ್ಬೊಬ್ಬರು ಏರುಧ್ವನಿಯಲ್ಲಿ ಮಾತನಾಡಿ ವೀಕ್ಷಕರಲ್ಲೂ ಅಸಮಾಧಾನ ಮೂಡುವಂತೆ ಮಾಡಿದ್ದಾರೆ. ಈ ಬಗ್ಗೆ ಸುದೀಪ್ ಮಾತನಾಡಿದ್ದಾರೆ.
ಭಾನುವಾರದ ಎಪಿಸೋಡ್ ಪೂರ್ಣಗೊಳಿಸುವುದಕ್ಕೂ ಮೊದಲು ಅವರು ಮಾತನಾಡಿದ್ದಾರೆ, ‘ನಿಮ್ಮಲ್ಲಿ ಪರಸ್ಪರ ಸ್ನೇಹ, ಪ್ರೀತಿ ಹಂಚಿಕೊಂಡು ಇರೋಕೆ ಬರುತ್ತೆ. ಮಾತನಾಡೋ ಜಾಗದಲ್ಲಿ ಮಾತನಾಡೋಕು ಬರುತ್ತೆ. ಬಿಗ್ ಬಾಸ್ ಮನೆಯನ್ನು ಜಗಳದ ಮನೆ ಮಾಡಬೇಡಿ. ಎಲ್ಲಾ ಸ್ಪೀಕರ್‌ಗೆ ಒಂದು ವಾಲ್ಯೂಮ್ ಬಟಮ್ ಇದೆ. ಅದನ್ನು ಹಾಕಿರೋದು ಮನುಷ್ಯ ಎಂದಮೇಲೆ, ನಮ್ಮ ವಾಲ್ಯೂಮ್ ಬಟನ್ ಎಲ್ಲಿದೆ ಎಂದು ತಿಳಿದುಕೊಳ್ಳುವುದು ಮುಖ್ಯ’ ಎಂದು ಸುದೀಪ್ ಕಿವಿಮಾತು ಹೇಳಿದರು.
ಇದನ್ನೂ ಓದಿ
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಮಲ್ಲಮ್ಮ ಹೊರ ಹೋಗಲು ಕಾರಣವಾಯ್ತು ಆ ವಂದಂತಿ?
ಕೆಲ ವೀಕ್ಷಕರು ಬಿಗ್ ಬಾಸ್ ನೋಡೋದನ್ನು ನಿಲ್ಲಿಸಬಹುದು ಎಂದು ಕೂಡ ಅವರು ಎಚ್ಚರಿಕೆ ನೀಡಿದ್ದಾರೆ. ‘ಆಡ್ತಾ ಇದಿರಿ, ಟ್ಯಾಲೆಂಟ್, ಸಾಮರ್ಥ್ಯ, ಒಳ್ಳೆತನ ಹಾಗೂ ಸ್ಟ್ರೆಟಜಿ ಮಾಡೋ ತಲೆ ಇದೆ. ಆದರೆ, ಜಗಳ-ಕಿರಿಚಾಟ ಎಂಬುದು ಹೀಗೆ ಮುಂದುವರಿದರೆ ಬಿಗ್ ಬಾಸ್ ನ ಕೆಲವರು ನೋಡೋದನ್ನೇ ನಿಲ್ಲಿಸಬಹುದು. ಆ ಹಂತಕ್ಕೆ ಹೋಗಬೇಡಿ. ಹೇಳಬೇಕು ಅನ್ನಿಸ್ತು’ ಎಂದು ಸುದೀಪ್ ಅವರು ಕಿವಿಮಾತು ಹೇಳಿದರು. ಇದನ್ನು ಯಾರೆಲ್ಲ ಗಂಭೀರವಾಗಿ ಸ್ವೀಕರಿಸುತ್ತಾರೆ ಎಂದರೆ ಕಾದು ನೋಡಬೇಕಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.