‘ಯಾರ ಮೇಲೆ ಯಾರೂ ಹಲ್ಲೆ ಮಾಡಬಾರದು’ ಎಂಬುದು ಬಿಗ್ ಬಾಸ್ ನ (ಬಿಗ್ ಬಾಸ್) ಮೂಲ ನಿಯಮಗಳಲ್ಲಿ ಒಂದು. ಈ ರೀತಿ ಮಾಡಿದರೆ ಆ ಕ್ಷಣವೇ ಅವರ ಮನೆಯಿಂದ ಹೊರಕ್ಕೆ ಕಳುಹಿಸದಿದ್ದರೆ. ಈ ಮೊದಲು ಬಿಗ್ ಬಾಸ್ ನಲ್ಲಿ ಈ ರೀತಿ ಆದ ಸಾಕಷ್ಟು ಉದಾಹರಣೆ ಇದೆ. ಕಳೆದ ಸೀಸನ್ ನಲ್ಲಿ ರಂಜಿತ್ ಅವರು ಇದೇ ರೀತಿ ಮಾಡಿ ಮನೆಯಿಂದ ಹೊರ ಹೋಗಿದ್ದರು. ಈಗ ಗಿಲ್ಲಿ ಮೇಲೆ ರಿಷಾ ಅವರು ಕೈ ಮಾಡಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಅವರನ್ನು ಎಲಿಮಿನೇಟ್ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ.
ರಿಷಾ ಅವರ ಬಳಿ ಬಕೆಟ್ ಕೊಡುವಂತೆ ಗಿಲ್ಲಿ ಅವರು ಬಾತ್ರೂಂನಲ್ಲಿ ಮನವಿ ಮಾಡಿದ್ದಾರೆ. ಆದರೆ, ರಿಷಾ ಇದಕ್ಕೆ ಬಗ್ಗಲಿಲ್ಲ. ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದು ಹೊರಟ ಗಿಲ್ಲಿ ಅವರು, ರಿಷಾ ಅವರ ಬಟ್ಟೆಯನ್ನು ತಂದು ಬಾತ್ರೂಮ್ ಹೊರ ಭಾಗದಲ್ಲಿರುವ ನೆಲದ ಮೇಲೆ ಹಾಕಿದ್ದಾರೆ. ಇದು ರಿಷಾ ಕೋಪಕ್ಕೆ ಕಾರಣ ಆಗಿದೆ. ‘ಗಿಲ್ಲಿ’ ಎಂದು ಕೂಗುತ್ತಾ ಬಂದ ಅವರು, ಗಿಲ್ಲಿಗೆ ಹೊಡೆದಿದ್ದಾರೆ.
ಇಷ್ಟಕ್ಕೆ ರಿಷಾ ನಿಲ್ಲಲಿಲ್ಲ. ರಿಷಾ ಅವರು ಗಿಲ್ಲಿ ಮೇಲೆ ಕೂಗಾಡಿದ್ದಾರೆ. ಗಿಲ್ಲಿ ಬಟ್ಟೆಗಳನ್ನೆಲ್ಲ ಎತ್ತಿ ಬೀಸಾಕಿದ್ದಾರೆ. ಸೂಟ್ಕೇಸ್ನ ಒಡ್ಡಿದ್ದಾರೆ ಆ ಬಳಿಕ ಗಿಲ್ಲಿಯನ್ನು ತಳ್ಳಿದ್ದಾರೆ. ರಿಷಾ ಮಾಡಿದ್ದು ಬಿಗ್ ಬಾಸ್ ಮೂಲ ನಿಯಮಗಳಿಗೆ ವಿರುದ್ಧವಾಗಿದೆ. ಕಳೆದ ಸೀಸನ್ಗಳಲ್ಲಿ ಈ ರೀತಿ ಮಾಡಿದರೆ ಅವರನ್ನು ದೊಡ್ಮನೆಯಿಂದ ಹೊರಕ್ಕೆ ಹಾಕಲಾಯಿತು. ಈ ಬಾರಿಯೂ ಅದೇ ರೀತಿ ಮಾಡುವುದೇ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ
ಇದನ್ನೂ ಓದಿ: ಹೊರಗಿನ ವಿಚಾರ ತಿಳಿದುಕೊಳ್ಳಲು ಬಟ್ಟೆಯಲ್ಲಿ ಕೋಡ್ವರ್ಡ್; ಶಾಕಿಂಗ್ ವಿಚಾರ ಹೇಳಿದ ಸುದೀಪ್
ತೆಲುಗು ಬಿಗ್ ಬಾಸ್ ನಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಮಹಿಳಾ ಸ್ಪರ್ಧಿ ಮೇಲೆ ಪುರುಷ ಸ್ಪರ್ಧಿ ಕಠಿಣವಾಗಿ ನಡೆದುಕೊಂಡಿದ್ದಾಳೆ. ಈ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆದವು. ವೀಕೆಂಡ್ ಎಪಿಸೋಡ್ ನಲ್ಲಿ ಅಕ್ಕಿನೇನಿ ನಾಗಾರ್ಜುನ ಬರುತ್ತಿದ್ದಂತೆ ಆ ಸ್ಪರ್ಧಿಯನ್ನು ಹೊರಕ್ಕೆ ಕಳುಹಿಸಲಾಯಿತು. ಕನ್ನಡದಲ್ಲೂ ಇದೆ ರೀತಿಯೇ ಎಂಬ ಪ್ರಶ್ನೆ ಮೂಡಿದೆ. ಇಲ್ಲವೇ, ಬಿಗ್ ಬಾಸ್ ಈ ಬಗ್ಗೆ ಯಾವ ರೀತಿಯ ಆದೇಶವಿದೆ ಎಂಬುದನ್ನು ನೋಡಬೇಕಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.