Davanagere: ಹೈ ಸ್ಪೀಡ್ ಮಣಿ ಹೆಸರಿನ ಟಗರು ಸಾವು; ಗ್ರಾಮದಲ್ಲಿ ಮೆರವಣಿಗೆ ಮಾಡಿ ಅಂತ್ಯಕ್ರಿಯೆ

Davanagere:  ಹೈ ಸ್ಪೀಡ್ ಮಣಿ ಹೆಸರಿನ ಟಗರು ಸಾವು; ಗ್ರಾಮದಲ್ಲಿ ಮೆರವಣಿಗೆ ಮಾಡಿ ಅಂತ್ಯಕ್ರಿಯೆ

Davanagere:  ಹೈ ಸ್ಪೀಡ್ ಮಣಿ ಹೆಸರಿನ ಟಗರು ಸಾವು; ಗ್ರಾಮದಲ್ಲಿ ಮೆರವಣಿಗೆ ಮಾಡಿ ಅಂತ್ಯಕ್ರಿಯೆ
ಟಗರು ಕಾಳಗದಲ್ಲಿ ಹೆಸರುವಾಸಿಯಾಗಿದ್ದ ‘ಹೈ ಸ್ಪೀಡ್ ಮಣಿ’ ಎಂಬ ಟಗರು ಸಾವನ್ನಪ್ಪಿದೆ. ಉತ್ತರ ಕರ್ನಾಟಕದಾದ್ಯಂತ ಜನಪ್ರಿಯತೆ ಗಳಿಸಿದ್ದ ಈ ಟಗರಿನ ಮಾಲೀಕರು, ಅಂತ್ಯಕ್ರಿಯೆಗೂ ಮುನ್ನ ಗ್ರಾಮದಲ್ಲಿ ಭವ್ಯ ಮೆರವಣಿಗೆ ನಡೆಸಿ ಅಂತಿಮ ನಮನ ಸಲ್ಲಿಸಿದ್ದಾರೆ.
ಹೈ ಸ್ಪೀಡ್ ಮಣಿ ಅಂತಾನೇ ಹೆಸರು ಮಾಡಿದ್ದ ಟಗರು ಸಾವನ್ನಪ್ಪಿದೆ. ಟಗರಿನ ಮಾಲೀಕರು ಅಂತ್ಯಕ್ರಿಯೆಗೂ ಮುನ್ನ ಟಗರನ್ನು ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಿಸಿದ್ದಾರೆ. ಅಪಾಯ ಅಭಿಮಾನಿ ಬಳಗ ಹೊಂದಿದ್ದ ಹೈ ಸ್ಪೀಡ್ ಮಣಿಯ ಅಂತ್ಯಕ್ರಿಯೆಯಲ್ಲಿ ನೂರಾರು ಜನರು ಭಾಗಿಯಾಗಿದ್ದರು.

ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಟಗರು ಕಾಳಗ ಅತ್ಯಂತ ಜನಪ್ರಿಯವಾಗಿದೆ. ಗ್ರಾಮೀಣ ಭಾಗದ ಜನರು ತಮ್ಮ ಮನೆಯಲ್ಲಿರುವ ಟಗರುಗಳಿಗೆ ಪೌಷ್ಠಿಕ ಆಹಾರ ನೀಡಿ ಸಾಕಿ ಸ್ಪರ್ಧೆಗೆ ಬಿಡುತ್ತಾರೆ. ಸ್ಪರ್ಧೆಯಲ್ಲಿ ಗೆದ್ದ ಟಗರು ಮಾಲೀಕರು ಲಕ್ಷಗಟ್ಟಲೇ ಬಹುಮಾನ ಪಡೆಯುತ್ತಾರೆ.

ಇದೇ ಹೈ ಸ್ಪೀಡ್ ಮಣಿ ಸಹ ಟಗರು ಕಾಳಗದಿಂದ ದಾವಣಗೆರೆ, ಹಾವೇರಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಹೈ ಸ್ಪೀಡ್ ಮಣಿ ಟಗರು ಕಾಳಗದಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು.

ಇದನ್ನೂ ಓದಿ: ಒಂದು ತೊಗೊಂಡ್ರೆ ಮತ್ತೊಂದು ಫ್ರೀ ಬಾಟೆಲ್; ಹೊಸ ಅಬಕಾರಿ ನೀತಿಯಲ್ಲಿ ಮಹತ್ವದ ಬದಲಾವಣೆ?

ರಾಜ್ಯಾದ್ಯಂತ ವಿವಿಧ ಭಾಗಗಳಲ್ಲಿ ಟಗರು ಕಾಳಗದಲ್ಲಿ ಹೆಸರು ಮಾಡಿದ್ದ ಹೈ ಸ್ಪೀಡ್ ಮಣಿಯನ್ನು ಹೊಸ ಕುಂದುವಾಡ ಗ್ರಾಮದ ಹಾಲೇಶ್ ಎಂಬುವರು ಸಾಕಿದ್ದರು. ಅಂತ್ಯಸಂಸ್ಕಾರಕ್ಕೂ ಮುನ್ನ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿತ್ತು. ಅಂತಿಮವಾಗಿ ತಮ್ಮ ಮನೆ ಮುಂದೆಯೇ ಟಗರಿನ ಅಂತ್ಯಸಂಸ್ಕಾರವನ್ನು ಹಾಲೇಶ್ ಮಾಡಿದ್ದಾರೆ.

ಇದನ್ನೂ ಓದಿ : ಅಬ್ಬಿಗೆರೆ ದೇವಾಲಯದಲ್ಲಿ ಡಿಸಿಎಂ: ನಮ್ಮ ಒಳ್ಳೆಯ ಕೆಲಸಗಳೇ ಶಾಶ್ವತ ಎಂದ ಡಿಕೆ ಶಿವಕುಮಾರ

Source link

Leave a Reply

Your email address will not be published. Required fields are marked *