‘ಬಿಗ್ ಬಾಸ್ ಕನ್ನಡ ಸೀಸನ್ 12’ರ (ಬಿಬಿಕೆ 12) ಐದನೇ ವಾರದ ಎಲಿಮಿನೇಷನ್ ನಲ್ಲಿ ಮಲ್ಲಮ್ಮ ಅವರು ಔಟ್ ಆಗಿದ್ದಾರೆ. ಅವರು ಹೊರ ಬಂದ ಬಳಿಕ TV9 ಕನ್ನಡದ ಜೊತೆಗೆ ಮಾತನಾಡಿದ್ದಾರೆ. ದೊಡ್ಮನೆಯಲ್ಲಿ ಅನೇಕರು ಆಟ ಆಡೋಕೆ ಬಿಟ್ಟಿಲ್ಲ. ಹಿರಿಯರು ಎಂಬ ಸ್ಥಾನ ಕೊಟ್ಟು ಬದಿಯಲ್ಲಿ ಕೂರಿಸಿದರು. ಇದು ಆಟಕ್ಕೆ ಮುಳುವಾಯಿತೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಮಲ್ಲಮ್ಮ ಅವರು ಉತ್ತರ ನೀಡಿದ್ದಾರೆ. ಅವರು ಈ ಆರೋಪವನ್ನು ಅಲ್ಲಗಳೆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.