ಒಂದೂ ಇಂಟರ್‌ನ್ಯಾಷನಲ್ ಮ್ಯಾಚ್ ಆಡದೇ ವಿಶ್ವಕಪ್ ಗೆಲ್ಲಿಸಿದ ಕೋಚ್! ಯಾರು ಈ ಮುಜುಂದಾರ್?

ಒಂದೂ ಇಂಟರ್‌ನ್ಯಾಷನಲ್ ಮ್ಯಾಚ್ ಆಡದೇ ವಿಶ್ವಕಪ್ ಗೆಲ್ಲಿಸಿದ ಕೋಚ್! ಯಾರು ಈ ಮುಜುಂದಾರ್?

ಒಂದೂ ಇಂಟರ್‌ನ್ಯಾಷನಲ್ ಮ್ಯಾಚ್ ಆಡದೇ ವಿಶ್ವಕಪ್ ಗೆಲ್ಲಿಸಿದ ಕೋಚ್! ಯಾರು ಈ ಮುಜುಂದಾರ್?

ಅಮೋಲ್ ಮುಜುಂದಾರ್: ಈ ಕೋಚ್‌ಗೆ ಒಂದೂ ಅಂತಾರಾಷ್ಟ್ರೀಯ ಮ್ಯಾಚ್ ಆಡಿದ ಅನುಭವವಿಲ್ಲ. ಟೀಮ್ ಇಂಡಿಯಾವನ್ನು ಪ್ರತಿನಿಧಿಬೇಕೆಂದು ಕನಸು ಕಂಡಿದ್ದರು. ಆದರೆ ಆ ಕನಸು ನನಸಾಗಲಿಲ್ಲ. ಆದರೀಗ ವಿಶ್ವಕಪ್ ಗೆದ್ದಿದ್ದಾರೆ.

ನವಿ ಮುಂಬೈನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಹರಿಣಗಳ ತಂಡದ ವಿರುದ್ಧ ಟೀಂ ಇಂಡಿಯಾ ಗೆಲುವಿನ ಬಾವುಟ ಹಾರಿಸಿದೆ. ಹರ್ಮನ್‌ಪ್ರೀತ್ ಸೇನೆ ಕನಸಿನ ಕಪ್‌ಗೆ ಮುತ್ತಿಕ್ಕಿದೆ.

ಟೀಂ ಇಂಡಿಯಾ ಗೆಲುವಿನೊಂದಿಗೆ ವಿಶ್ವಾದ್ಯಂತ ಸಂಭ್ರಮ ಮುಗಿಲು ಮುಟ್ಟಿದೆ. ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಗೆಲುವಿಗೆ ದೇಶದ ಗಣ್ಯರು ಸಂತಸ ವ್ಯಕ್ತಪಡಿಸಿದ್ದಾರೆ. ಮಹಿಳಾ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಅಮೋಲ್ ಮುಜುಂದಾರ್. ಭಾರತೀಯ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಈ ಹೆಸರು ಅಚ್ಚಳಿಯದೆ ಉಳಿಯುತ್ತದೆ. ಟೀಂ ಇಂಡಿಯಾವನ್ನು ಪ್ರತಿನಿಧಿಸುವ ಕನಸು ನನಸಾಗದಿದ್ದರೂ, ಕೋಚ್ ಆಗಿ ವಿಶ್ವಕಪ್ ಗೆಲ್ಲಿಸಿದ್ದಾರೆ.

ಅಮೋಲ್ ಮುಜುಂದಾರ್ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಮುಂಬೈ ಮೂಲದ ಈ ಡೊಮೆಸ್ಟಿಕ್ ಸ್ಟಾರ್‌ಗೆ ಟೀಂ ಇಂಡಿಯಾ ಪರ ಆಡುವ ಅವಕಾಶ ಸಿಗಲಿಲ್ಲ. ಬಹುಶಃ ಅದಕ್ಕಾಗಿಯೇ ತಮ್ಮ ಕನಸನ್ನು ಈ ರೀತಿ ನನಸು ಮಾಡಿಕೊಂಡಿದ್ದಾರೆ.

ಮುಜುಂದಾರ್ ತಮ್ಮ ಡೊಮೆಸ್ಟಿಕ್ ವೃತ್ತಿಜೀವನದಲ್ಲಿ ಆಂಧ್ರ, ಅಸ್ಸಾಂ, ಇಂಡಿಯಾ ಎ, ಮುಂಬೈ ತಂಡಗಳ ಪರ ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 171 ಪಂದ್ಯಗಳಿಂದ 11,167 ರನ್ ಗಳಿಸಿದ್ದಾರೆ. ಇವರು ಒಂದು ಕಾಲದಲ್ಲಿ ಸಚಿನ್ ತೆಂಡುಲ್ಕರ್ ಸಹಪಾಠಿಯಾಗಿದ್ದರು.

Source link

Leave a Reply

Your email address will not be published. Required fields are marked *