ಕೋಲಾರ, (ನವೆಂಬರ್ 03): ಮಾಲೂರು ವಿಧಾನಸಭಾ ಕ್ಷೇತ್ರದ ಮತದಾರರ ಮರು ಮತ ಎಣಿಕೆಗೆ ಸೂಚಿಸಲಾಗಿದೆ. ಇದರ ಬೆನ್ನಲ್ಲೇ ಪರಾಜಿತ ಅಭ್ಯರ್ಥಿ, ದೂರುದಾರ ಮಂಜುನಾಥ್ ಗೌಡ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ತಹಶೀಲ್ದಾರ್ ಕೆಲ ಚುನಾವಣಾ ಸಾಮಗ್ರಿಗಳನ್ನು ಅಕ್ರಮವಾಗಿ ವಶಕ್ಕೆ ಪಡೆದಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಹೈ ಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮರು ಮತ ಎಣಿಕೆಗೆ ಆದೇಶ ನೀಡಿದೆ. ಭಾರತ ಚುನಾವಣಾ ಆಯೋಗದ ಕಡ್ಡಾಯ ಕಾರ್ಯ ವಿಧಾನದ ಪ್ರಕಾರ(ಪ್ರೊಸಿಡಿಂಗ್ಸ್) ಮತದಾನ ಮತ್ತು ಎಣಿಕೆಯ ನಂತರ ಚುನಾವಣಾ ಸಮಾಜಗಳನ್ನು ಮಹಜರು ಮಾಡಬೇಕು. ಬಳಿಕ ಕೋಲಾರದ ಸ್ಟ್ರಾಂಗ್ ರೂಂ ನಲ್ಲಿಡಬೇಕು. ಆದರೆ ಕೆಲ ಸಾಮಗ್ರಿಗಳು, ಪತ್ರಿಕೆಗಳು ಮಾಲೂರು ತಹಶೀಲ್ದಾರ್ ಅವರ ಬಳಿ ಇದೆ. ಇದು ಕಾನೂನು ಬಾಹಿರ ಹಾಗೂ ಚುನಾವಣಾ ಪ್ರೋಸಿಡಿಂಗ್ಸ್ ವಿರುದ್ಧವಾಗಿದೆ. ಹೀಗಾಗಿ ಪಾರದರ್ಶಕವಾಗಿರಬೇಕಾದ್ರೆ ತಕ್ಷಣ ವಶಕ್ಕೆ ಪಡೆದು ಅರ್ಜಿದಾರರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂಗೆ ಮರಳಿ ತರಬೇಕು. ನ್ಯಾಯಯುತವಾಗಿ ಮರು ಮತ ಎಣಿಕೆ ಆಗಬೇಕಾದ್ರೆ ತುರ್ತು ಮತ್ತು ಅಗತ್ಯ ಪ್ರಕ್ರಿಯೆ ನಡೆಸುವಂತೆ ಮನವಿ ಮಾಡಲಾಗುತ್ತಿದೆ.