ಕಲಬುರಗಿಯಲ್ಲಿ ಒಂದೇ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ಫೈಟ್​: ಗೊಂದಲದಲ್ಲಿ ಸಿಬ್ಬಂದಿ

ಕಲಬುರಗಿಯಲ್ಲಿ ಒಂದೇ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ಫೈಟ್​: ಗೊಂದಲದಲ್ಲಿ ಸಿಬ್ಬಂದಿ


ಒಂದೇ ಹುದ್ದೆಗಾಗಿ ಅಧಿಕಾರಿಗಳ ನಡುವೆ ಫೈಟ್ಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ

ಕಲಬುರಗಿ, ನವೆಂಬರ್ 03: ಕರ್ನಾಟಕದ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಒಂದೇ ಹುದ್ದೆ, ಒಂದೇ ಕುರ್ಚಿಗಾಗಿ ಅಧಿಕಾರಿಗಳ ನಡುವೆ ಕಿತ್ತಾಟ ನಡೆದಿರುವ ಪ್ರಸಂಗಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ. ಮೇಲಾಧಿಕಾರಿಗಳ ಬೇಜವಾಬ್ದಾರಿಯಿಂದಲೋ ಘಟನೆ, ಲೋಪದಿಂದಾಗಿಯೋ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಈ ಸಾಲಿಗೀಗ ಕಲಬುರಗಿಯ ಚೈಲ್ಡ್ ಡೆವಲಪ್ಮೆಂಟ್ ಪ್ರೊಜೆಕ್ಟ್ ಆಫೀಸರ್ (CDPO) ಹುದ್ದೆಯೂ ಸೇರ್ಪಡೆಯಾಗಿದೆ.

ಕಲಬುರಗಿ ನಗರ ಸಿಡಿಪಿಒ ಹುದ್ದೆಗೆ ಇಬ್ಬರು ಅಧಿಕಾರಿಗಳ ನಡುವೆ ಫೈಟ್ ಶುರುವಾಗಿದೆ, ಶ್ರೀನಿವಾಸ್ ಬಾಳವಾಳೆ ಮತ್ತು ಶಿವಶರಣಪ್ಪ ಎಂಬ ಅಧಿಕಾರಿಗಳ ನಡುವೆ ತಿಕ್ಕಾಟ ಶುರುವಾಗಿದೆ. ಶ್ರೀನಿವಾಸ್ ಬಾಳವಾಳೆ ಅವರನ್ನು ಸಿಡಿಪಿಒ ಹುದ್ದೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ. ಅದರಂತೆ ಶ್ರೀನಿವಾಸ್ ಅವರೂ ಕಲಬುರಗಿಯಲ್ಲಿ ಅಧಿಕಾರ ಸ್ವೀಕರಿಸಿದ್ದರು. ಇದಾಗಿ ಒಂದು ತಿಂಗಳಲ್ಲೇ ಅವರನ್ನು ವರ್ಗಾವಣೆ ಮಾಡಲಾಗಿದೆ. ಆ ಜಾಗಕ್ಕೆ ಶಿವಶರಣಪ್ಪ ಅವರನ್ನ ನೇಮಿಸಿ ಸರ್ಕಾರ ವಿಧಿಸಿತ್ತು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಶ್ರೀನಿವಾಸ್ ಅವರು ಕೆಎಟಿ (ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ) ಮೊರೆ ಹೋಗಿದ್ದು, ಆರ್ಡರ್‌ಗೆ ಸ್ಟೇ ಕೂಡ ತಂದಿದ್ದರು. ಆ ಸರ್ಕಾರ ಬಳಿಕ ಮೂವ್ಮೆಂಟ್ ಆರ್ಡರ್ ನೀಡದೆ ಇದ್ದರೂ ಕಲಬುರಗಿ ಸಿಡಿಪಿಒ ಆಗಿ ಶ್ರೀನಿವಾಸ್ ಮರಳಿ ಅಧಿಕಾರ ವಹಿಸಿಕೊಂಡಿದ್ದಾರೆ. ಇತ್ತ ಸರ್ಕಾರ ರಿಲೀವ್ ಆರ್ಡರ್ ನೀಡದ ಹಿನ್ನಲೆ ಶಿವಶರಣಪ್ಪ ಅವರು ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ.

ಇದನ್ನೂ ಓದಿ: ಆರೇ ವರ್ಷಕ್ಕೆ ಕಲಬುರಗಿ ಬೆಂಗಳೂರು ವಿಮಾನ ಸಂಚಾರ ಬಂದ್!

ಇಬ್ಬರಲ್ಲಿ ಸಿಡಿಪಿಒ ಯಾರು?: ಸಿಬ್ಬಂದಿಗೆ ಗೊಂದಲ

ಕಳೆದ 15 ದಿನಗಳಿಂದ ಶ್ರೀನಿವಾಸ್ ಬಾಳವಾಳೆ ಮತ್ತು ಶಿವಶರಣಪ್ಪ ಇಬ್ಬರೂ ಒಂದೇ ಹುದ್ದೆಯಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ. ಹೀಗಾಗಿ ಇಬ್ಬರು ಅಧಿಕಾರಿಗಳು ಯಾರು ಸಿಡಿಪಿಒ ಎಂಬ ಗೊಂದಲದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಸಿಬ್ಬಂದಿ ಇದ್ದು, ಯಾರ ಆದೇಶ ಪಾಲಿಸಬೇಕು ಎಂದು ಗೊತ್ತಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಬೇಕಾದ ಹಿರಿಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *