Headlines

ವೃಷಭಾವತಿ ಒಡಲಲ್ಲಿ ರಾಶಿ ರಾಶಿ ತ್ಯಾಜ್ಯ: ಬೆಂಗಳೂರಲ್ಲಿ ಕಸದ ಸಮಸ್ಯೆಗೆ ಮುಕ್ತಿ ಎಂದು?

ವೃಷಭಾವತಿ ಒಡಲಲ್ಲಿ ರಾಶಿ ರಾಶಿ ತ್ಯಾಜ್ಯ: ಬೆಂಗಳೂರಲ್ಲಿ ಕಸದ ಸಮಸ್ಯೆಗೆ ಮುಕ್ತಿ ಎಂದು?


ವೃಷಭಾವತಿ ನದಿ ಸೇರುತ್ತಿರುವ ರಾಶಿ ಕಸಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ

ಬೆಂಗಳೂರು ದಕ್ಷಿಣ (ರಾಮನಗರ), ನವೆಂಬರ್ 03: ಸಾಕಷ್ಟು ಕಠಿಣ ಕ್ರಮಗಳ ಬಳಿಕವೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಸದ್ಯಕ್ಕೆ ಮುಕ್ತಿ ಸಿಗುವಂತೆ ಕಾಣುತ್ತಿಲ್ಲ. ದಂಡ, ಕಸ ಎಸೆಯುವವರ ಮನೆ ಮುಂದೆಯೇ ತ್ಯಾಜ್ಯ ತಂದು ಸುರಿಯುವುದು ಸೇರಿ ಹತ್ತು ಹಲವು ಜಾಗೃತಿ ಕ್ರಮಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೈಗೊಂಡರೂ ಈ ಸಮಸ್ಯೆ ಮಾತ್ರ ಉಳಿದುಕೊಂಡಿದೆ. ಎಲ್ಲೆಂದರಲ್ಲಿ ಕಸ ಎಸೆದು ಹೋಗುತ್ತಿರುವ ಕಾರಣ ಜನರು ಮೂಗು ಮುಚ್ಚಿಕೊಂಡು ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಡಿಸಿಎಂ ಡಿಕೆ ಬೆಂಗಳೂರನ್ನು ಕಸಮುಕ್ತ ನಗರವನ್ನಾಗಿ ಮಾಡಲು ಪಣತೊಟ್ಟಿದ್ದು, ಈ ಬಗ್ಗೆ ಶಿವಕುಮಾರ್ ಮುತುವರ್ಜಿ ವಹಿಸಿದ್ದಾರೆ. ಹೀಗಿದ್ದರೂ ಕಸದ ವಿಲೇವಾರಿ ಮಾತ್ರ ಸರಿಯಾಗಿ ನಡೆಯುತ್ತಿಲ್ಲ. ಕುಂಬಳಗೂಡು- ಕಗ್ಗಲಿಪುರ ರಸ್ತೆಯ ಅಕ್ಕಪಕ್ಕದಲ್ಲಿ ರಾಶಿ ರಾಶಿ ಕಸ ಸಂಗ್ರಹವಾಗಿದ್ದು, ರಸ್ತೆಬದಿಯಲ್ಲಿ ಸಾಗುವ ಜನ ಅಸಹ್ಯ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗಾಳಿ ಬಂದರೆ ಅಕ್ಕ ಪಕ್ಕದ ಏರಿಯಾಗಳ ವರೆಗೆ ದುರ್ವಾಸನೆ ಹರಡುತ್ತಿದೆ.

ಇದನ್ನೂ ಓದಿ: ದಂಡ ವಿಧಿಸಿದ್ರೂ ಬೆಂಗಳೂರಿನಲ್ಲಿ ಕಸ ಹಾಕುವುದು ನಿಲ್ಲುತ್ತಿಲ್ಲ: ವಿಲೇವಾರಿಯಲ್ಲೂ ನಿರ್ಲಕ್ಷ್ಯ

ವೃಷಭಾವತಿ ನದಿ ನೀರು ಕಲುಷಿತ

ಈ ರಾಶಿ ಕಸ ಒಂದು ಕಾಲದಲ್ಲಿ ಜೀವ ಸೆಲೆಯಾಗಿದ್ದ ವೃಷಭಾವತಿ ನದಿ ಒಡಲನ್ನ ಸೇರುವ ನೀರು,ಈಗಾಗಲೇ ನದಿ ಸಂಪೂರ್ಣ ಕಲುಷಿತಗೊಂಡಿದೆ. ಈ ಪರಿಸರದ ಸಮೀಪವೇ ಅಪಾರ್ಟ್‌ಮೆಂಟ್‌ಗಳಿದ್ದು, ನಿವಾಸಿಗಳ ಪ್ರತಿನಿತ್ಯ ಪರದಾಡಬೇಕಾದ ಸ್ಥಿತಿ ಇದೆ. ಇದೇ ರಸ್ತೆಯಲ್ಲಿ ಪ್ರತಿಷ್ಠಿತ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಸಂಚರಿಸಬೇಕಾಗಿದೆ. ಹೀಗಿದ್ದರೂ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದಾರೆ ಸ್ಥಳೀಯ ನಿವಾಸಿಗಳ ಆರೋಪ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 6:32 pm, ಸೋಮ, 3 ನವೆಂಬರ್ 25



Source link

Leave a Reply

Your email address will not be published. Required fields are marked *