Headlines

'ಓಳು ಬಿಡೋ ಸುಂದರಿ' ಹಾಡಿಗೆ ಚಿಂದಿ ಉಡಾಯಿಸಿದ Brahmagantu- Naa Ninna bidalaare ನಟಿಯರು!

'ಓಳು ಬಿಡೋ ಸುಂದರಿ' ಹಾಡಿಗೆ ಚಿಂದಿ ಉಡಾಯಿಸಿದ Brahmagantu- Naa Ninna bidalaare ನಟಿಯರು!

'ಓಳು ಬಿಡೋ ಸುಂದರಿ' ಹಾಡಿಗೆ ಚಿಂದಿ ಉಡಾಯಿಸಿದ Brahmagantu- Naa Ninna bidalaare ನಟಿಯರು!
ಬ್ರಹ್ಮಗಂಟು ಸೀರಿಯಲ್‌ನಲ್ಲಿ ಸುಕನ್ಯಾಳ ಕುತಂತ್ರದಿಂದ ದೀಪಾ ಮತ್ತು ಚಿರು ಅಪಾಯದಲ್ಲಿದ್ದು, ಅವರನ್ನು ರಕ್ಷಿಸಲು ‘ನಾ ನಿನ್ನ ಬಿಡಲಾರೆ’ ಖ್ಯಾತಿಯ ಶರತ್ ಮುಂದಾಗಿದ್ದಾನೆ. ಈ ಎರಡು ಧಾರಾವಾಹಿಗಳ ಮಹಾಸಂಗಮದ ನಡುವೆ, ನಾಯಕಿಯರಾದ ದೀಪಾ (ದಿಯಾ) ಮತ್ತು ದುರ್ಗಾ (ರಿಷಿಕಾ) ಅವರ ಡಾನ್ಸ್ ರೀಲ್ಸ್ ವೈರಲ್ ಆಗಿದೆ.
ಬ್ರಹ್ಮಗಂಟು ಸೀರಿಯಲ್​ನಲ್ಲಿ ಇದೀಗ ಸುಕನ್ಯಾ ಮಾಡಿದ ಕುತಂತ್ರಕ್ಕೆ ಚಿರು ಮತ್ತು ದೀಪಾಳ ಜೀವನ ಡೇಂಜರ್​ನಲ್ಲಿದೆ. ದೀಪಾ ಜೊತೆ ಚಿರುನೂ ಕಟ್ಟಡವೊಂದಕ್ಕೆ ಹೋಗಿದ್ದಾನೆ ಎಂದು ಅರಿಯದ ಸುಕನ್ಯಾ ಅಲ್ಲಿಯ ಗ್ಯಾಸ್​ ಲೀಕ್​ ಮಾಡಿಸಿದ್ದಾಳೆ. ಆದರೆ ಚಿರುನೂ ಜೊತೆಯಲ್ಲಿ ಇದ್ದದ್ದರಿಂದ ಗ್ಯಾಸ್​ ಬ್ಲಾಸ್ಟ್​ ಆಗಿ ಇಬ್ಬರ ಜೀವನಕ್ಕೂ ಅಪಾಯ ಬಂದಿದೆ.

ಅವರನ್ನು ಕಾಪಾಡಲು ನಾ ನಿನ್ನ ಬಿಡಲಾರೆ (Naa Ninna bidalaare) ಶರತ್​ ಹೋಗಿದ್ದಾನೆ. ಈಗ ಅವನ ಜೀವನ ಅಪಾಯದಲ್ಲಿದ್ದು ದುರ್ಗಾಗೆ ಸೂಚನೆ ಸಿಕ್ಕಿದೆ. ಇತ್ತ ದೀಪಾ ಅತ್ತ ದುರ್ಗಾಳ ಮಂಗಳಸೂತ್ರ ಹರಿದು ಅಪಾಯದ ಮುನ್ಸೂಚನೆ ಕೊಟ್ಟಿದೆ. ಈ ಎರಡೂ ಸೀರಿಯಲ್​ಗಳ ಮಹಾಸಂಗಮ ನಡೆಯುತ್ತಿದೆ.

ಇದರ ನಡುವೆಯೇ ಬ್ರಹ್ಮಗಂಟು ದೀಪಾ ಮತ್ತು ನಾ ನಿನ್ನ ಬಿಡಲಾರೆ ದುರ್ಗಾ ಸುಮ್​ಸುಮ್​ನೆ ಓಳು ಬಿಡೋ ಸುಂದರಿ ಹಾಡಿಗೆ ಸಕತ್​ ಸ್ಟೆಪ್​ ಹಾಕಿದ್ದು ಚಿಂದಿ ಉಡಾಯಿಸಿದ್ದಾರೆ. ಇವರಿಬ್ಬರ ಡಾನ್ಸ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.

ಇನ್ನು ದೀಪಾ ರಿಯಲ್​ ಹೆಸರು ದಿಯಾ ಪಾಲಕ್ಕಲ್​ ಹಾಗೂ ದುರ್ಗಾ ರಿಯಲ್ ಹೆಸರು ರಿಷಿಕಾ. ದಿಯಾ ಅವರು, ಕನ್ನಡದ ಹುಡುಗಿ. ಆದರೂ ತಮಿಳು ಸೀರಿಯಲ್​ನಲ್ಲಿಯೂ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಬಾಲನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡವರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ (Kinnari) ಸೀರಿಯಲ್​ನಲ್ಲಿ ಪುಟಾಣಿ ಐಶ್ವರ್ಯಾ ಪಾತ್ರದಲ್ಲಿ ಈಕೆ ನಟಿಸಿದ್ದರು. ಬಳಿಕ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ತಮಿಳು ಧಾರಾವಾಹಿಯಲ್ಲಿ ನಟಿ ಖುಷ್ಬು ಜೊತೆಗೂ ನಟಿಸಿದ್ದರು ಇವರು.ಕ

ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬ್ರಹ್ಮಗಂಟುವಿನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಗೆಟಪ್ಪೇ ಬದಲಾಗಿದೆ. ಅಂದಹಾಗೆ ದಿಯಾ ಅವರು ಸಿನಿಮಾದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾದ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ದಿಯಾ ಎನ್ನುವ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು.

ಇನ್ನು ನಟಿ ರಿಷಿಕಾಗೆ ನಾ ನಿನ್ನ ಬಿಡಲಾರೆ ನಾಲ್ಕನೇ ಧಾರಾವಾಹಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕನ್ಯಾಕುಮಾರಿ’ ಧಾರಾವಾಹಿಯಲ್ಲಿ ನಾಯಕನ ತಂಗಿ ಐಶ್ವರ್ಯಾ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟರು.ಮೊದಲ ಸೀರಿಯಲ್​ನಲ್ಲಿ ಸೈಡ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದರೂ, ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದರು. ಬಳಿಕ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕನ್ಯಾದಾನ’ ಧಾರಾವಾಹಿಯಲ್ಲಿ ಚಿತ್ರಾ ಆಗಿ ನಟಿಸಿದ ಈಕೆ ಅಲ್ಲೂ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡ ಪ್ರತಿಭೆ.

ದೀಪಾ-ದುರ್ಗಾ ಸಕತ್​ ರೀಲ್ಸ್​ ನೋಡಲು ಇದರ ಮೇಲೆ  ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *