ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಬೃಹತ್ ಬೆಂಗಳೂರು ಪ್ರಾಧಿಕಾರ) ಅಂತಾದ ಮೇಲೆ ಬೆಂಗಳೂರು ನಿರ್ಮಾಣ ಬಿ ಖಾತಾ (ಬಿ ಖಾತಾ) ಆಸ್ತಿಗಳು, ಇತರ ನಿವೇಶನಗಳು ಹಾಗೂ ಕಟ್ಟಿರುವ ಮನೆಗಳನ್ನು ಎ ಖಾತಾಗೆ ನೀಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಅದಕ್ಕೆ ನವೆಂಬರ್ ಒಂದನೇ ತಾರೀಕಿನಿಂದ ಅರ್ಜಿ ಆರಂಭಿಸುವುದಾಗಿಯೂ ಹಾಗೂ ನೂರು ದಿನಗಳ ಒಳಗಿನ ಗಡುವು ಸಹ ಹೇಳಿದ್ದರು. ಇವತ್ತಿಗೆ ಏನಾಗಿದೆ ಅಂದರೆ, ನವೆಂಬರ್ ಮೂರನೇ ತಾರೀಕಿನಂದು ಆಯಾ ವಾರ್ಡ್ ಗಳ ಕಚೇರಿಗೆ ತೆರಳಿ ಈ ಬಗ್ಗೆ ವಿಚಾರಿಸಿದರೆ, ನಮಗೇನೂ ಮಾಹಿತಿ ಬಂದಿಲ್ಲ, ಅದೇನು ಮಾಡ್ತಾರೋ ಎಂಬ ಉತ್ತರ ಕೊಡುತ್ತಾರೆ. ಲೈನ್ ಮತ್ತು ಆಫ್ ಲೈನ್ ಎರಡೂ ರೀತಿಯಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಆದರೆ ಇಂಥದ್ದೊಂದು ಮಹತ್ತರವಾದ ಯೋಜನೆ ಆರಂಭವಾಗಿದೆ ಎಂಬ ಬಗ್ಗೆ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿಲ್ಲ. ಇನ್ನು ಈ ಬಗ್ಗೆ ಮಾಹಿತಿ ಬೇಕು ಅಂತಾ ಎಷ್ಟು ಮೊತ್ತ ಕಟ್ಟಬೇಕು, ಲೆಕ್ಕಾಚಾರ ಹೇಗೆ, ಪಾವತಿಗೆ ಕಾಲಾವಕಾಶ ಹೀಗೆ ಇತ್ಯಾದಿಗಳ ಬಗ್ಗೆ ಏನೆಂದರೆ ಏನನ್ನೂ ಸುದ್ದಿ- ಸುಳಿವು ಇಲ್ಲ.
ಕನ್ವರ್ಷನ್ ಶುಲ್ಕ, ಇವತ್ತಿಗೆ ಎಷ್ಟು ಮೊತ್ತದ ನಿವೇಶನದ ಸರ್ಕಾರಿ ನೋಂದಣಿ ಮೌಲ್ಯ ಏನಿದೆ, ಅದರ ಶೇಕಡಾ ಐಡಿ ಮತ್ತು ಹೆಚ್ಚುವರಿಯಾಗಿ ಅನ್ವಯಿತ ಶುಲ್ಕ- ಹೀಗೆ ಮೂರು ಮೊತ್ತದ ಬಗ್ಗೆ ವೆಬ್ ಸೈಟ್- https://bbmp.karnataka.gov.in/BtoAKhata ಇದರಲ್ಲಿ ಮಾಹಿತಿ. ಆದರೆ ಲೆಕ್ಕಾಚಾರ ಹೇಗೆ ಎಂಬ ಬಗ್ಗೆ ಒಂದು ಉದಾಹರಣೆಯನ್ನು ಕೊಟ್ಟಿದ್ದರೆ ಅನುಕೂಲ ಆಗುತ್ತಿದೆ. ಅದು ಕೂಡ ಎಲ್ಲೂ ಲಭ್ಯವಿಲ್ಲ. ಈಗಿನ ಸನ್ನಿವೇಶದಲ್ಲಿ ಈ ಬಗ್ಗೆ ಇರುವ ಪ್ರಶ್ನೆ ಏನೆಂದರೆ, ನಿಜವಾಗಿಯೂ ಬಿ ಖಾತಾ ಆಸ್ತಿಗಳನ್ನು ಎ ಖಾತಾ ಮಾಡಿಕೊಡುವ ಕುರಿತು ಸ್ಪಷ್ಟವಾದ ಚಿತ್ರಣವೊಂದು ಸರ್ಕಾರಕ್ಕೆ ಇದೆಯಾ ಅಥವಾ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನಂತರ ಬಾಕಿ ಇರುವ ಚುನಾವಣೆಯನ್ನು ಗೆಲ್ಲಲು ಹೀಗೊಂದು ಘೋಷಣೆ ಮಾಡಿಬಿಟ್ಟಿದ್ದೀರಾ?
ಇದನ್ನೂ ಓದಿ: ಇಂದಿನಿಂದ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಅವಕಾಶ: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಅರ್ಜಿ ಸಲ್ಲಿಕೆ ಹೇಗೆ ಮಾಡಬೇಕು, ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬುದಕ್ಕೆ ಟೆಂಪ್ಲೇಟ್ ಸಹಿತ ಈ ಖಾತೆ ಬದಲಾವಣೆಯ ಮಾಹಿತಿ ವೆಬ್‌ಸೈಟ್‌ನಲ್ಲಿದೆ. ಆದರೆ ಮೂರು ಶುಲ್ಕವನ್ನು ಪಾವತಿ ಮಾಡಬೇಕಿಲ್ಲ, ಅದಕ್ಕೆ ಎಲ್ಲೂ ಲೆಕ್ಕಾಚಾರ ಸಹಿತ ಮುಂದಿಟ್ಟಿಲ್ಲ. ಅದೇನು ಸಾಮಾಜಿಕ- ಆರ್ಥಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ ಅಂತಲೋ ಹೇಗೋ ಜಿಬಿಎ ಅಧಿಕಾರಿಗಳು, ಸಿಬ್ಬಂದಿಗೂ ಈ ಬಗ್ಗೆ ಗೊತ್ತಿಲ್ಲ. ಹೀಗೆ ಅಂದುಕೊಂಡಲ್ಲಿ ಮಾಹಿತಿ ಕೇಳಿಕೊಂಡು ಹೋಗಿದ್ದವರಿಗೆ ಒಂಚೂರು ಸಮಾಧಾನ. ಅಥವಾ ಇನ್ನೂ ಇಡೀ ಪ್ರಕ್ರಿಯೆಯ ಬಗ್ಗೆಯೇ ಸರಿಯಾದ ರೂಪ- ರೇಷೆ ಇಲ್ಲ ಅಂತಾ ಮುಂದೆ ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ.
ಸರ್ಕಾರಕ್ಕೆ ಎಷ್ಟು ಆದಾಯ ಬರುತ್ತಿದೆಯೋ ಏನೋ ಗೊತ್ತಿಲ್ಲ. ಆದರೆ ಜನರಂತೂ ದೊಡ್ಡ ಮೊತ್ತದ ಹಣವನ್ನು ಕಟ್ಟಲೇ ಬೇಕು ಎಂಬುದು ಮೇಲುನೋಟಕ್ಕೇ ಗೊತ್ತಾಗುತ್ತದೆ. ಆದ್ದರಿಂದ ಒಂದು ಬ್ರೋಷರ್ ಅಥವಾ ಬುಕ್ ಲೆಟ್ ಬಿಡುಗಡೆ ಮಾಡಬೇಕಿತ್ತು ಅಲ್ಲವಾ? ತರಬೇತಿ ಅಂತ ಜಿಬಿಎ ಅಧಿಕಾರಿಗಳು, ಸಿಬ್ಬಂದಿ ಆಗಿ, ಸಾಮಾನ್ಯ ಮಾಹಿತಿಯಾದರೂ ತಿಳಿದಿರಬೇಕಿತ್ತು. ಬಹಳ ಪ್ರಶ್ನೆಗಳಿಗೆ ಒಂದೋ ಉತ್ತರವೇ ಇಲ್ಲ, ಪದೇ ಪದೇ ಕಿವಿಗೆ ಬೀಳುವ “ಸ್ಟ್ಯಾಂಡರ್ಡ್ ಉತ್ತರ” ಗೊತ್ತಿಲ್ಲ, ಗೊತ್ತಿಲ್ಲ, ಗೊತ್ತಿಲ್ಲ.
-ಎಂ. ಶ್ರೀನಿವಾಸ