ಸುದೀಪ್ ಎದುರೇ ರಿಷಾ ಎಲಿಮಿನೇಷನ್; ಸಾಲುಗಳ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್

ಸುದೀಪ್ ಎದುರೇ ರಿಷಾ ಎಲಿಮಿನೇಷನ್; ಸಾಲುಗಳ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್


ಭಾರತದ ವಿವಿಧ ಭಾಷೆಗಳಲ್ಲಿ ಬಿಗ್ ಬಾಸ್ ಪ್ರಸಾರ ಕಾಣಿಸಿಕೊಂಡಿದೆ. ಎಲ್ಲಾ ಬಿಗ್ ಬಾಸ್‌ನ ಮೂಲ ನಿಯಮ ಒಂದೇ ರೀತಿಯಲ್ಲಿದೆ. ಅದರಲ್ಲಿ ಯಾರ ಮೇಲೂ ಹಲ್ಲೆ ಮಾಡಬಾರದು ಎಂಬುದೂ ಒಂದು. ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈ ನಿಯಮವನ್ನು ರಿಷಾ (ರಿಷಾ) ಅವರು ಬ್ರೇಕ್ ಮಾಡಿದ್ದಾರೆ. ಗಿಲ್ಲಿ ಮೇಲೆ ಅವರು ಕೈ ಮಾಡಿದ್ದಾರೆ. ಆ ಬಳಿಕ ತಮಾಷೆಗೆ ಮಾಡಿದ್ದು ಎಂದು ಸಬೂಬು ಹೇಳಿದ್ದಾರೆ. ಅವರು ಹೊರಹೋಗಬೇಕು ಎಂದು ಅನೇಕರು ಇದ್ದರು. ಆದರೆ, ಆ ರೀತಿ ಆಗಿಲ್ಲ. ಈಗ ನವೆಂಬರ್ 3 ರ ಎಪಿಸೋಡ್ ಕೊನೆಯಲ್ಲಿ ಈ ಬಗ್ಗೆ ದೊಡ್ಡದಾಗಿ ಸೂಚನೆ ನೀಡಲಾಗುತ್ತದೆ.

ಕಳೆದ ಸೀಸನ್ ಅಲ್ಲಿ ರಂಜಿತ್ ಹಾಗೂ ಲಾಯರ್ ಜಗದೀಶ್ ಮಧ್ಯೆ ಕಿರಿಕ್ ಆದಾಗ ಸಾಕಷ್ಟು ಚರ್ಚೆಗಳು ನಡೆದವು. ಆ ಕ್ಷಣವೇ ಬಿಗ್ ಬಾಸ್ ಇಬ್ಬರನ್ನೂ ಮನೆಯಿಂದ ಹೊರಕ್ಕೆ ಹಾಕಿದರು. ಈ ಬಾರಿಯೂ ಇದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಬಿಗ್ ಬಾಸ್ ಕಡೆಯಿಂದ ಯಾವುದೇ ಆದೇಶ ಬಂದಿಲ್ಲ. ಕೊನೆಯಲ್ಲಿ ಬಿಗ್ ಬಾಸ್ ಸೂಚನೆ ಒಂದನ್ನು ತಿಳಿಸಿದೆ.

ನಡೆದ ಘಟನೆ ಏನು?

ರಿಷಾ ಅವರು ಬಾತ್ರೂಂನಲ್ಲಿ ಸ್ನಾನಕ್ಕೆ ಹೊರಟಿದ್ದರು. ಈ ವೇಳೆ ಬಕೆಟ್ ನಲ್ಲಿ ನೀರು ತುಂಬಿಸಿ ಅದನ್ನು ನೀಡೋದಾಗಿ ಗಿಲ್ಲಿಗೆ ಹೇಳಿದ್ದರು. ಬಕೆಟ್ ತುಂಬಿದ್ದರಿಂದ ಅವರು ಬಾಗಿಲು ಹಾಕಿಕೊಂಡರು. ಕೇಳಿದ್ದಕ್ಕೆ ಸ್ನಾನ ಆದಮೇಲೆ ಕೊಡುತ್ತೇನೆ ಎಂದರು. ಇದರಿಂದ ಸಿಟ್ಟಾದ ಗಿಲ್ಲಿ ಅವರ ಬಟ್ಟೆಗಳನ್ನು ತಂದು ಬಾತ್ರೂಂ ಹೊರಗೆ ಇಟ್ಟರು. ಇದರಿಂದ ಸಿಟ್ಟಾದ ರಿಷಾ ಅವರು ಗಿಲ್ಲಿಗೆ ಹೊಡೆದಿದ್ದಾರೆ. ಜೊತೆಗೆ ಅವರನ್ನು ತಳ್ಳಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಗಿಲ್ಲಿ ಮೇಲೆ ಹಲ್ಲೆ ಮಾಡಿದ ರಿಷಾ ಗೌಡ; ಅರ್ಧದಲ್ಲೇ ಮನೆಯಿಂದ ಎಲಿಮಿನೇಟ್?

ಬಿಗ್ ಬಾಸ್ ಕೊಟ್ಟ ಸೂಚನೆ ಏನು?

‘ಇಂದಿನ ಸಂಚಿಕೆಯಲ್ಲಿ ಮನೆಯ ಸದಸ್ಯರು ಬಿಗ್ ಬಾಸ್ ನ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಎಲ್ಲಾ ನಿಯಮಗಳ ಉಲ್ಲಂಘನೆ, ವಾರಾಂತ್ಯದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪರು ಚರ್ಚಿಸಿ, ಚರ್ಚಿಸಿ ನ್ಯಾಯ ಒದಗಿಸಿದ್ದಾರೆ’ ಎಂದು ಬರೆಯಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *