ಸೂಪರ್ ಸ್ಟಾರ್ ಆದ ಪ್ರತಿ ಹೀರೋಗಳ ಹಿಂದೆ ಒಂದು ಶ್ರಮ ಇರುತ್ತದೆ. ಆ ಶ್ರಮ ಎಲ್ಲರಿಗೂ ಕಾಣಿಸೋದಿಲ್ಲ. ಇದನ್ನು ಹೇಳಿಕೊಂಡರೆ, ಇನ್ನೂ ಕೆಲವರು ಮೌನ ವಹಿಸುತ್ತಾರೆ. ಕಿಚ್ಚ ಸುದೀಪ್ ಅವರು ಇಂದು ಸ್ಟಾರ್ ಹೀರೋ. ಅವರು ಮಾಡಿದ ಸಾಧನೆ ತುಂಬಾನೇ ದೊಡ್ಡದು. ಆದರೆ, ಮೊದಲು ಅವರು ಈ ರೀತಿ ಇರಲಿಲ್ಲ. ಅವರು ತುಂಬಾನೇ ಕಷ್ಟಪಟ್ಟಿದ್ದರು. ಈ ಬಗ್ಗೆ ಸುದೀಪ್ ಅವರೇ ಮೊದಲು ಹೇಳಿದ್ದರು. ಅವರನ್ನು ಅನೇಕರು ಲತ್ತೆ ಎಂದು ಕರೆಯುತ್ತಿದ್ದರಂತೆ.
ತಮಿಳಿನ ಸಂದರ್ಶನ ಒಂದರಲ್ಲಿ ಸುದೀಪ್ ಮಾತನಾಡಿದ್ದರು. ‘ಎರಡು ಸಿನಿಮಾ ಒಪ್ಪಿಕೊಂಡೆ ಎರಡೂ ಸೆಟ್ಟೇರಿಲ್ಲ. ಮೂರನೇ ಸಿನಿಮಾ ಮಾಡಿದೆ, ಯಶಸ್ಸು ಕಾಣಲಿಲ್ಲ. ಆ ಸಮಯದಲ್ಲಿ ಐರನ್ ಲೆಗ್ ಹೇಳಿದರು. ನನಗೆ ಅದರ ಅರ್ಥವೇ ಗೊತ್ತಿರಲಿಲ್ಲ. ಆಮೇಲೆ ಯಾರೋ ಬಂದು ಲತ್ತೆ ಎಂಬ ಅರ್ಥವಿದೆ ಎಂದರು. ಐರನ್ ಎಂದರೆ ಸ್ಟ್ರಾಂಗ್ ಅಲ್ಲವೇ ಎಂದು ಕೇಳಿದೆ. ಆಗ ಅವರು ಹಾಗಲ್ಲ ಹೇಳಿದರು. ಆಗ ಏನು ಮಾಡಬೇಕು ಎಂಬ ಪ್ರಶ್ನೆ ಮೂಡಿತು’ ಎಂದಿದ್ದರು ಸುದೀಪ್.
‘ಆಗ ನಾನು ಧಾರಾವಾಹಿ ಮಾಡಿದೆ. ಮರಳಿ ಬಂದು ಸ್ಪೋರ್ಟಿಂಗ್ ಪಾತ್ರ ಮಾಡಿದೆ. ಆಗ ಸುನಿಲ್ ದೇಸಾಯಿ ಅವರು ಸಿಕ್ಕರು. ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸಿದೆ. ಸಿನಿಮಾ ಒಳ್ಳೆಯ ಹಿಟ್ ಆಯಿತು. ಆದರೆ, ಕೆಲವೇ ದಿನಗಳಲ್ಲಿ ರಾಜ್‌ಕುಮಾರ್ ಅಪಹರಣ ಆದರು. ಥಿಯೇಟರ್ ಕ್ಲೋಸ್ ಆಯಿತು. ಮತ್ತೆ ಬಂತು ಐರನ್ ಲೆಗ್’ ಎಂದಿದ್ದರು ಕಿಚ್ಚ.
ಇದನ್ನೂ ಓದಿ: ಗಿಲ್ಲಿಯಷ್ಟು ಅಮಾಯಕ ಯಾರೂ ಇಲ್ಲ: ಕಾವ್ಯ ವಿಚಾರಕ್ಕೆ ಕಾಲೆಳೆದ ಕಿಚ್ಚ ಸುದೀಪ್
‘ಹುಚ್ಚ ಸಿನಿಮಾ ರಿಲೀಸ್ ಆಯಿತು. ಥಿಯೇಟರ್‌ಗೆ ಹೋದೆ ಕೆಲವೇ ಮಂದಿ. ಆಲ್ ದಿ ಬೆಸ್ಟ್ ಹೇಳಿದರು. ನಾನು ಅಲ್ಲಿಂದ ಹೋದೆ. ಬೇಸರ ಆಗ್ತಾ ಇತ್ತು. ಆ ಬಳಿಕ ಸಿನಿಮಾ ಹೌಸ್ ಫುಲ್ ಆಗೋಕೆ ಶುರು ಆಯ್ತು. ನಾನು ಥಿಯೇಟರ್ ನಲ್ಲಿ ಬಂದಾಗ ಕಿಚ್ಚ ಎಂದು ಕೂಗಿದರು. ನನ್ನ ಹೆಸರು ಆಗ ಯಾರಿಗೂ ಗೊತ್ತಿರಲಿಲ್ಲ. ಅಲ್ಲಿಂದ ಕಿಚ್ಚ ಬಿರುದು ಬಂತು’ ಎಂದು ಸುದೀಪ್ ಅವರು ವಿವರಣೆ ನೀಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.