ಮೆಟ್ರೋ ಸುರಂಗ ಮಾರ್ಗ (ಸಾಂದರ್ಭಿಕ ಚಿತ್ರ(
ಬೆಂಗಳೂರು, ನವೆಂಬರ್ 4: ನಮ್ಮ ಮೆಟ್ರೋದ (ನಮ್ಮ ಮೆಟ್ರೋ) ಪಿಂಕ್ ಲೈನ್ ಒಟ್ಟು 21.26 ಕಿಮೀ ಉದ್ದದ ಮಾರ್ಗದಲ್ಲಿ 2026 ರ ಮೇ ವೇಳೆಗೆ ರೈಲು ಸಂಚಾರ ಶುರುವಾಗಿದೆಯೇ? ಇಂಥದ್ದೊಂದು ಪ್ರಶ್ನೆ ಜನರಲ್ಲಿ ಕಳೆದ ಕೆಲವು ದಿನಗಳಿಂದ ಉದ್ಭವಿಸಿತ್ತು. ಇದಕ್ಕೆ ಕಾರಣ ಡಿಸಿಎಂ ಡಿಕೆ ಶಿವಕುಮಾರ್ ಅವರು ಎಕ್ಸ್ ಮೂಲಕ ನೀಡಿದ್ದ ಮಾಹಿತಿ. ಆದರೆ, ಪಿಂಕ್ ಲೈನ್ ಮೆಟ್ರೋ ಕಾರ್ಯಾಚರಣೆ ಬಗ್ಗೆ ಇದೀಗ ಬಿಎಂಆರ್ ಸಿಎಲ್ (BMRCL) ಅಧಿಕೃತ ಮಾಹಿತಿ ನೀಡಿದೆ. ಅದರಂತೆ, ಪಿಂಕ್ ಲೈನ್ ಸಂಪೂರ್ಣ ಮೆಟ್ರೋ ಮಾರ್ಗದಲ್ಲಿ 2026 ರ ಮೇ ವೇಳೆಗೆ ರೈಲು ಸಂಚಾರ ಪ್ರಾರಂಭವಾಗುವುದಿಲ್ಲ.
ನಮ್ಮ ಮೆಟ್ರೋ ಪಿಂಕ್ ಲೈನ್ ಎರಡು ಹಂತಗಳಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಬಿಎಂಆರ್ಸಿಎಲ್ ಹಿರಿಯ ಅಧಿಕಾರಿಗಳು. ಕಾಳೇನ ಅಗ್ರಹಾರ ಮತ್ತು ತಾವರೆಕೆರೆ ನಡುವಿನ 7.5 ಕಿಮೀ ಎಲಿವೇಟೆಡ್ ಲೈನ್ವು 2026 ರ ಮೇ ವೇಳೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಡೈರಿ ಸರ್ಕಲ್ನಿಂದ ನಾಗವಾರದ ಉಳಿದ 13.76 ಕಿಮೀ ಅಂಡರ್ ಗ್ರೌಂಡ್ ಮಾರ್ಗವು 2026 ರ ಡಿಸೆಂಬರ್ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಪಿಂಕ್ ಲೈನ್ ಎಲಿವೇಟೆಡ್ ವಿಭಾಗದ ಕಾಮಗಾರಿ ಪೂರ್ಣಗೊಂಡಿದೆ. ಪ್ರಾರಂಭಕ್ಕೆ ಮೊದಲು ಸಣ್ಣಪುಟ್ಟ ಕೆಲಸಗಳು ಮಾತ್ರ ಉಳಿದಿವೆ. ಬನ್ನೇರುಘಟ್ಟ ರಸ್ತೆಯ ಉದ್ದಕ್ಕೂ ಸಾಗುವ ಈ ವಿಭಾಗವು ಆರು ನಿಲ್ದಾಣಗಳನ್ನು (ತಾವರೆಕೆರೆ, ಜಯದೇವ, ಜೆಪಿ ನಗರ 4 ನೇ ಹಂತ, ಐಎಂಬಿ, ಹುಳಿಮಾವು ಮತ್ತು ಕಾಳೇನ ಅಗ್ರಹಾರ) ಎಂದು ಬಿಎಂಆರ್ ಸಿಎಲ್ ಅಧಿಕಾರಿ.
ದಕ್ಷಿಣ ಭಾರತದ ಅತಿ ಎತ್ತರದ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಜಯದೇವ ಆಸ್ಪತ್ರೆ ನಿಲ್ದಾಣವು ಇಂಟರ್ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ.
ಇದನ್ನೂ ಓದಿ: ಲಾಲ್ ಬಾಗ್, ಸ್ಯಾಂಕಿ ಟ್ಯಾಂಕ್ ಕೆರೆಗೂ ಸುರಂಗ ರಸ್ತೆಯಿಂದ ಹಾನಿ ಎಂದ ತಜ್ಞರು
ಮತ್ತೊಂದೆಡೆ, 2024 ರ ಡಿಸೆಂಬರ್ನಲ್ಲೇ ಸುರಂಗ ಮಾರ್ಗ ಇದ್ದರೂ ಅಡರ್ ಗ್ರೌಡ್ ವಿಭಾಗದ ಕಾಮಗಾರಿ ನಡೆಯುತ್ತಿದೆ. ಡೈರಿ ಸರ್ಕಲ್, ಎಂಜಿ ರಸ್ತೆ ಮತ್ತು ನಾಗವಾರ ಮೂಲಕ ಹಾದುಹೋಗುವ 13.76 ಕಿಮೀ ಕಾರಿಡಾರ್ 12 ನಿಲ್ದಾಣಗಳನ್ನು ಮತ್ತು ಎಂಜಿ ರಸ್ತೆಯಲ್ಲಿ ನಗರದ ನಾಲ್ಕನೇ ಇಂಟರ್ಚೇಂಜ್ ಎಂದು ಬಿಎಂಆರ್ ಸಿಎಲ್.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ