ಬೆಂಗಳೂರು, ನವೆಂಬರ್ 04: ಕಸ ಸುರಿದಿದ್ದಲ್ಲದೆ ಸಿಸಿ ಕ್ಯಾಮರಾ ಮುಂದೆ ಡ್ಯಾನ್ಸ್ ಮಾಡಿ ಹುಚ್ಚಾಟ ಮೆರೆದ ಯುವತಿಗೆ ಮಾರ್ಷಲ್ ಶಾಕ್ ಕೊಟ್ಟ ಘಟನೆ ಬೆಂಗಳೂರಿನ ಮೈಕೋ ಲೇಟ್ ನಡೆದಿತ್ತು. ಕಸದ ಸಮಸ್ಯೆಗೆ ಮುಕ್ತಿ ಹಾಡಲು ಜಿಬಿಎ ಜೊತೆ ಸ್ಥಳೀಯ ನಿವಾಸಿಗಳು ಕೈಜೋಡಿಸಿದ್ದು, ಕಸ ಹಾಕುತ್ತಿದ್ದ ಹಂತದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಆ ಮೂಲಕ ಕಸ ಹಾಕುವವರನ್ನು ಪತ್ತೆ ಮಾಡಲು ನಿರ್ಧರಿಸಲಾಗಿದೆ. ಕ್ಯಾಮರಾ ಕಂಡೂ ಕಸಹಾಕುವ ಚಾಳಿಯನ್ನ ಕೆಲವರು ಮುಂದುವರಿಸಿದ್ದು, ಯುವತಿಯೊಬ್ಬಳು ಇಲ್ಲಿ ಕಸ ತಂದು ಸುರಿದಿದ್ದಲ್ಲದೆ ಕ್ಯಾಮೆರಾ ಕಂಡು ಡ್ಯಾನ್ಸ್ ಮಾಡಿದ್ದಾಳೆ. ಈ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆ ಹಿಡಿದ, ಯುವತಿ ಮನೆ ಹುಡುಕಿ ಮಾರ್ಷಲ್ಸ್ 1 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.