ಯಾದಗಿರಿ, ನವೆಂಬರ್ 4: ಭೀಮಾನದಿಯ ನೀರು ತೀವ್ರವಾಗಿ ಕಲುಷಿತಗೊಂಡಿರುವುದು ‘ಟಿವಿ9’ ನಡೆಸಿದ ವಿಶೇಷ ರಿಯಾಲಿಟಿ ಚೆಕ್‌ನಲ್ಲಿ ಬಹಿರಂಗವಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ಸರ್ಕಾರಕ್ಕೆ ಇತ್ತೀಚೆಗೆ ವರದಿ ಸಲ್ಲಿಸಿದೆ. ಇದರಲ್ಲಿ ಭೀಮಾನದಿಯ ನೀರು ಡಿ ದರ್ಜೆಗೆ ಇಳಿದಿದ್ದು, ಕುಡಿಯುವುದಕ್ಕಾಗಲಿ, ಸ್ನಾನಕ್ಕಾಗಲಿ ಅಥವಾ ಇನ್ನಾವುದೇ ಬಳಕೆಗೆ ಯೋಗ್ಯವಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಈ ಒಳಗೊಂಡ TV9 ರಿಯಾಲಿಟಿ ಚೆಕ್ ನಡೆಸಿದೆ.
ಯಾದಗಿರಿ ನಗರದ ಜನರಿಗೆ ಜೀವನದಿಯಾಗಿರುವ ಭೀಮಾನದಿಗೆ ನಗರದ ಕೊಳಚೆ ನೀರು ನೇರವಾಗಿ ಸೇರುತ್ತಿರುವ ಮಾಲಿನ್ಯಕ್ಕೆ ಪ್ರಮುಖವಾಗಿದೆ. ಚರಂಡಿ ನೀರು ಹಳ್ಳಗಳ ಮೂಲಕ ಹರಿದು ನದಿಯನ್ನು ಸೇರುತ್ತಿದೆ. ಇದರಿಂದ ನದಿ ಸಂಪೂರ್ಣ ಕಲುಷಿತಗೊಂಡಿದ್ದರೂ, ಇದೇ ನೀರನ್ನು ಯಾದಗಿರಿ ನಗರದ ಜನರಿಗೆ ಕುಡಿಯಲು ಹಾಗೂ ನಿತ್ಯ ಬಳಕೆಗೆ ಸರಬರಾಜು ಮಾಡಲಾಗುತ್ತಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ, ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಭೀಮಾ ನದಿ ಸೇರುತ್ತಿವೆ ಮೃತದೇಹದ ಬಟ್ಟೆಗಳು!
ಭೀಮಾನದಿ ದಡದಲ್ಲಿರುವ ಸ್ಮಶಾನದಿಂದಲೂ ಮೃತದೇಹದ ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ನದಿಗೆ ಎಸೆಯಲಾಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿದರೂ, ಯಾದಗಿರಿ ಜನರು ಅನಿವಾರ್ಯವಾಗಿ ಕಲುಷಿತ ನೀರನ್ನೇ ಬಳಸುವ ಸ್ಥಿತಿ ಎದುರಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ