ಚಿಕ್ಕೋಡಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಮತ್ತೊಮ್ಮೆ ಫುಡ್ ಪಾಯ್ಸನಿಂಗ್
ಬೆಳಗಾವಿ, ನವೆಂಬರ್ 4: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (ಮೊರಾರ್ಜಿ ದೇಸಾಯಿ ವಸತಿ ಶಾಲೆ) ಮತ್ತೊಮ್ಮೆ ವಿಷಾಹಾರ ಪ್ರಕರಣ ಹೊರಬಿದ್ದಿದೆ. ಮಂಗಳವಾರ ರಾತ್ರಿ 12 ವಿದ್ಯಾರ್ಥಿಗಳು ಆಹಾರ ಸೇವಿಸಿದ ನಂತರ ತೀವ್ರ ಅಸ್ವಸ್ಥಗೊಂಡಿದ್ದು, ಕೂಡಲೇ ಚಿಕ್ಕೋಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರು
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳು ಸಧ್ಯ ಪ್ರಾಣಾಪಾಯದಿಂದ ಪಾರಾಗಿದ್ದರೆ, ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ವಸತಿ ಶಾಲೆಯಲ್ಲಿ ಈ ಹಿಂದೆಯೂ ಫುಡ್ ಪಾಯ್ಸನಿಂಗ್ ಆಗಿದೆ. ಆದರೆ ಮತ್ತೊಮ್ಮೆ ಇದೇ ಸ್ಥಿತಿ ಮರುಕಳಿಸುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದರಿಂದ ಮಕ್ಕಳಲ್ಲಿ ಆತಂಕ ಮನೆ ಮಾಡಿದೆ. ಜೀವಕ್ಕೆ ಏನಾದರೂ ಕುತ್ತು ಬಂದರೆ ಯಾರು ಜವಾಬ್ದಾರಿ ಎನ್ನುವ ಪ್ರಶ್ನೆ ಪಾಲಕರಿಗೆ ಕಾಡುತ್ತಿದೆ. ಇನ್ನೂ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೇಕಂತಲೇ ವಿಷ ಬೆರೆಸಿರುವ ಅನುಮಾನ
ಈ ಘಟನೆಗೆ ಹಾಜರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಶಾಲೆಯ ಅಡುಗೆ ಉದ್ದೇಶಪೂರ್ವಕವಾಗಿ ವಿಷ ಬೇರೆಯಿರುವ ಅನುಮಾನವಿದೆ. ಒಳಗಿನ ನೌಕರರ ಮೇಲೆ ಸಂಶಯವಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸಚಿವರ ಈ ಮಾತು ಪಾಲಕರಲ್ಲಿ ಇನ್ನಷ್ಟು ಆತಂಕ ಮೂಡಿಸಿದೆ.
ಈ ಹಿಂದೆಯೂ ದಾಖಲಾಗಿದ್ದ ವಿಷಾಹಾರ ಪ್ರಕರಣ
ಸೆಪ್ಟೆಂಬರ್ 12 ರಂದು ಇದೇ ವಸತಿ ಶಾಲೆಯಲ್ಲಿ ಫುಡ್ ಪಾಯಿಸನ್ ಆಗಿ ಒಂದಲ್ಲಾ ಎರಡಲ್ಲಾ ಒರಬ್ಬರಿ 120ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡಿದ್ದರು. ಹತ್ತಕ್ಕೂ ಅಧಿಕ ಮಕ್ಕಳು ಐಸಿಯುವರೆಗೂ ಹೋಗಿ ಬಳಿಕ ಗುಣಮುಖರಾಗಿ ವಾಪಸ್ ಆಗಿದ್ದರು. ಇದಾದ ಬಳಿಕ ಇಪ್ಪತ್ತು ದಿನದ ಭೇಟಿ ಹಿಂದೆ ನ್ಯಾಯಾಧೀಶರು ಕೂಡ ಇದೇ ವಸತಿ ಶಾಲೆಗೆ ಪರಿಶೀಲನೆ ನಡೆಸಿದ್ದರು. ಅದೇ ಸಂದರ್ಭದಲ್ಲಿ ಅಲ್ಲಿ ಅವ್ಯವಸ್ಥೆ ಕಂಡು ಗರಂ ಆಗಿ ಸಿಬ್ಬಂದಿ ಹಾಗೂ ವಾರ್ಡನ್ ಅವರನ್ನು ತರಾಟೆಗೆ ತೆಗೆದುಕೊಂಡರು ಈ ರೀತಿ ಆಗದಂತೆ ಎಚ್ಚರಿಕೆ ನೀಡಿದ್ದರು.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.