Headlines

ಬೆಂಗಳೂರಿಗರ ಮನಗೆದ್ದ ಹೃದಯಾಕಾರದ ಸಿಗ್ನಲ್; ಎಕ್ಸ್ ಪೋಸ್ಟ್ ವೈರಲ್

ಬೆಂಗಳೂರಿಗರ ಮನಗೆದ್ದ ಹೃದಯಾಕಾರದ ಸಿಗ್ನಲ್; ಎಕ್ಸ್ ಪೋಸ್ಟ್ ವೈರಲ್


ಬೆಂಗಳೂರುಗರ ಮನ ಗೆದ್ದ ಹೃದಯಾಕಾರದ ಸಿಗ್ನಲ್

ಬೆಂಗಳೂರು, ನವೆಂಬರ್ 4: ಬೆಂಗಳೂರಿಗರಿಗೆ ಟ್ರಾಫಿಕ್ ಸಮಸ್ಯೆ ಹೊಸತೇನಲ್ಲ. ದಿನದ ಹಲವು ಗಂಟೆಗಳನ್ನೇ ಸಿಗ್ನಲ್‌ನಲ್ಲಿ ಕಳೆಯುವ ಜನರು, ಈ ಸಮಸ್ಯೆ ಸಾಮಾಜಿಕ ಜಾಲತಾಣದಲ್ಲಿ ಎತ್ತಿ ಹಿಡಿಯುತ್ತಲೇ ಇದ್ದಾರೆ. ಇದರ ಮಧ್ಯೆ ಬೆಂಗಳೂರಿನ ನಿವಾಸಿಯೊಬ್ಬರು ಹೃದಯಾಕಾರದ ಕೆಂಪು ಸಿಗ್ನಲ್ ಫೋಟೋ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪೋಸ್ಟ್ ವೈರಲ್ ಆಗಿದೆ.

ವಿಶಿಷ್ಟ ಸಿಗ್ನಲ್‌ನ ಫೋಟೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ನಿವಾಸಿ,”ಬೆಂಗಳೂರಿನಲ್ಲಿ ಈ ಹೃದಯ ಆಕಾರದ ಸಿಗ್ನಲ್‌ಗಳನ್ನು ನೋಡಿದ್ದೀರಾ? ನಗರವನ್ನು ಇನ್ನಷ್ಟು ಜೀವಂತವಾಗಿಸಲು ಒಳ್ಳೆಯ ದಾರಿಯಾಗಿದೆ” ಎಂದು ಬರೆದಿದ್ದಾರೆ. ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪ್ರತಿದಿನ ಗಂಟೆಗಟ್ಟಲೆ ಕಾಲ ಟ್ರಾಫಿಕ್‌ನಲ್ಲಿ ಕಳೆಯುವ ಸಾಕಷ್ಟು ಪ್ರಯಾಣಿಕರನ್ನು ಆಕರ್ಷಿಸುತ್ತಿದೆ. ಒಬ್ಬ ಬಳಕೆದಾರರು, “ದಿನದ ಬಹುಪಾಲು ಸಮಯ ಸಿಗ್ನಲ್‌ಗಳಲ್ಲಿ ಕಳೆಯುವುದರಿಂದ ಇದು ತುಂಬಾ ಅರ್ಥಪೂರ್ಣವಾಗಿದೆ” ಎಂದು ಕಾಮೆಂಟ್ ಮಾಡಲಾಗಿದೆ. ಮತ್ತೊಬ್ಬರು, “ಒಂದು ವರ್ಷದ ಹಿಂದೆ ನಾನು ಇದನ್ನು ನೋಡಿದಾಗ, ನನಗೇ ಭ್ರಾಂತಿ ಎಂದು ಭಾವಿಸಿದ್ದೆ” ಎಂದು ವ್ಯಂಗ್ಯವಾಡಿದ್ದಾರೆ.

ವೈರಲ್ ಆಗಿರುವ ಎಕ್ಸ್ ಪೋಸ್ಟ್ ಇಲ್ಲಿದೆ

ಇದರೊಂದಿಗೆ ಬೆಂಗಳೂರು ಸದ್ದಿಲ್ಲದೆ ಸ್ಮಾರ್ಟ್ ಸಿಗ್ನಲ್ ವ್ಯವಸ್ಥೆಗಳನ್ನು ಹೊರತರುತ್ತಿದೆ. ಈ ಸಂಚಾರವನ್ನು ನಿರ್ವಹಿಸುವುದಲ್ಲದೆ ನೈಜ-ಸಮಯದ ಸಿಗ್ನಲ್ ಕೌಂಟ್‌ಡೌನ್‌ಗಳನ್ನು ಸಹ ನೋಡಲು ಅನುಕೂಲವಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 3:12 pm, ಮಂಗಳವಾರ, 4 ನವೆಂಬರ್ 25





Source link

Leave a Reply

Your email address will not be published. Required fields are marked *