Headlines

ರೈತರ ಪಾಲಿಗೆ ಕಹಿಯಾದ ಕಬ್ಬು: ದರ ನಿಗದಿಗೆ FRP ನೆಪ ಹೇಳಿ ಕೇಂದ್ರದೆಡೆಗೆ ಬೊಟ್ಟು ಮಾಡಿದ ಕಾರ್ಖಾನೆಗಳು

ರೈತರ ಪಾಲಿಗೆ ಕಹಿಯಾದ ಕಬ್ಬು: ದರ ನಿಗದಿಗೆ FRP ನೆಪ ಹೇಳಿ ಕೇಂದ್ರದೆಡೆಗೆ ಬೊಟ್ಟು ಮಾಡಿದ ಕಾರ್ಖಾನೆಗಳು


ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭಾಗಿ

ಬೆಳಗಾವಿ, ನವೆಂಬರ್ 04: ಕಬ್ಬು ಬೆಳೆಗಾರರು (ಕಬ್ಬು ರೈತರು) ಹೋರಾಟ ತೀವ್ರ ಸ್ವರೂಪ ಹೊಂದಿದೆ. ಪ್ರತಿ ಟನ್ ಕಬ್ಬಿಗೆ ಮೂರುವರೆ ಸಾವಿರ ರೂ. ಬೆಲೆ ನಿಗದಿ ಮಾಡುವಂತೆ ರೈತರು ಸೂಚಿಸಿದ್ದಾರೆ. ಆದರೆ ಕೇಂದ್ರ ಸರ್ಕಾರದ (ಕೇಂದ್ರ ಸರ್ಕಾರ) ಎಫ್‌ಆರ್‌ಪಿ (ನ್ಯಾಯಸಮ್ಮತ ದರ) ಪ್ರಕಾರ ದರ ನಿಗದಿಯಾಗುತ್ತಿದೆ ಎನ್ನುತ್ತಿರುವ ಸಕ್ಕರೆ ಕಾರ್ಖಾನೆಗಳು ಆ ಮೂಲಕ ದ್ವಂದ್ವ ನೀತಿ ಅನುಸರಿಸುತ್ತಿವೆ. ಸಸ್ಯ ಕಾರ್ಖಾನೆಗಳು ಟನ್‌ಗೆ 2,700 ರಿಂದ 3,200 ರೂ. ಕೊಡಲು ಮುಂದಾಗಿದ್ದು, 3500 ರೂ. ನೀಡಲೇಬೇಕೆಂದು ಬೆಳೆಗಾರರ ​​ಪಟ್ಟು ಹಿಡಿದಿದ್ದಾರೆ.

ಕೇಂದ್ರ ಸರ್ಕಾರ ಕಬ್ಬಿಗೆ ಎಫ್ ಆರ್ಪಿ ನ್ಯಾಯಸಮ್ಮತ ದರ ನಿಗದಿ ಮಾಡಿದೆ. 10.25 ಶೇಕಡಾದಷ್ಟು ಇಳುವರಿ ಇರುವ ಕಬ್ಬಿಗೆ ಟನ್‌ಗೆ 3,550 ರೂ. ನಿಗದಿ ಮಾಡಿದೆ. ಅದರ ಆಧಾರದ ಮೇಲೆ ಸಕ್ಕರೆ ಕಾರ್ಖಾನೆಗಳ ದರ. ಆದರೆ ಕಾರ್ಖಾನೆಗಳು 2,700 ರಿಂದ 3,200 ರೂ. ಕೊಡಲು ಮುಂದಾಗಿವೆ.

ಇದನ್ನೂ ಓದಿ: ಬೆಳಗಾವಿ: ಕಬ್ಬು ಬೆಳೆಗಾರರ ​​ಹೋರಾಟ ತೀವ್ರ, ಪ್ರಮುಖ ಭಾಗದಲ್ಲಿ ಶಾಲೆ-ಕಾಲೇಜುಗಳಿಗೆ ರಜೆ

ಜೊತೆಗೆ ಕಬ್ಬಿನ ಕಟಾವು ಮತ್ತು ಸಾಗಣೆ ವೆಚ್ಚ ಕಡಿತ ಮಾಡಿ ದರ ನಿಗದಿ ಮಾಡಿವೆ. ಹೀಗಾಗಿ ಒಂದು ಟನ್ ಕಬ್ಬಿನ ದರ ಮತ್ತಷ್ಟು ಕಡಿಮೆಯಾಗುತ್ತಿದೆ. ಇದರ ಜೊತೆ ರಾಜ್ಯದ ಹಲವು ಕಾರ್ಖಾನೆಗಳು ಬಾಕಿ ಹಣವನ್ನೂ ಕಟ್ಟಿಲ್ಲ. ಕಾರ್ಖಾನೆಗಳು ಈ ನಡೆಗಳೇ ರೈತರ ಆಕ್ರೋಶಕ್ಕೆ ಕಾರಣ. ಟನ್ ಕಬ್ಬಿಗೆ 3500 ರೂ ನೀಡಲೇಬೇಕೆಂದು ಕಬ್ಬು ಬೆಳೆಗಾರರ ​​ಪಟ್ಟು ಹಿಡಿದಿದ್ದಾರೆ.

ಕರ್ನಾಟಕದಲ್ಲಿ ಹೀಗೆ ಬೆಲೆ ಕಡಿಮೆಯಾಗುತ್ತಿದೆ. ಆದರೆ ನೆರೆಯ ಮಹಾರಾಷ್ಟ್ರದಲ್ಲಿ ಪ್ರತಿ ಟನ್ ಕಬ್ಬಿಗೆ 300 ರಿಂದ 400 ರೂ. ಹೆಚ್ಚಿಗೆ ಸಿಗುತ್ತಿದೆ. ಇದ್ರಿಂದ ರಾಜ್ಯದ ಕಬ್ಬು ನೆರೆಯ ಮಹಾರಾಷ್ಟ್ರಕ್ಕೆ ಹೋಗುತ್ತಿದೆ. ಅಂದಾಜಿನ ಪ್ರಕಾರ ಬೆಳಗಾವಿ, ಬಾಗಲಕೋಟೆ ಸೇರಿದಂತೆ ಮಹಾರಾಷ್ಟ್ರದ ಗಡಿಯಲ್ಲಿರುವ ರಾಜ್ಯ ಜಿಲ್ಲೆಗಳಿಂದ 10 ಲಕ್ಷಕ್ಕೂ ಹೆಚ್ಚು ಟನ್ ಕಬ್ಬು ರವಾನೆಯಾಗುತ್ತಿದೆ.

ದರ ನಿಗದಿ ಮಾಡದಿದ್ದರೆ ಇಡೀ ರಾಜ್ಯಕ್ಕೆ ಕಿಚ್ಚು ಹತ್ತುತ್ತದೆ: ಬಿವೈ ವಿಜಯೇಂದ್ರ

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ, ಸಕ್ಕರೆ ಕಾರ್ಖಾನೆಗಳ ಪರ ವಕಾಲತ್ತು ವಹಿಸಿಕೊಂಡು ಬಂದಿಲ್ಲ. ರೈತನ ಬೆನ್ನೆಲುಬಾಗಿ ನಿಲ್ಲುವುದು ಪ್ರತಿಯೊಬ್ಬ ಪಕ್ಷದ ಕರ್ತವ್ಯ. ರೈತರ ಸ್ವಾಭಿಮಾನಕ್ಕೆ ಧಕ್ಕೆ ತಂದ್ರೇ ದೇವರು ಒಳ್ಳೆಯದು ಮಾಡಲ್ಲ. ಆರು ದಿನದಿಂದ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರೂ ಮುಖ್ಯಮಂತ್ರಿ, ಸಚಿವರಿಗೆ ನಿಮ್ಮ ಬಳಿ ಬರಲು ಸಮಯ ಸಿಕ್ಕಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ವಿಕೋಪಕ್ಕೆ ತಿರಗಿದ ಕಬ್ಬು ಬೆಳೆಗಾರರ ​​ಹೋರಾಟ: ಕಿಡಿಗೇಡಿಗಳಿಂದ ಕಲ್ಲು ತೂರಾಟ

ಇಂದು ಸಂಜೆ 5 ಗಂಟೆಯೊಳಗೆ ಅಧಿಕಾರಿಗಳು ಬರ್ತಾರೋ, ಉಸ್ತುವಾರಿ ಸಚಿವರು ಬರ್ತಾರೋ, ಸಿಎಂ ಬರ್ತಾರೋ ಗೊತ್ತಿಲ್ಲ. ಅವರು ಬಂದು ದರ ನಿಗದಿ ಮಾಡುವವರೆಗೂ ಇಲ್ಲೇ ಇರುತ್ತೇನೆ. ನಾಳೆ ನನ್ನ ಹುಟ್ಟು ಹಬ್ಬ ಬೆಂಗಳೂರಿಗೆ ಹೋಗಬೇಕಿತ್ತು. ಆದರೆ ದರ ನಿಗದಿ ಆಗುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ. ಕಬ್ಬಿಗೆ ದರ ನಿಗದಿ ಮಾಡದಿದ್ದರೆ ಇಡೀ ರಾಜ್ಯಕ್ಕೆ ಕಿಚ್ಚು ಹತ್ತುತ್ತದೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *