’ಬ್ರಹ್ಮಗಂಟು’ ಮತ್ತು ‘ನಾ ನಿನ್ನ ಬಿಡಲಾರೆ’ ಧಾರಾವಾಹಿಗಳ ಮಹಾಸಂಗಮದಲ್ಲಿ, ದೀಪಾ ಮತ್ತು ಚಿರು ಅವರ ಪ್ರವೇಶದಿಂದ ದುರ್ಗಾ ಮತ್ತು ಶರತ್ ಮದುವೆಗೆ ಇದ್ದ ಅಡ್ಡಿ ನಿವಾರಣೆಯಾಗುತ್ತದೆ. ದುರ್ಗಾಳ ಮಹತ್ವವನ್ನು ಮಗಳು ಹಿತಾಗೆ ಮನವರಿಕೆ ಮಾಡಲು ದೀಪಾ ಮಾಡಿದ ಯೋಜನೆ ಎನಾಗತ್ತೆ? ಕುತೂಹಲದ ತಿರುವು…

ಒಂದೆಡೆ ಬ್ರಹ್ಮಗಂಟು, ಇನ್ನೊಂದೆಡೆ ನಾ ನಿನ್ನ ಬಿಡಲಾರೆ. ಎರಡೂ ಸೀರಿಯಲ್ಗಳು ಭಿನ್ನ ಭಿನ್ನ ಕಥಾ ಹಂದರ ಹೊಂದಿದ್ದರೂ ಇಲ್ಲಿ ದೀಪಾ ಮತ್ತು ಅಲ್ಲಿ ದುರ್ಗಾ ಪಾಡು ಒಂದರ್ಥದಲ್ಲಿ ಒಂದೇ. ಮದುವೆಯಾದರೂ ಗಂಡನ ಜೊತೆ ಸಂಬಂಧ ಬೆಳೆಸಿಕೊಳ್ಳದ ನಾಯಕಿಯರು ಇವರು.

ಇತ್ತ ದೀಪಾ ಚಿರುವನ್ನು ಒಲಿಸಿಕೊಳ್ಳಲು ನೋಡುತ್ತಿದ್ದರೆ, ಅತ್ತ ದುರ್ಗಾಳಿಗೆ ಅಂಬಿಕಾ ಮಗಳು ಹಿತಾನೇ ಪ್ರಪಂಚ. ಆದರೆ ಹಿತಾಗೆ ದುರ್ಗಾ ಬೇಕಾದರೂ ಆಕೆಯನ್ನು ಅಮ್ಮ ಎಂದು ಒಪ್ಪಿಕೊಳ್ಳಲು ಆಕೆ ತಯಾರಿಲ್ಲ. ಅವಳು ಫ್ರೆಂಡ್ ಅಷ್ಟೇ ಹಿತಾಗೆ.

ಇದೀಗ ಶರತ್ ಮತ್ತು ದುರ್ಗಾ ಮರು ಮದುವೆಯ ಬಗ್ಗೆ ಮಾತುಕತೆ ನಡೆಯುತ್ತಿದ್ದರೂ ಹಿತಾ ಅದನ್ನು ಒಪ್ಪುತ್ತಿಲ್ಲ. ಇದೇ ವೇಳೆ Naa Ninna Bidalaare ಸೀರಿಯಲ್ಗೆ ಬ್ರಹ್ಮಗಂಟು ದೀಪಾ ಮತ್ತು ಚಿರು ಎಂಟ್ರಿಯಾಗಿದೆ.

ಸುಕನ್ಯಾಳ ಕುತಂತ್ರದಿಂದ ಚಿರು ಮತ್ತು ದೀಪಾಳ ಜೀವಕ್ಕೆ ಅಪಾಯವಿದ್ದಾಗ, ಶರತ್ ಬಂದು ರಕ್ಷಿಸಿದ್ದಾನೆ. ಈ ಮೂಲಕ ಎರಡೂ ಸೀರಿಯಲ್ನ ಮಹಾಸಂಗಮ ನಡೆಯುತ್ತಿದೆ.

ಇದೀಗ ಹಿತಾಳ ಬಾಳಿನಲ್ಲಿ ದುರ್ಗಾ ಎಷ್ಟು ಮಹತ್ವದ ಪಾತ್ರ ವಹಿಸುತ್ತಾಳೆ ಎಂದು ತಿಳಿಸಲು ದೀಪಾ ಮಾಡಿದ ಪ್ಲ್ಯಾನ್ ಸಕ್ಸಸ್ ಆಗಿದೆ. ದುರ್ಗಾ ಮನೆ ಬಿಟ್ಟು ಹೋಗುತ್ತಿದ್ದಾಳೆ. ಅವಳು ಈ ಮನೆಯಲ್ಲಿ ಇರಬೇಕು ಎಂದರೆ ನಿನ್ನ ಅಪ್ಪನನ್ನು ಮದುವೆಯಾಗಬೇಕು. ಆದರೆ ನಿನಗೆ ಅದು ಇಷ್ಟವಿಲ್ಲವಲ್ಲ. ಅದಕ್ಕಾಗಿಯೇ ಮನೆ ಬಿಟ್ಟು ಹೋಗುತ್ತಾಳೆ ಎಂದಿದ್ದಾಳೆ ದೀಪಾ.

ಇದನ್ನು ಕೇಳಿ ಹಿತಾಗೆ ಶಾಕ್ ಆಗಿದೆ. ತಮ್ಮ ಅಮ್ಮ ಅಂಬಿಕಾ ಮಾಡುವ ಎಲ್ಲಾ ಕಾರ್ಯಗಳನ್ನೂ ದುರ್ಗಾ ಮಾಡುತ್ತಿರುವುದನ್ನು ನೆನಪಿಸಿಕೊಂಡ ಆಕೆ ದುರ್ಗಾ ಬೇಕು ಎಂದು ಓಡಿ ಹೋಗಿ ಆಕೆಯನ್ನು ತಬ್ಬಿಕೊಂಡಿದ್ದಾಳೆ. ಶರತ್ ಮತ್ತು ದುರ್ಗಾಳ ಮದುವೆಗೆ ಒಪ್ಪಿಗೆ ಕೊಟ್ಟಿದ್ದಾಳೆ.

ಈ ರೀತಿಯಲ್ಲಿ ದೀಪಾ ಮತ್ತು ಚಿರು ಸೇರಿ ಪವಾಡವನ್ನೇ ಮಾಡಿದ್ದಾರೆ. ಎರಡೂ ಸೀರಿಯಲ್ಗಳ ಮಹಾಸಂಗಮ ವೀಕ್ಷಕರಿಗೆ ಆನಂದವನ್ನು ನೀಡುತ್ತಿದೆ.

ಪ್ರೊಮೋ ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Source link
Brahmagantu ಬಿಟ್ಟು 'ನಾ ನಿನ್ನ ಬಿಡಲಾರೆ'ಗೆ ಎಂಟ್ರಿ ಕೊಟ್ಟ ದೀಪಾ-ಚಿರು: ಊಹಿಸಲಾಗದ ಪವಾಡ ನಡೆದೇ ಹೋಯ್ತು!